ಹಾಸನ: ಬಿಜೆಪಿ ಮುಖಂಡ, ವಕೀಲ ದೇವರಾಜೇಗೌಡ ವಿರುದ್ಧ ಮಹಿಳೆಯ ಮೇಲೆ ಅತ್ಯಾಚಾರ ಆರೋಪ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಹೊಳೆನರಸೀಪುರ ಠಾಣೆ ಪೊಲೀಸ್ರು ಬಂಧಿಸಿ ವೈದಕೀಯ ತಪಾಸಣೆ ನಡೆಸಿದರು. ಇದೀಗ ಹೊಳೆನರಸೀಪುರ ಪೊಲೀಸರು ದೇವರಾಜೇಗೌಡನನ್ನು ಜಡ್ಜ್ ಮನೆಯಲ್ಲಿ ಹಾಜರುಪಡಿಸಿದ್ದಾರೆ.
ಹಾಸನ ಜಿಲ್ಲೆಯ ಹೊಳೆನರಸಿಪುರದ ನ್ಯಾಯಾಧೀಶರ ಮನೆಯಲ್ಲಿ ಇದೀಗ ಪೊಲೀಸರು ದೇವರಾಜೇಗೌಡನನ್ನು ಹಾಜರುಪಡಿಸಿದ್ದು, ಪ್ರಿನ್ಸಿಪಲ್ ಸಿಜೆ ಮತ್ತು ಜೆ ಎಂ ಎಫ್ ಸಿ ನ್ಯಾಯಾಧೀಶ ಸಿದ್ಧರಾಮ ಎಸ್ ಅವರ ಮನೆಯಲ್ಲಿ ಬಂಧಿತ ದೇವರಾಜೇಗೌಡನನ್ನು ಹಾಜರುಪಡಿಸಲಾಗಿದೆ.ಏಪ್ರಿಲ್.1ರಂದು ವಕೀಲ ದೇವರಾಜೇಗೌಡ ವಿರುದ್ಧ ಹಾಸನದ ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ಮಹಿಳೆಯೊಬ್ಬರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬುದಾಗಿ ದೂರು ನೀಡಿದ್ದರು. ಈ ದೂರಿನ ಹಿನ್ನಲೆಯಲ್ಲಿ ವಕೀಲ ದೇವರಾಜೇಗೌಡ ವಿರುದ್ಧ ಎಫ್ಐಆರ್ ದಾಖಲಾಗಿತ್ತು.
ನಿನ್ನೆ ಈ ಪ್ರಕರಣದಲ್ಲಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಗ್ರಾಮಾಂತರ ಠಾಣೆಯ ಪೊಲೀಸರು ವಕೀಲ ದೇವರಾಜೇಗೌಡ ಅವರನ್ನು ವಶಕ್ಕೆ ಪಡೆದಿದ್ದರು. ಆ ಬಳಿಕ ಹೊಳೆನರಸೀಪುರ ಠಾಣೆಯ ಪೊಲೀಸರಿಗೆ ಹಸ್ತಾಂತರಿಸಿದ್ದರು.ನಂತರ ಹೊಳೆನರಸೀಪುರ ಠಾಣೆ ಪೊಲೀಸರು ಅವರನ್ನು ವೈದ್ಯಕೀಯ ತಪಾಸನೆಗೆ ಎಂದು ತಾಲೂಕು ಆಸ್ಪತ್ರೆಗೆ ಕರೆದುಕೊಂಡು ಹೋದರು. ವೈದ್ಯಕೀಯ ತಪಾಸಣೆಯ ನಂತರ ಇದೀಗ ದೇವರಾಜೇಗೌಡನನ್ನು ಪೊಲೀಸರು ಜಡ್ಜ್ ಮುಂದೆ ಹಾಜರುಪಡಿಸಿದ್ದಾರೆ.