ಬೆಂಗಳೂರು : ಮುಡಾಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ರಾಜೀನಾಮೆಗಾಗಿ ಬಿಜೆಪಿ-ಜೆಡಿಎಸ್ ನಿಂದ ಪಾದಯಾತ್ರೆ ನಡೆಸಲಾಗುತ್ತಿದೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದ್ದಾರೆ.
ಮುಡಾ ಹಗರಣ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ವಿರುದ್ಧ ಬಿಜೆಪಿ-ಜೆಡಿಎಸ್ ಪಾದಯಾತ್ರೆ ಆರಂಭವಾಗಿದೆ. ಪಾದಯಾತ್ರೆಯಲ್ಲಿ ಮೈಸೂರು ಚಲೋ ಸಮಾವೇಶದಲ್ಲಿ ಮಾತನಾಡಿದ ಅವರು,ಸಿಎಂ ಸಿದ್ದರಾಮಯ್ಯನವರೇ, ಬರೀ ನೋಟಿಸ್ ಕೊಟ್ಟಿದ್ದಕ್ಕೆ ನಡುಗುತ್ತಿದ್ದಿರಲ್ಲಾ.! ಇನ್ನೂ ಅನುಮತಿ ಕೊಟ್ಟರೆ ನಿಮ್ಮ ಕತೆ ಏನಾಗಬಹುದು.! ಭ್ರಷ್ಟಾಚಾರದ ವಿರುದ್ಧ ನಡೆಯುತ್ತಿರುವ ದೊಡ್ಡ ಹೋರಾಟವಿದು. ಮುಖ್ಯಮಂತ್ರಿಗಳ ರಾಜೀನಾಮೆಗಾಗಿ ನಡೆಯುತ್ತಿರುವ ಪಾದಯಾತ್ರೆ ಇದು ಎಂದು ಹೇಳಿದ್ದಾರೆ.
https://twitter.com/i/broadcasts/1OwxWNRYjrmJQ