ಚಿಕ್ಕಬಳ್ಳಾಪುರ : ಬಿಜೆಪಿಯವರು ನಾವು ಗ್ಯಾರಂಟಿ ಜಾರಿ ಮಾಡಿದಾಗ ಅಪಪ್ರಚಾರ ಮಾಡಿದರು.ಗ್ಯಾರಂಟಿ ಯೋಜನೆಗಳನ್ನು ಚುನಾವಣೆ ಆದಮೇಲೆ ನಿಲ್ಲಿಸಿ ಬಿಡುತ್ತಾರೆ ಎಂದು ಅಪಪ್ರಚಾರ ಮಾಡಿದರು. ಈ ರಾಜ್ಯದ ಜನ ದಡ್ಡರಲ್ಲ ಬಿಜೆಪಿಯವರು ರಾಜ್ಯದ ಜನರನ್ನ ದಾರಿ ತಪ್ಪಿಸಬಹುದು ಸುಳ್ಳು ಹೇಳಿ ನಂಬಿಸಬಹುದು ಎಂದು ತಿಳಿದುಕೊಂಡಿದ್ದಾರೆ. ಆದರೆ ಬಿಜೆಪಿಯವರು ಜನರನ್ನ ದಾರಿ ತಪ್ಪು ಬದಲು ಅವರೇ ಮೂರ್ಖರಾಗಿದ್ದಾರೆ ಎಂದು ತಿಳಿಸಿದರು.
ಜನರನ್ನು ಕಚೇರಿಗೆ ಅಲೆಸದೇ ಉತ್ತಮವಾಗಿ ಸ್ಪಂದಿಸಬೇಕು : ಎಸ್.ಮಧು ಬಂಗಾರಪ್ಪ
ಇಂದು ಚಿಕ್ಕಬಳ್ಳಾಪುರದ ಚಿಂತಾಮಣಿಯಲ್ಲಿ ಜಿಲ್ಲಾ ಆಡಳಿತದ ವತಿಯಿಂದ ಕಾಂಗ್ರೆಸ್ ಗ್ಯಾರಂಟಿ ಸಮಾವೇಶ ಹಮ್ಮಿಕೊಂಡಿದ್ದು ಸಿಎಂ ಆದ ಬಳಿಕ ಮೊದಲ ಬಾರಿಗೆ ಚಿಕ್ಕಬಳ್ಳಾಪುರಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿದ್ದಾರೆ ಲೋಕಸಭೆಗೆ ಚುನಾವಣೆಗೆ ಮುನ್ನ ಕಾಂಗ್ರೆಸ್ ರಣಕಹಳೆ ಮೊಳಗಿಸಿದೆ.ಈ ಒಂದು ಗ್ಯಾರಂಟಿ ಫಲನುಭವಿಗಳ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡಿದರು.
ನಾವು ಅಧಿಕಾರಕ್ಕೆ ಬಂದ ತಕ್ಷಣ ಈ ಐದು ಗ್ಯಾರಂಟಿಗಳನ್ನು ಜಾರಿ ಮಾಡುತ್ತೇವೆ ನಾವು ಕೊಟ್ಟ ಮಾತಿಗೆ ತಪ್ಪುವುದಿಲ್ಲ ಅಂತ ಹೇಳಿ ಗ್ಯಾರಂಟಿ ಕಾರ್ಡಿಗೆ ಸಹಿ ಮಾಡಿದ್ದೇವೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ನಿಮ್ಮೆಲ್ಲರ ಆಶೀರ್ವಾದದಿಂದ 136 ಸ್ಥಾನಗಳನ್ನು ಪಡೆದು ಅಧಿಕಾರಕ್ಕೆ ಬಂದೇವು ನೀವು ಕೂಡ ಸುಧಾಕರ್ ಅವರನ್ನ ಗೆಲ್ಲಿಸಿ ವಿಧಾನಸಭೆಗೆ ಕಳುಹಿಸಿಕೊಟ್ಟಿದ್ದೀರಾ.
2023 ಮೇ 29ರಂದು ಪ್ರಮಾಣವಚರ ಸ್ವೀಕರಿಸಿದೆವು ಅಲ್ಲಿಂದ ನೇರವಾಗಿ, ವಿಧಾನಸೌಧದ ಕ್ಯಾಬಿನೆಟ್ ಹಾಲ್ನಲ್ಲಿ ಐದು ಗ್ಯಾರಂಟಿಗಳನ್ನ ಜಾರಿ ಮಾಡಬೇಕು ಎಂದು ಆದೇಶ ಹೊರಡಿಸಿದ್ದೆವು. ಶಕ್ತಿ ಯೋಜನೆ, ಗ್ರಹ ಜ್ಯೋತಿ, ಅನ್ನ ಭಾಗ್ಯ ಯುವ ನಿಧಿ ಈ ಐದು ಗ್ಯಾರಂಟಿಗಳನ್ನು ಜನರಿಗೆ ಕೊಡಬೇಕು. ಗ್ಯಾರಂಟಿಗಳನ್ನು ಘೋಷಣೆ ಮಾಡಿದ ಮೇಲೆ ವಿರೋಧ ಪಕ್ಷದವರು ಇದನ್ನು ಜಾರಿ ಮಾಡುವುದಕ್ಕೆ ಸಾಧ್ಯವಿಲ್ಲ ಒಂದು ವೇಳೆ ಜಾರಿ ಮಾಡಿದರೆ ಕರ್ನಾಟಕದ ಖಜಾನೆ ಖಾಲಿಯಾಗುತ್ತದೆ ರಾಜ್ಯದ ಆರ್ಥಿಕ ಪರಿಸ್ಥಿತಿ ದಿವಾಳಿಯಾಗುತ್ತದೆ ಎಂದು ಬಿಜೆಪಿ ಅವರು ಪ್ರಚಾರ ಮಾಡಿದರು ಎಂದರು.
ಐದು ಗ್ಯಾರಂಟಿಗಳು ಯೋಜನೆ ಜಾರಿಯ ಆದರೆ ಅಭಿವೃದ್ಧಿ ಕೆಲಸಗಳು ನಿಂತು ಹೋಗುತ್ತವೆ ಎಂದು ತಿಳಿಸಿದರು ಆದರೆ ಇಂದು ಚಿಂತಾಮಣಿಯಲ್ಲಿ ಇಷ್ಟು ಪ್ರಮಾಣದ ಅಭಿವೃದ್ಧಿ ಕಾರ್ಯಗಳಿಗೆ ಶಂಕುಸ್ಥಾಪನೆ ಮಾಡಲಾಗುತ್ತಾ? ಆರ್ ಅಶೋಕ್ ಬಿ ವೈ ವಿಜಯೇಂದ್ರ ಸಿರಿದಂತೆ ಬಿಜೆಪಿ ನಾಯಕರು ಒಬ್ಬರ ಮೇಲೆ ಒಬ್ಬರು ಸುಳ್ಳು ಹೇಳಿದರು ಬಿಜೆಪಿಯವರ ಮನೆಯ ದೇವರು ಸುಳ್ಳು ಏಕೆಂದರೆ ನರೇಂದ್ರ ಮೋದಿಯವರೇ ಸುಳ್ಳು ಹೇಳುತ್ತಾರೆ ದೇಶದ ಜನರಿಗೆ ಮೋದಿ ಅವರೇ ಸುಳ್ಳು ಹೇಳುತ್ತಾರೆ ಹಾಗಾಗಿ ಬಿಜೆಪಿ ಮನೆದೇವರು ಸುಳ್ಳು ಎಂದು ವಾಗ್ದಾಳಿ ನಡೆಸಿದರು.
ಬಡವರ ಪರ ಕೆಲಸ ಕಾಂಗ್ರೆಸ್ ಸರ್ಕಾರದ ಗುರಿ- ಮುಖ್ಯಮಂತ್ರಿ ಸಿದ್ದರಾಮಯ್ಯ
2014ರಲ್ಲಿ ಮೋದಿಯವರು ವಿದೇಶದಲ್ಲಿ ಕಪ್ಪು ಹಣವಿದೆ ಭಾರತದ ಪ್ರತಿಯೊಬ್ಬ ಒಂದು ಕುಟುಂಬಕ್ಕೆ 15 ಲಕ್ಷ ರೂಪಾಯಿಗಳನ್ನು ಕೊಡುತ್ತೇನೆ ಎಂದು ಅಂದು ಹೇಳಿದ್ದನ್ನು ಬರೆಸಿದ್ದು ಇವತ್ತಿಗೆ 10 ವರ್ಷವಾದರೂ 15 ಲಕ್ಷ ಹೋಗಲಿ 15 ಪೈಸೆ ಕೂಡ ಕೊಡಲಿಲ್ಲ ಅಚ್ಛೇ ದಿನ್ ಅಯೇಂಗೆ ಎಂದು ಹೇಳಿದರು. ಆದರೆ ಇಂದು ಪೆಟ್ರೋಲ್ ಡೀಸೆಲ್ ಗೊಬ್ಬರ ಗ್ಯಾಸ್ ಬೆಲೆ ಹೆಚ್ಚಾಗಿದ್ದು ನರೇಂದ್ರ ಮೋದಿಯವರ ಅಚ್ಛೇ ದಿನ್ ಏನಾಯಿತು ? ಅಧಿಕಾರಕ್ಕೆ ಬಂದರೆ ರೈತರ ಹಣ ದುಬ್ಬಟ್ಟು ಮಾಡುತ್ತೇನೆ ಎಂದರು. ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇನೆ ಎಂದರು, ಆದರೆ ಯಾವುದು ಮಾಡಲಿಲ್ಲ.
ಯಾರೇ ಜನಪ್ರತಿನಿಧಿಗೆ ರಾಜ್ಯದ ಅಭಿವೃದ್ಧಿಯ ಬಗ್ಗೆ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಯಾರಿಗೆ ಕಾಳಜಿ ಇರುತ್ತದೆಯೋ ಅವರು ರಾಜಕೀಯವಾಗಿ ಬೆಳೆಯಲಿಕ್ಕೆ ಸಾಧ್ಯವಾಗುತ್ತದೆ. ಆ ಎಲ್ಲಾ ಗುಣಗಳನ್ನ ಸುಧಾಕರ್ ಅವರು ಪಡೆದಿದ್ದಾರೆ. ಜನಪರ ಸೇವೆಗಳನ್ನು ಮಾಡುವ ಇಂತಹ ಶಾಸಕರನ್ನು ನೀವು ಪಡೆದಿದ್ದೀರಿ ಎಂದು ಸಚಿವ ಸುಧಾಕರ ಅವರನ್ನ ಹಾಡಿ ಹೊಗಳಿದರು.