ಹೈದರಾಬಾದ್: ತೆಲಂಗಾಣ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಜ್ಞಾನೇಂದ್ರ ಪ್ರಸಾದ್(Gnanendra Prasad) ಅವರು ಸೋಮವಾರ ಮಿಯಾಪುರದ ಆಲ್ವಿನ್ ಕಾಲೋನಿಯಲ್ಲಿರುವ ತಮ್ಮ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಸೆರ್ಲಿಂಗಂಪಲ್ಲಿ ಕ್ಷೇತ್ರದ ಪಕ್ಷದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ಜ್ಞಾನೇಂದ್ರ ತಮ್ಮ ನಿವಾಸದಲ್ಲಿನ ಸೀಲಿಂಗ್ ಫ್ಯಾನ್ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಆಪ್ತ ಸಹಾಯಕರು ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಜ್ಞಾನೇಂದ್ರರ ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಆತ್ಮಹತ್ಯೆ ಪತ್ರವೂ ಪತ್ತೆಯಾಗಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಖಚಿತಪಡಿಸಿದ್ದಾರೆ.
ನಿನ್ನೆ ಬೆಳಿಗ್ಗೆ ಪ್ರಸಾದ್, ನಾನು ಸ್ವಲ್ಪ ನಿದ್ರೆ ಮಾಡಬೇಕು. ಯಾರೂ ಕೂಡ ನನಗೆ ನೀಡಬೇಡಿ ಎಂದು ಪಿಎಗೆ ಹೇಳಿದ್ದರು. ಎಷ್ಟೊತ್ತಾದರೂ ಪ್ರಸಾದ್ ಹೊರಗೆ ಬರದ ಕಾರಣ, ಪಿಎ ಉಪಹಾರ ನೀಡಲು ಕೊಠಡಿಗೆ ಹೋದಾಗ ಬಾಗಿಲು ಬಡಿದ. ಯಾವುದೇ ಪ್ರತಿಕ್ರಿಯೆ ಬಾರದೇ ಇದ್ದುದರಿಂದ ಪಿಎ ಕಿಟಕಿಯ ಗಾಜುಗಳನ್ನು ಒಡೆದು ನೋಡಿದಾಗ ಪ್ರಸಾದ್ ನೇಣು ಬಿಗಿದುಕೊಂಡಿರುವುದು ಕಂಡು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಸಾದ್ ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಮೂಲಗಳ ಪ್ರಕಾರ, ಪ್ರಸಾದ್ ಕಳೆದ ಕೆಲವು ದಿನಗಳಿಂದ ಅಸಮಾಧಾನಗೊಂಡಿದ್ದರು ಎನ್ನಲಾಗಿದೆ.
Rain in Karnataka : ರಾಜ್ಯದಲ್ಲಿ ಇನ್ನೂ ಎರಡು ದಿನ ಭಾರೀ ಮಳೆ : ಈ ಜಿಲ್ಲೆಗಳಲ್ಲಿ `ಆರೆಂಜ್-ಯೆಲ್ಲೋ ಅಲರ್ಟ್’ ಘೋಷಣೆ
BIGG NEWS : ರಾಜ್ಯದ 160 ಗ್ರಾಮಗಳ ಪ್ರವಾಹ ಸಂತ್ರಸ್ತರಿಗೆ `ಕಾಳಜಿ ಕಿಟ್’ : ಕಂದಾಯ ಸಚಿವ ಆರ್. ಅಶೋಕ್