ಶಿವಮೊಗ್ಗ : ಲೋಕಸಭಾ ಚುನಾವಣೆಗೆ ಈ ಬಾರಿ ಶಿವಮೊಗ್ಗ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಟ ಶಿವರಾಜ್ ಕುಮಾರ್ ಅವರ ಪತ್ನಿ ಹಾಗೂ ಮಾಜಿ ಸಿಎಂ ಬಂಗಾರಪ್ಪ ಅವರ ಪುತ್ರಿಯಾಗಿರುವ ಗೀತಾ ಅವರು ಕಣಕ್ಕೆ ಇಳಿಯಲಿದ್ದಾರೆ. ಹೀಗಾಗಿ ಗೀತಾ ಶಿವರಾಜಕುಮಾರ್ ಅವರ ಸಹೋದರ ಹಾಗೂ ಸಚಿವರಾಗಿರುವ ಮಧು ಬಂಗಾರಪ್ಪ ಅವರು ಪ್ರಚಾರದ ವೇಳೆ ಬಿಜೆಪಿಯೆಂದರೆ ಬ್ರಿಟಿಷ್ ಜನತಾ ಪಾರ್ಟಿ ಎಂದು ವಾಗ್ದಾಳಿ ನಡೆಸಿದರು.
ದಾವಣಗೆರೆ: ಸುಗಮವಾಗಿ ನಡೆದ SSLC ಪರೀಕ್ಷೆ, 20856 ವಿದ್ಯಾರ್ಥಿಗಳು ಹಾಜರು
ಶಿವಮೊಗ್ಗದಲ್ಲಿ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ನಾವು ಸುಳ್ಳು ಹೇಳದೆ ನುಡಿದಂತೆ ನಡೆದಿದ್ದೇವೆ. ಸತ್ಯಹರಿಶ್ಚಂದ್ರ ಮಕ್ಕಳು ಅಂದರೆ ಸಿದ್ದರಾಮಯ್ಯ ಡಿಕೆ ಶಿವಕುಮಾರ್. ನಿಮ್ಮ ಮನೆಮಗಳು ಗೀತಾರನ್ನು ಸಂಸದ ಮಾಡಿ ಕಳುಹಿಸಬೇಕು. ಶ್ರೀ ರಾಮನನ್ನು ಬಿಜೆಪಿಯವರು ಬೀದಿಗೆ ತಂದಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
IPL 2024: ಇಂದು ಬೆಂಗಳೂರಲ್ಲಿ ರಾತ್ರಿ 11.30ರವರೆಗೆ ‘ಮೆಟ್ರೋ ಸಂಚಾರ’ ವಿಸ್ತರಣೆ
ಇನ್ಮುಂದೆ ಭಾವನಾತ್ಮಕ ಚುನಾವಣೆ ನಡೆಯುವುದಿಲ್ಲ. ಒಂದು ದಿನವೂ ರೈತರ ಪರ ಬಿಜೆಪಿ ಸಂಸದರು ಧ್ವನಿಯಾಗಿಲ್ಲ. ಬಿಜೆಪಿಯೆಂದರೆ ಬ್ರಿಟಿಷ್ ಜನತಾ ಪಾರ್ಟಿ.ರೈತರು ಕಾಂಗ್ರೆಸ್ ಋಣದಲ್ಲಿದ್ದಾರೆ ಕಾಂಗ್ರೆಸ್ಸಿಗೆ ಶಕ್ತಿ ಕೊಟ್ರೆ ಕಾಂಗ್ರೆಸ್ ನಿಮಗೆ ಶಕ್ತಿ ನೀಡುತ್ತೆ. ಗೀತಾ ಶಿವರಾಜಕುಮಾರ್ ನಿಮ್ಮ ಧ್ವನಿಯಾಗಿ ಕೆಲಸ ಮಾಡುತ್ತಾರೆ ಎಂದು ಶಿವಮೊಗ್ಗದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ನೋಯ್ಡಾ : ಸ್ಕೂಟರ್ ನಲ್ಲಿ ‘ಹೋಳಿ’ ಹಬ್ಬದ ಜೊತೆಗೆ ರೋಮ್ಯಾನ್ಸ್ ವಿಡಿಯೋ : ಯುವತಿಯರಿಗೆ ಬಿತ್ತು ಭಾರಿ ದಂಡ!