ಬೆಂಗಳೂರು: ಮುಡಾ ಹಗರಣ ಸಂಬಂಧ ನನ್ನ ವ್ಯಕ್ತಿತ್ವಕ್ಕೆ ಬಿಜೆಪಿ-ಜೆಡಿಎಸ್ ಮಸಿ ಬಳಿಯಲು ಯತ್ನಿಸುತ್ತಿದ್ದು, ಯಾವುದೇ ಆಧಾರಗಳಿಲ್ಲದೇ ಆರೋಪ ಮಾಡುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ಇಂದು ಸಿದ್ದರಾಮಯ್ಯ ಅವರು ಪತ್ರಿಕಾಗೋಷ್ಠಿಯನ್ನು ನಡೆಸಿ ಮಾತನಾಡಿದರು. ಇದೇ ವೇಳೆ ಅವರು ಮಾತನಾಡಿ ಬಿಜಪಿ ಜೆಡಿಎಸ್ ಸದನದಲ್ಲಿ ಕಾನೂನು ಬಾಹಿರ ನಿಯಮದ ಅಡಿಯಲ್ಲಿ ಚರ್ಚೆಗೆ ಅವಕಾಶ ಕೋರಿತ್ತು ಅಂತ ಹೇಳಿದರು. ಇನ್ನೂ ಲೋಕಸಭೆಯಲ್ಲಿ ಬಿಜೆಪಿ ಕರ್ನಾಟಕದಲ್ಲಿ ಕಡಿಮೆ ಸೀಟು ಗಳಿಸಿದ್ದು, ಇದನ್ನು ಸಹಿಸಿಕೊಳ್ಳುವುದಕ್ಕೆ ಆಗುತ್ತಿಲ್ಲ ಅಂತ ತಿಳಿಸಿದರು. ಯಾವುದೇ ಆಧಾರಗಳಿಲ್ಲದೇ ಇವರುಗಳು ಆರೋಪ ಮಾಡುತ್ತಿದ್ದಾರೆ ಅಂತ ತಿಳಿಸಿದರು. ಸಿಎಂಗೆ ಕಪ್ಪು ಚುಕ್ಕೆ ತರುವುದಕ್ಕೆ ಇವರೆಲ್ಲ ಪಿತೂರಿ ನಡೆಸುತ್ತಿದ್ದಾರೆ ಅಂಥ ತಿಳಿಸಿದರು.
ಇನ್ನೂ ತಮ್ಮ ವಿರುದ್ದ ಕೇಳಿ ಬಂದಿರುವ ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ಮಾಹಿತಿ ನೀಡಿದ ಅವರು ಪಿಟಿಸಿಎಲ್ ಕಾಯ್ದೆ ಅನ್ವಯ ಜಮೀನು ಇಲ್ಲ, ಇದು ಪಿತ್ರರ್ಜಿತ ಆಸ್ತಿಯಾಗಿದ್ದು, ಈ ಜಮೀನ ಮಾಲೀಕ ನಿಂಗ ಬಿನ್ ಜವರ 2-08-1935ರಲ್ಲಿ ಮೈಸೂರು ತಾಲೂಕು ಕಚೇರಿಗೆ ಒಂದು ಅರ್ಜಿಯನ್ನು ನೀಡಿದ್ದಾರೆ ಅದರ ಅನ್ವಯ ಹರಾಜು ನಡೆಯುತ್ತದೆ. ಆಗ ಹರಾಜಿನ ಮೊತ್ತು ಮೂರು ರೂ ಆಗಿರುತ್ತದೆ. ಹರಾಜಿನಲ್ಲಿ ಒಂದು ರೂಗೆ ನಿಂಗ ಬಿನ್ ಜವರ 03-10-1935 ರಂದು ಪಡೆದುಕೊಂಡಿರುತ್ತಾರೆ. ಇದು ಹರಾಜಿನಲ್ಲಿ ಬಂದಿರುವ ಆಸ್ತಿಯಾಗಿದ್ದು, ಇದು ಪಿತ್ರರ್ಜಿತ ಆಸ್ತಿಯಾಗಿದೆ ಅಂತ ತಿಳಿಸಿದರು. ಇದು ಪಿಟಿಸಿಎಲ್ ಕಾಯ್ದೆಗೆ ಒಳಪಡುವುದಿಲ್ಲ ಅಂತ ತಿಳಿಸಿದರು.