ಬೆಂಗಳೂರು : ಇದುವರೆಗೂ ಯಾವ ಗ್ಯಾರಂಟಿ ಯೋಜನೆಗಳು ನಿಂತಿಲ್ಲ. ಮುಂದೆಯೂ ನಿಲ್ಲಲ್ಲ. ಬಿಜೆಪಿಯವರು ಕೇವಲ ಹರಕಲು ಸೀರೆ, ಮುರುಕಲು ಸೈಕಲ್ ಅಷ್ಟೆ ಕೊಟ್ಟಿದ್ದು ಎಂದು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಎಚ್ ಎಮ್ ರೇವಣ್ಣ ಹೇಳಿಕೆ ನೀಡಿದರು.
ಗ್ಯಾರಂಟಿ ಜಾರಿ ಆಗುವುದಿಲ್ಲ ಅಂತ ನಮ್ಮನ್ನೇ ಹೇಯಾಳಿಸಿದರು. ಈಗ ಹೇಗೆ ಬಿಜೆಪಿಯವರು ಗ್ಯಾರಂಟಿ ಜಾರಿ ಮಾಡುತ್ತಿದ್ದಾರೆ? ಬಿಜೆಪಿ ಕೊಟ್ಟಿದ್ದು ಹರಕಲು ಸೀರೆ ಮುರುಕಲು ಸೈಕಲ್ ಅಷ್ಟೇ. ಗ್ಯಾರಂಟಿ ಯೋಜನೆಯ ಪರಿಷ್ಕರಣಿಯ ಬಗ್ಗೆ ಯಾವುದೇ ಚಿಂತನೆ ಇಲ್ಲ. ಕಾರ್ಯಕ್ರಮಗಳಲ್ಲಿ ಕೆಲವು ಬದಲಾವಣೆ ಆಗಬಹುದು. ಆದರೆ ಗ್ಯಾರಂಟಿ ಯೋಜನೆ ಪರಿಷ್ಕರಣೆ ಬಗ್ಗೆ ಚಿಂತನೆ ಇಲ್ಲ. ಗ್ಯಾರಂಟಿ ಯೋಜನೆಗಳಿಂದ ಬಡ ಕುಟುಂಬಗಳಿಗೆ ಅನುಕೂಲ ಆಗಿದೆ. ಐದು ವರ್ಷವೂ ನಮ್ಮ ಗ್ಯಾರಂಟಿ ಯೋಜನೆಗಳು ಇರಲಿವೆ. ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷಮರವನ್ನ ಹೇಳಿಕೆ ನೀಡಿದರು.