ತೆಲಂಗಾಣ: ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರು ಟಿಆರ್ಎಸ್ 20 ರಿಂದ 30 ಶಾಸಕರನ್ನು ಖರೀದಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಮುನುಗೋಡು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಕೆಸಿಆರ್, ಟಿಆರ್ಎಸ್ ಶಾಸಕರನ್ನು ಖರೀದಿಸುತ್ತಿದ್ದಾರೆ ಎಂದು ಆರೋಪಿಸಿ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಾನು ನರೇಂದ್ರ ಮೋದಿಯವರನ್ನು ಕೇಳುತ್ತೇನೆ, ಏಕೆ ಈ ಕ್ರೌರ್ಯ, ನಿಮಗೆ ಎಷ್ಟು ಅಧಿಕಾರ ಬೇಕು? ನೀವು ಈಗಾಗಲೇ ಎರಡು ಬಾರಿ ಆಯ್ಕೆಯಾಗಿದ್ದೀರಿ, ಮತ್ತೆ ಏಕೆ ಸರ್ಕಾರಗಳನ್ನು ಉರುಳಿಸುತ್ತಿದ್ದೀರಿ? ನಮ್ಮ ತೆಲಂಗಾಣ ಸರ್ಕಾರದ ವಿರುದ್ಧ ಷಡ್ಯಂತ್ರ ರೂಪಿಸಿದ ಮೋದಿ ಹಾಗೂ ಆರ್ಎಸ್ಎಸ್ ಪರ ಕೆಲಸ ಮಾಡಿದವರು ಕೇಂದ್ರ ಕಾರಾಗೃಹದಲ್ಲಿದ್ದಾರೆ ಎಂದು ಗುಡುಗಿದ್ದಾರೆ.
ರ್ಯಾಲಿಯಲ್ಲಿ ಶಾಸಕರನ್ನು ಹಾಜರುಪಡಿಸಿದ ಸಿಎಂ ಕೆಸಿಆರ್, ‘ನನ್ನೊಂದಿಗೆ ನಾಲ್ವರು ಶಾಸಕರು ಹೈದರಾಬಾದ್ನಿಂದ ಮುನುಗೋಡಿಗೆ ಬಂದಿದ್ದಾರೆ. ನಮ್ಮ ಸರ್ಕಾರದ ವಿರುದ್ಧ ಪಿತೂರಿ ಮಾಡಿದ ದೆಹಲಿಯ ಕೋಟ್ಯಂತರ ರೂಪಾಯಿ ಹಣವನ್ನು ತಿರಸ್ಕರಿಸಿದ ನನ್ನ ನಾಲ್ಕು ಶಾಸಕರು ಇವರು ಎಂದೇಳಿದ್ದಾರೆ.
ದೆಹಲಿಯ ಕೆಲವರು ತೆಲಂಗಾಣದ ಸ್ವಾಭಿಮಾನವನ್ನು ಖರೀದಿಸಲು ಯತ್ನಿಸಿದರು ಮತ್ತು ನಮ್ಮ ನಾಯಕರಿಗೆ 100 ಕೋಟಿ ರೂ. ಆಮಿಷ ಒಡ್ಡಿದರು. ಪಕ್ಷವನ್ನು ತೊರೆದು ಬನ್ನಿ ಎಂದು ಕೇಳಿದರು. ಆದರೆ ಅವರು ಅದನ್ನು ಸ್ವೀಕರಿಸದೆ ನನ್ನೊಂದಿಗೆ ಬಂದರು ಎಂದೇಳಿದ ಕೆಸಿಆರ್, ಮೋದಿ ವಿಶ್ವಗುರು ಅಲ್ಲ, ಅವರು ವಿಷ ಗುರು ಎಂದೇಳಿದ್ದಾರೆ.
ನಾಲ್ವರು ಟಿಆರ್ಎಸ್ ಶಾಸಕರನ್ನು ಸೆಳೆಯಲು ಯತ್ನಿಸಿದ ಮೂವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಇದಾದ ಒಂದು ದಿನದ ನಂತರ ತೆಲಂಗಾಣ ಸಿಎಂ ಕೆಸಿಆರ್ ಬಿಜೆಪಿಯನ್ನು ಟಾರ್ಗೆಟ್ ಮಾಡಿದ್ದಾರೆ.
ಅಕ್ಟೋಬರ್ 26 ರಂದು, ಟಿಆರ್ಎಸ್ ಶಾಸಕರನ್ನು ಸೆಳೆಯಲು ಯತ್ನಿಸಿದ್ದರು. ಈ ಸಂಬಂಧ ನಾಲ್ವರು ಟಿಆರ್ಎಸ್ ಶಾಸಕರಲ್ಲಿ ಒಬ್ಬರಾದ ಪಿ ರೋಹಿತ್ ರೆಡ್ಡಿ ಅವರ ದೂರಿನ ಮೇರೆಗೆ, ಮೂವರ ವಿರುದ್ಧ ಭ್ರಷ್ಟಾಚಾರ ತಡೆ ಕಾಯಿದೆ, 1988 ರ ನಿಬಂಧನೆಗಳು ಮತ್ತು ಲಂಚ ನೀಡಲು ಸಂಬಂಧಿಸಿದ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪೊಲೀಸರಿಗೆ ನೀಡಿರುವ ಎಫ್ಐಆರ್ನಲ್ಲಿ, ಟಿಆರ್ಎಸ್ ಶಾಸಕ ರೋಹಿತ್ ರೆಡ್ಡಿ ಅವರು ತನಗೆ 100 ಕೋಟಿ ರೂಪಾಯಿ ಲಂಚದ ಆಮಿಷ ಒಡ್ಡಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ಕೇಳಿದ್ದಾರೆ ಎಂದು ಆರೋಪಿಸಿದ್ದಾರೆ ಎನ್ನಲಾಗುತ್ತಿದೆ.
LIC ಈ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ, ಮಾಸಿಕ 12,000 ಪಿಂಚಣಿ ಪಡೆಯಬಹುದು, ಇಲ್ಲಿದೆ ಮಹತ್ವದ ಮಾಹಿತಿ