ನವದೆಹಲಿ : ‘ಹರ್ ಘರ್ ತಿರಂಗಾ’ ಬೈಕ್ ರ್ಯಾಲಿಯಲ್ಲಿ ಹೆಲ್ಮೆಟ್ ಧರಿಸದಿದ್ದಕ್ಕಾಗಿ ಬಿಜೆಪಿ ಸಂಸದ ಮನೋಜ್ ತಿವಾರಿ ಅವರಿಗೆ ದೆಹಲಿ ಟ್ರಾಫಿಕ್ ಪೊಲೀಸರು ದಂಡ ವಿಧಿಸಿದ್ದಾರೆ.
ಘಟನೆಯ ಬಗ್ಗೆ ಟ್ವಿಟರ್ನಲ್ಲಿ ಪೋಸ್ಟ್ ಮಾಡಿರುವ ಸಂಸದ ತಿವಾರಿ, ಮೋಟಾರ್ಸೈಕಲ್ ಸವಾರಿ ಮಾಡುವಾಗ ಹೆಲ್ಮೆಟ್ ಧರಿಸದಿದ್ದಕ್ಕಾಗಿ ಕ್ಷಮೆಯಾಚಿಸುತ್ತಿದ್ದೇನೆ. ದ್ವಿಚಕ್ರ ವಾಹನ ಸವಾರಿ ಮಾಡುವಾಗ ಸುರಕ್ಷತಾ ಪ್ರೋಟೋಕಾಲ್ಗಳನ್ನು ನಿರ್ಲಕ್ಷಿಸಬೇಡಿ ಎಂದು ಬಿಜೆಪಿ ನಾಯಕ ಒತ್ತಾಯಿಸಿದ್ದಾರೆ.ದಂಡವನ್ನು ಪಾವತಿಸುವುದಾಗಿ ತಿವಾರಿ ತಮ್ಮ ಟ್ವೀಟ್ನಲ್ಲಿ ತಿಳಿಸಿದ್ದಾರೆ.
Very Sorry for not wearing helmet today. I will pay the challan @dtptraffic 🙏 .. clear number plate of vehicle is shown in this photo and location was Red Fort.
आप सब से निवेदन है कि बिना हेल्मेट two wheeler नही चलायें #DriveSafe family and friends need you 🙏 pic.twitter.com/MrhEbcwsxZ— Manoj Tiwari 🇮🇳 (@ManojTiwariMP) August 3, 2022
ಬಿಜೆಪಿ ನಾಯಕ ಹೆಲ್ಮೆಟ್, ಪರವಾನಗಿ ಮತ್ತು ಮಾಲಿನ್ಯ ಮತ್ತು ನೋಂದಣಿ ಪ್ರಮಾಣಪತ್ರವಿಲ್ಲದೆ ಮೋಟಾರ್ಸೈಕಲ್ ಚಲಾಯಿಸುತ್ತಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿತ್ತು.
‘ಹರ್ ಘರ್ ತಿರಂಗ’ ಅಭಿಯಾನವು ‘ಆಜಾದಿ ಕಾ ಅಮೃತ್ ಮಹೋತ್ಸವ’ದ ಭಾಗವಾಗಿದ್ದು, ಭಾರತದ ಸ್ವಾತಂತ್ರ್ಯದ 75 ನೇ ವರ್ಷವನ್ನು ಗುರುತಿಸಲು ಮನೆಯಲ್ಲಿ ‘ತ್ರಿವರ್ಣ’ ಧ್ವಜವನ್ನು ಹಾರಿಸಲು ಜನರನ್ನು ಪ್ರೋತ್ಸಾಹಿಸುತ್ತದೆ.
‘ಆಜಾದಿ ಕಾ ಅಮೃತ್ ಮಹೋತ್ಸವ’ ಅಂಗವಾಗಿ ಸ್ವಾತಂತ್ರ್ಯ ಹೋರಾಟಗಾರರಿಗೆ ಶ್ರದ್ಧಾಂಜಲಿ ಸಲ್ಲಿಸಲು ಬುಧವಾರ ದೆಹಲಿಯ ಕೆಂಪು ಕೋಟೆಯಿಂದ ಬೈಕ್ ರ್ಯಾಲಿ ಆಯೋಜನೆ ಮಾಡಲಾಗಿತ್ತು. ರ್ಯಾಲಿಯಲ್ಲಿ ಕೇಂದ್ರ ಸಚಿವರು ಮತ್ತು ಯುವ ಸಂಸದರು ಸೇರಿದಂತೆ ಹಲವಾರು ಸಂಸದರು ಭಾಗವಹಿಸಿದ್ದರು.