ಬೆಂಗಳೂರು : ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸಚಿವ ಕೃಷ್ಣ ಬೈರೇಗೌಡ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಪಕ್ಷವನ್ನು ಮುಗಿಸಲು ಬಿಜೆಪಿ ಏನು ಬೇಕು ಅದನ್ನು ಮಾಡುತ್ತಿದೆ ಎಂದು ಗಂಭೀರವಾದ ಆರೋಪ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ,ಸಂತ್ರಸ್ತೆಯರ ಮಾನಹರಣದ ಜೊತೆಗೆ ನ್ಯಾಯಾಹರಣ ಆಗುತ್ತಿದೆ. ಆರೋಪಿ ಹತ್ತಿರ ಕೆಲಸ ಮಾಡುತ್ತಿದ್ದವರು ವಿಡಿಯೋ ನೀಡಿದ್ದಾರೆ. ವಿಡಿಯೋ ತೆಗೆದುಕೊಂಡು ಹೋಗಿ ವಕೀಲರಿಗೆ ನೀಡಿದ್ದಾರೆ ಆ ವಕೀಲ ಕಾನೂನು ಬಗ್ಗೆ ಮಾತನಾಡುತ್ತಿದ್ದಾರೆ ಅವರು ಡಿಜಿ ಮತ್ತು ಐಜಿಪಿ ಹೈಕೋರ್ಟ್ ಸಿಜೆಗೆ ನೀಡಬಹುದಿತ್ತಲ್ಲ? ಎಂದರು.
ಇಷ್ಟೊಂದು ದೊಡ್ಡ ಕ್ರೈಂ ಆದರೂ ಏಕೆ ಬ್ಲಾಕ್ ಮೇಲ್ ಮಾಡ್ಕೊಂಡು ಕುಳಿತಿದ್ದರು? ಈ ಕುರಿತಂತೆ ಮಾಜಿ ಸಿಎಂ ಎಲ್‌ಡಿ ಕುಮಾರಸ್ವಾಮಿ ಹಾಗೂ ಆ ವಕೀಲ ಏನು ಚರ್ಚಿಸಿದ್ದಾರೋ ಅದರ ಕುರಿತಂತೆ ಹಾಸನಾಂಬ ದೇವಸ್ಥಾನಕ್ಕೆ ಬಂದು ಪ್ರಮಾಣವನ್ನು ಮಾಡಲಿ. ಹೈಕೋರ್ಟ್ ಜಡ್ಜ್ ಗೆ ನೀಡಿದ್ದರೆ ವಿಡಿಯೋ ವೈರಲ್ ಆಗುತ್ತಿತ್ತ? ಮಹಿಳೆಯರ ಮಾನಹರಣ ಆಗಿರೋದೇ ಇವರಿಂದಲೇ ಜೆಡಿಎಸ್ ನವರನ್ನು ಮುಗಿಸಲು ಏನು ಬೇಕೋ ಬಿಜೆಪಿ ಮಾಡುತ್ತಿದೆ ಎಂದು ಆರೋಪಿಸಿದರು.
ಬಿಜೆಪಿ ಮೇಲಿನ ಸಿಟ್ಟು ತಂದು ಜೆಡಿಎಸ್ ಕಾಂಗ್ರೆಸ್ ಮೇಲೆ ಹಾಕುತ್ತಿದೆ. ಹಾಗಾದರೆ ಕಿಡ್ನ್ಯಾಪ್ ಮಾಡಿದ್ದು ಕೂಡ ಸುಳ್ಳು ಅಂತಾಯಿತು.ಅಪಹರಣ ಮಾಡಿ ಅಂತ ನಾವು ಹೇಳಿದ್ವಾ? ಮನೆಗೆ ಬಂದ ಹೆಂಗಸರ ಮೇಲೆ ಕಣ್ಣು ಹಾಕಿ ಅಂತ ಹೇಳಿದ್ವಾ? ಪ್ರಜ್ವಲ್ ರೇವಣ್ಣ ನನ್ನ ಕರೆಸಿ ಯಾಕೆ ಸರೆಂಡರ್ ಮಾಡಿಸುತ್ತಿಲ್ಲ? ತಪ್ಪು ಮಾಡಿದವರಿಗೆ ಶಿಕ್ಷೆ ಆಗಲೇಬೇಕು ಸಂತ್ರಸ್ತರಿಗೆ ಈಗಾಗಲೇ ಮಾನಭಂಗ, ಅನ್ಯಾಯ ಆಗಿದೆ. ಸಂತ್ರಸ್ತೆಯರು ತಲೆ ಎತ್ತಿಕೊಂಡು ಓಡಾಡಲಾಗದೆ ಊರು ಬಿಟ್ಟಿದ್ದಾರೆ ಎಂದು ಕೃಷ್ಣ ಭೈರೇಗೌಡ ವಾಗ್ದಾಳಿ ನಡೆಸಿದರು.