ಬೆಂಗಳೂರು : ಬಿಜೆಪಿಯವರು ನಾ ನಸಗುನ್ನಿ ಕಾಯಿಗಳು ಇದ್ದ ಹಾಗೆ. ಗ್ಯಾರಂಟಿ ಕೊಟ್ಟರೆ ಬಿಜೆಪಿ ಅವರಿಗೆ ಹೊಟ್ಟೆ ಉರಿ. ಬಿಜೆಪಿಯವರು ಬರಿ ಸುಳ್ಳು ಹೇಳುವುದೇ ಬಿಜೆಪಿಯವರ ಮನೆದೇವರು ಎಂದು ಬೆಂಗಳೂರಲ್ಲಿ ಬಿಜೆಪಿ ವಿರುದ್ಧ ಸಿಎಂ ಸಿದ್ದರಾಮಯ್ಯ ಕಿಡಿ ಕಾರಿದರು.
ವೈದ್ಯರ ಸಲಹೆ ಇಲ್ಲದೇ ‘ಬಿಪಿ’ ಮಾತ್ರೆ ತೆಗೆದುಕೊಳ್ತಿದ್ದೀರಾ.? ಎಚ್ಚರ, ಕ್ಯಾನ್ಸರ್ ರೋಗಕ್ಕೆ ತುತ್ತಾಗ್ಬೋದು
ಬೆಂಗಳೂರಿನಲ್ಲಿ ಸಮಾರಂಭವೊಂದರಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಸ್ವತಂತ್ರ ಹೋರಾಟದಲ್ಲಿ ಭಾಗಿಯಾಗಿದ್ದರು ಬಿಜೆಪಿಯವರ ಮನೆ ಹಾಳಾಗ ಎಂದು ಸಿಎಂ ಆಕ್ರೋಶ ವ್ಯಕ್ತಪಡಿಸಿದರು ಭಾರತ ಮಾತೆ ಮಕ್ಕಳು ಅಂತಾರೆ ನಾವೇನು ಅಲ್ವಾ? ಎಂದು ಕಿಡಿ ಕಾರಿದರು.
ಸ್ವತಂತ್ರ ತಂದುಕೊಟ್ಟ ನಾವು ನಿಜವಾದ ಭಾರತ ಮಾತೆಯ ಮಕ್ಕಳು. ಬ್ರಿಟಿಷರ ಜೊತೆ ಆರೆಸ್ಸೆಸ್ ನವರು ಇದ್ದಿದ್ದು ಅವರು ಹೇಗೆ ಭಾರತ ಮಾತೆ ಮಕ್ಕಳಾಗುತ್ತಾರೆ? ಆರ್ ಎಸ್ ಎಸ್ ಯಾವಾಗ ಹುಟ್ಟಿದೆ ಹೆಡ್ಗೆ ವಾರ್ ಯಾರು ಅಂತ ಗೊತ್ತಿಲ್ಲ ಎಂದು ಆರ್ ಎಸ್ ಎಸ್ ಬಿಜೆಪಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.