ಮಂಡ್ಯ : ಮಂಡ್ಯ ಜಿಲ್ಲೆಯ ಮದ್ದೂರು ಪಟ್ಟಣದಲ್ಲಿ ಗಣೇಶ ಮೆರವಣಿಗೆ ವೇಳೆ ಕಲ್ಲುತೂರಾಟ ನಡೆದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಕೆಪಿಸಿಸಿ ವಕ್ತಾರ ಎಲ್.ಆರ್. ಶಿವರಾಮೇಗೌಡ ಬಿಜೆಪಿ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ನಾಯಕರು ರಾಜ್ಯದಲ್ಲಿ ಗಲಾಟೆ ಮಾಡಲೆಂದು ಕಾಯುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಗಣೇಶ ಗಲಾಟೆಗೆ ಬಿಜೆಪಿ ಕಿತಾಪತಿ ನಡೆಸಿದೆ. ಮಂಡ್ಯದಲ್ಲಿ ಬಿಜೆಪಿ ವಿಜೃಂಭಿಸುತ್ತಿದ್ದು ಜೆಡಿಎಸ್ ಪಕ್ಷವು ಮಾಯವಾಗಿದೆ ಎಂದು ಶಿವರಾಮೇಗೌಡ ಬಿಜೆಪಿ ಜೆಡಿಎಸ್ ವಿರುದ್ದ LRS ವ್ಯಂಗ್ಯವಾಡಿದರು. ಮದ್ದೂರಿನಲ್ಲಿ ನಡೆದಿರುವ ಗಣೇಶನ ಗಲಾಟೆ ವಿಷಾದನೀಯ. ಬಿಜೆಪಿಯವರಿಗೆ ರಾಜ್ಯದಲ್ಲಿ ಗಣೇಶ ಮೂರ್ತಿಯ ಗಲಾಟೆಯನ್ನೇ ಕಾಯುತ್ತಿದ್ದಾರೆ. ಬಿಜೆಪಿಯವರಿಗೆ ಮೊದಲೇ ಅಧಿಕಾರ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ದಯಮಾಡಿ ನಮ್ಮ ಮಂಡ್ಯ ಜಿಲ್ಲೆಯನ್ನು ಹಾಳು ಮಾಡಬೇಡಿ. ಒಂದು ಸಣ್ಣ ಗಲಾಟೆಗೆ ರಾಜ್ಯದ ಮಹಾನ್ ಲೀಡರ್ ಗಳು ಪದೇ ಪದೇ ಬಂದು ಉದ್ರೇಕ ಭಾಷಣ ಮಾಡ್ತಾರೆ. ಹಿಂದೂ ಮತ್ತು ಮುಸ್ಲಿಂ ಜನಾಂಗವನ್ನು ಹೆಚ್ಚು ಕಟ್ಟುವ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ಸರ್ಕಾರವನ್ನು ಒತ್ತಾಯ ಮಾಡುತ್ತಿದ್ದೇನೆ. ಇವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು. ಜೆಡಿಎಸ್ ಮತ್ತು ಬಿಜೆಪಿ ಒಗ್ಗಟ್ಟಿನ ಪ್ರದರ್ಶನದೊಂದಿಗೆ ಜನಾಂಗವನ್ನು ಹೊಡೆಯುವ ಕೆಲಸ ಮಾಡುತ್ತಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ವಿಜೃಂಭಿಸುತ್ತಿದ್ದು ಜೆಡಿಎಸ್ ಪಕ್ಷವು ಮಾಯವಾಗಿದೆ ಎಂದು ಬಿಜೆಪಿ ಜೆಡಿಎಸ್ ವಿರುದ್ದ LR ಶಿವರಾಮೇಗೌಡ ವ್ಯಂಗ್ಯವಾಡಿದರು.