ಬೆಂಗಳೂರು : ನಾಳೆ ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಕುರಿತಾಗಿ ಈಗಾಗಲೇ ಹಲವು ರಾಜ್ಯಗಳಲ್ಲಿ ಅಲ್ಲಿನ ಸರ್ಕಾರಗಳು ರಜೆ ಘೋಷಿಸಿದ್ದು ಕರ್ನಾಟಕದಲ್ಲೂ ಕೂಡ ರಜೆ ಘೋಷಿಸಿ ಎಂದು ಬಿಜೆಪಿ ಹಾಗೂ ಜೆಡಿಎಸ್ ನಾಯಕರು ರಾಜ್ಯ ಸರ್ಕಾರಕ್ಕೆ ಆಗ್ರಹಿಸುತ್ತಿದ್ದಾರೆ.
ಈ ಕುರಿತಾಗಿ ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಅವರು ಮಾತನಾಡಿ, ರಾಮ ದರ್ಶನ ವತಿಯಿಂದ ಏನು ಆಹ್ವಾನ ಇದೆ
ರಾಮನ ಪ್ರಾಣ ಪ್ರತಿಷ್ಠಾಪನ ಕಾರ್ಯಕ್ರಮ ಇದೆ ಅದರಲ್ಲಿ ನಾವೆಲ್ಲರೂ ಭಾಗವಹಿಸುತ್ತಿದ್ದೇವೆ. ಭಾಗವಹಿಸಿ ದೇವರ ದರ್ಶನ ಪಡೆದು ಬರುತ್ತೇವೆ. ಇಲ್ಲಿ ಪಕ್ಷಗಳು ಮುಖ್ಯವಲ್ಲ ನಾನು ಸರ್ಕಾರಕ್ಕೆ ನಾಳೆ ರಜೆ ಘೋಷಣೆ ಮಾಡಿ ಎಂದು ಈಗಲೂ ಮನವಿ ಮಾಡುತ್ತೇನೆ ಎಂದರು.
ನಾಡಿನ ಜನತೆ ಅತ್ಯಂತ ಸಂಭ್ರಮದಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ಕಾಣುತ್ತಿದ್ದೇವೆ. ಇವತ್ತು ಕೇಂದ್ರ ಸರ್ಕಾರ ವತಿಯಿಂದಲೂ ಕೂಡ ಮಧ್ಯಾಹ್ನದವರೆಗೆ ರಜೆ ಘೋಷಣೆ ಮಾಡಿದ್ದಾರೆ. ಹಲವಾರು ರಾಜ್ಯಗಳಲ್ಲಿ ಕೂಡ ರಜೆಯನ್ನು ಘೋಷಣೆ ಮಾಡಲಾಗಿದೆ ಈ ಕುರಿತಾಗಿ ರಾಜ್ಯ ಸರ್ಕಾರ ಕೂಡ ನಾನು ಒತ್ತಾಯ ಮಾಡುತ್ತಿದ್ದೇನೆ ಎಂದು ತಿಳಿಸಿದರು.
ಇದು ದೇಶದ ಒಂದು ಹಬ್ಬವಾಗಿದೆ ಪ್ರತಿ ಕುಟುಂಬದ ಹಬ್ಬವಾಗಿದೆ. ಇದಕ್ಕೆ ಪ್ರತಿಯೊಂದು ಕುಟುಂಬಗಳು ಈ ಒಂದು ಕಾರ್ಯಕ್ರಮದಲ್ಲಿ ಭಾಗಿಯಾಗಿ ಅತ್ಯುತ್ತಮ ಧಾರ್ಮಿಕ ಕಾರ್ಯಕ್ರಮವನ್ನು ನೋಡುವಂತ ಅವಕಾಶ ಕೊಡಬೇಕೆಂದು ರಜೆ ಘೋಷಿಸಬೇಕೆಂದು ಆಗ್ರಹಿಸುತ್ತೇನೆ ಎಂದು ಎಚ್ ಡಿ ಕುಮಾರಸ್ವಾಮಿ ತಿಳಿಸಿದರು.
ರಾಜ್ಯ ಸರ್ಕಾರ ನಾಳೆ ರಜೆ ಘೋಷಣೆ ಮಾಡಬೇಕು ನಾನು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿಸುತ್ತೇನೆ ಎಂದು ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ ನಾಳೆ ರಾಮಂದಿರ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತೇನೆ ದೇಶದ ರಾಜ್ಯದ ಜನರು ಹಬ್ಬದ ಸಂಭ್ರಮದಲ್ಲಿ ಇದ್ದಾರೆ ಅವರ ಭಾವನೆಗೆ ಗೌರವ ಕೊಟ್ಟು ವರ್ಷ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.
140 ಕೋಟಿ ಜನರ ಭಾವನೆಗೆ ಬೆಲೆ ಕೊಟ್ಟು ರಜೆ ಕೊಡಿ
ರಾಮಮಂದಿರ 140 ಕೋಟಿ ಜನರ ಭಾವನೆಗಳಿಗೆ ಬೆಲೆ ಕೊಟ್ಟು ರಜೆ ಕೊಡಿ ಎಂದು ಬೆಂಗಳೂರಲ್ಲಿ ಮಾಜಿ ಸಚಿವ ಗೋವಿಂದ ಕಾರಜೋಳ ಆಗ್ರಹಿಸಿದ್ದಾರೆ.ದೇಶದ ಎಲ್ಲಾ ಜನರು ದೀಪಾವಳಿಯನ್ನು ನೋಡುತ್ತಿದ್ದಾರೆ. ಈ ವಿಷಯದಲ್ಲಿ ಘೋಷಣೆ ಮಾಡಬೇಕು. ರಾಮಮಂದಿರ ನಿರ್ಮಾಣ ಆಗಿ ರಾಮಣ್ಣ ಮೂರ್ತಿ ಪ್ರತಿಷ್ಠಾಪನೆ ಆಗುತ್ತಿರುವುದನ್ನು ಸಂತೋಷದಿಂದ ದೇಶದ ಜನತೆ ಸಂತೋಷದಿಂದ ನೋಡುತ್ತಿದ್ದಾರೆ.
ಇದೊಂದು ರಾಷ್ಟ್ರೀಯ ಹಬ್ಬ ದೀಪಾವಳಿಯ ತರ ಹಬ್ಬವಾಗಿ ನೋಡುತ್ತಿದ್ದಾರೆ.ಇಂತಹ ಸಂದರ್ಭ ದಲ್ಲಿ ನಮ್ಮ ರಾಜ್ಯ ಸರ್ಕಾರ ರಜೆ ಘೋಷಣೆಯನ್ನು ಮಾಡಬೇಕಾಗಿದೆ ಅನೇಕ ಸಂಘಟನೆಗಳು ಕೂಡ ಒತ್ತಾಯ ಮಾಡಿವೆ.ಪ್ರತಿಪಕ್ಷವಾಗಿ ಭಾರತೀಯ ಜನತಾ ಪಕ್ಷ ಕೂಡ ಒತ್ತಾಯ ಮಾಡಿದೆ. ಕೂಡಲೇ ಇಲ್ಲೇ ರಜೆ ಘೋಷಣೆ ಮಾಡಬೇಕು. ಪ್ರಜೆ ಘೋಷಿಸಲು ಪತ್ರ ಬೇಕಾಗಿಲ್ಲ. 140 ಕೋಟಿ ಭಾವನೆ ಅರ್ಥ ಮಾಡಿಕೊಂಡು ರಾಜ್ಯದ ಎಂಟು ಕೋಟಿ ಜನರ ಭಾವನೆ ಅರ್ಥ ಮಾಡಿಕೊಂಡು ರಜೆ ಘೋಷಣೆ ಮಾಡಬೇಕು ಸಚಿವ ಗೋವಿಂದ ಕಾರಜೋಳ ಆಗ್ರಹಿಸಿದರು.