ನವದೆಹಲಿ: ಕರ್ನಾಟಕದ 28 ಲೋಕಸಭಾ ಸ್ಥಾನಗಳಿಗೆ ಏಪ್ರಿಲ್ 26 ಮತ್ತು ಮೇ 7 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ ಎಂದು ಭಾರತದ ಚುನಾವಣಾ ಆಯೋಗ (ಇಸಿಐ) ಈಗಾಗಲೇ ಪ್ರಕಟಿಸಿದೆ.

ಬೆಂಗಳೂರು ಉತ್ತರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ ಮತ್ತು ಕರಾವಳಿ ಪ್ರದೇಶಗಳು ಸೇರಿದಂತೆ ದಕ್ಷಿಣ ಕರ್ನಾಟಕದ ಹದಿನಾಲ್ಕು ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಮತದಾನ ನಡೆಯಲಿದೆ. ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಸಲು ಏಪ್ರಿಲ್ 4 ಕೊನೆಯ ದಿನವಾಗಿದೆ. ಏಪ್ರಿಲ್ 8 ರವರೆಗೆ ನಾಮಪತ್ರಗಳನ್ನು ಹಿಂಪಡೆಯಲು ಅವಕಾಶವಿದೆ. ಉಳಿದ 14 ಕ್ಷೇತ್ರಗಳಿಗೆ ಮೇ 7 ರಂದು ಎರಡನೇ ಹಂತದಲ್ಲಿ ಮತದಾನ ನಡೆಯಲಿದೆ. ಏಪ್ರಿಲ್ 19 ರಂದು ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಕೊನೆಗೊಳ್ಳಲಿದ್ದು, ಏಪ್ರಿಲ್ 22 ರವರೆಗೆ ನಾಮಪತ್ರ ಹಿಂಪಡೆಯಲು ಅವಕಾಶವಿದೆ.

28 ಕ್ಷೇತ್ರಗಳ ಪೈಕಿ ಬಿಜೆಪಿ 25 ಹಾಗೂ ಜೆಡಿಎಸ್‌ ಮೂರು ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದ್ದು, ನಾಮಪತ್ರ ಸಲ್ಲಿಕೆ ಆರಂಭಕ್ಕೂ ಮುನ್ನ ಎಲ್ಲ ಕ್ಷೇತ್ರಗಳಿಗೂ ತನ್ನ ಉಮೇದುವಾರರನ್ನು ಘೋಷಿಸಿವೆ ಹಾಗಾದ್ರೇ ಯಾರು ಎಲ್ಲಿಂದ ಸ್ಪರ್ಧೆ ಮಾಡಲಿದ್ದಾರೆ ಎನ್ನುವುದನ್ನುನೋಡುದುವಾದ್ರೆ ಅದರ ವಿವರ ಹೀಗಿದೆ.

ಯಾವ ಕ್ಷೇತ್ರದಲ್ಲಿ ಯಾರು ಅಭ್ಯರ್ಥಿ?

ಕ್ರ.ಸಂ ಕ್ಷೇತ್ರ ಬಿಜೆಪಿ + ಜೆಡಿಎಸ್‌ ಅಭ್ಯರ್ಥಿಗಳು
1 ಚಿಕ್ಕೋಡಿ ಅಣ್ಣಾಸಾಹೇಬ್‌ ಜೊಲ್ಲೆ
2 ಬೆಳಗಾವಿ ಜಗದೀಶ್‌ ಶೆಟ್ಟರ್‌
3 ಬಾಗಲಕೋಟೆ ಪಿಸಿ ಗದ್ದಿಗೌಡರ್‌
4 ಬಿಜಾಪುರ (SC) ರಮೇಶ್‌ ಜಿಗಜಿಣಗಿ
5 ಕಲಬುರಗಿ (SC) ಡಾ ಉಮೇಶ್‌ ಜಾಧವ್
6 ರಾಯಚೂರು (ST) ರಾಜಾ ಅಮರೇಶ್ವರ ನಾಯಕ
7 ಬೀದರ್ ಭಗವಂತ್‌ ಖೂಬಾ
8 ಕೊಪ್ಪಳ ಡಾ. ಬಸವರಾಜ್‌ ಕ್ಯಾವಟೂರು
9 ಬಳ್ಳಾರಿ (ST) ಶ್ರೀರಾಮುಲು
10 ಹಾವೇರಿ ಬಸವರಾಜ ಬೊಮ್ಮಾಯಿ
11 ಧಾರವಾಡ ಪ್ರಹ್ಲಾದ್‌ ಜೋಶಿ
12 ಉತ್ತರ ಕನ್ನಡ ವಿಶ್ವೇಶ್ವರ ಹೆಗಡೆ ಕಾಗೇರಿ
13 ದಾವಣಗೆರೆ ಗಾಯತ್ರಿ ಸಿದ್ದೇಶ್ವರ್‌
14 ಶಿವಮೊಗ್ಗ ಬಿವೈ ರಾಘವೇಂದ್ರ
15 ಉಡುಪಿ – ಚಿಕ್ಕಮಗಳೂರು ಕೋಟ ಶ್ರೀನಿವಾಸ್‌ ಪೂಜಾರಿ
16 ಹಾಸನ ಪ್ರಜ್ವಲ್‌ ರೇವಣ್ಣ (ಜೆಡಿಎಸ್)
17 ದಕ್ಷಿಣ ಕನ್ನಡ ಕ್ಯಾ. ಬ್ರಿಜೇಶ್‌ ಚೌಟಾ
18 ಚಿತ್ರದುರ್ಗ (SC) ಗೋವಿಂದ ಕಾರಜೋಳ
19 ತುಮಕೂರು ವಿ ಸೋಮಣ್ಣ
20 ಮಂಡ್ಯ ಎಚ್‌ಡಿ ಕುಮಾರಸ್ವಾಮಿ (ಜೆಡಿಎಸ್)
21 ಮೈಸೂರು ಯದುವೀರ್‌ ಕೃಷ್ಣದತ್ತ ಚಾಮರಾಜ್‌ ಒಡೆಯರ್
22 ಚಾಮರಾಜನಗರ (SC) ಎಸ್‌ ಬಾಲರಾಜ್‌
23 ಬೆಂಗಳೂರು ಗ್ರಾಮಾಂತರ ಡಾ ಸಿಎನ್‌ ಮಂಜುನಾಥ್‌
24 ಬೆಂಗಳೂರು ಉತ್ತರ ಶೋಭಾ ಕರಂದ್ಲಾಜೆ
25 ಬೆಂಗಳೂರು ಕೇಂದ್ರ ಪಿಸಿ ಮೋಹನ್
26 ಬೆಂಗಳೂರು ದಕ್ಷಿಣ ತೇಜಸ್ವಿ ಸೂರ್ಯ
27 ಚಿಕ್ಕಬಳ್ಳಾಪುರ ಡಾ ಕೆ ಸುಧಾಕರ್‌
28 ಕೋಲಾರ (SC) ನಿಸರ್ಗ ನಾರಾಯಣಸ್ವಾಮಿ (ಜೆಡಿಎಸ್‌)

Share.
Exit mobile version