ಮಂಗಳೂರು: ಲೋಕಸಭಾ ಚುನಾವಣೆಯಲ್ಲಿ ಅಷ್ಟೇ ಅಲ್ಲ, ವಿಧಾನ ಪರಿಷತ್ ಚುನಾವಣೆಯಲ್ಲೂ ಕಾಂಗ್ರೆಸ್ ಗೆಲುವಿನ ನಗೆ ಬೀರಲಿದೆ. ಶಿಕ್ಷಕರ ಸಮಸ್ಯೆ ನಿವಾರಣೆಗಾಗಿ ನಾನು ಶ್ರಮಿಸುತ್ತೇನೆ. ನೈರುತ್ಯ ಶಿಕ್ಷಕರ ಕ್ಷೇತ್ರದ ಮತದಾರರು ತಮಗೆ ಮತ ನೀಡುವಂತೆ ಕಾಂಗ್ರೆಸ್ ಅಭ್ಯರ್ಥಿ ಡಾ.ಕೆ.ಕೆ ಮಂಜುನಾಥ್ ಕುಮಾರ್ ಕೋರಿದ್ದಾರೆ.
ಮಂಗಳೂರಿನ ಕಾಂಗ್ರೆಸ್ ಭವನದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ನೈರುತ್ಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಕೆ ಕೆ ಮಂಜುನಾಥ್ ಅವರು, 2018ರಲ್ಲೇ ಕಾಂಗ್ರೆಸ್ ಸರ್ಕಾರವು ಶೇ.30ರಷ್ಟು ಶಿಕ್ಷಕರ ವೇತನವನ್ನು ಹೆಚ್ಚಿಸಿದೆ ಎಂದರು.
ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಸರ್ಕಾರವು ಶಿಕ್ಷಕರ ಪಿಂಚಣಿಯನ್ನು ಕಿತ್ತುಕೊಂಡಿದೆ. ಇದರ ಪರಿಣಾಮ ಅನುದಾನಿತ ಶಿಕ್ಷಕರು ಬೀದಿ ಪಾಲು ಮಾಡಿದಂತೆ ಆಗಿದೆ. ಇದನ್ನು ಶಿಕ್ಷಕರು ಎಂದು ಮರೆಯಲಾರರು ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಡಿಸಿಸಿ ಅಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಹರೀಶ್ ಕುಮಾರ್, ಮಾಜಿ ಸಚಿವ ಅಭಯಚಂದ್ರ ಜೈನ್ ಸೇರಿದಂತೆ ವಿವಿಧ ಮುಖಂಡರು ಉಪಸ್ಥಿತರಾಗಿದ್ದರು.
BREAKING: ರಾಜ್ಯ ಸರ್ಕಾರದಿಂದ ‘ಅಭಿವೃದ್ಧಿ ಕಾಮಗಾರಿ’ಗಳಿಗೆ ‘ಮಾದರಿ ನೀತಿ ಸಂಹಿತೆ’ಯಿಂದ ವಿನಾಯ್ತಿ ನೀಡಿ ಆದೇಶ
ಬೆಂಗಳೂರಿನ ಈ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೇ.22ರ ಬೆಳಿಗ್ಗೆ 6ರಿಂದ 23ರ ಸಂಜೆ 6ರವರೆಗೆ ‘ಮದ್ಯ ಮಾರಾಟ’ ನಿಷೇಧ