ಬೆಂಗಳೂರು : ಲೋಕಸಭಾ ಚುನಾವಣೆಗೆ ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಅಭ್ಯರ್ಥಿಗಳ ಟಿಕೆಟ್ ಘೋಷಣೆಯಾದ ಬೆನ್ನಲ್ಲೆ ಇದೀಗ ಹಲವು ಮಾಜಿ ಸಚಿವರ ಹೆಸರುಗಳನ್ನು ಬಿಜೆಪಿ ಕೈ ಬಿಟ್ಟಿದ್ದು, ಈಗ ಅವರಲ್ಲಿ ಆಕ್ರೋಶ ವ್ಯಕ್ತವಾಗುತಿದ್ದು, ಈಗಾಗಲೇ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.
ಕರ್ನಾಟಕದಲ್ಲಿ ಬಾಂಬ್ ಇಡುತ್ತಾರೆ ಹೇಳಿಕೆ : ತಮಿಳರ ಕ್ಷಮೆಯಾಚಿಸಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
ಅಲ್ಲದೆ ಸದಾನಂದ ಗೌಡ ಕೂಡ ಇತ್ತೀಚಿಗೆ ಬಿಜೆಪಿ ಕಡೆಯಿಂದ ಬೇಸರಗೊಂಡಿದ್ದರು. ಇದೀಗ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಸದಾನಂದ ಗೌಡ ಅವರು ಸ್ಪರ್ಧಿಸುವ ಕುರಿತು ಬಿಜೆಪಿ ಹೈಕಮಾಂಡ್ ನಿರ್ಧರಿಸಿದೆ ಎಂದು ಬಲಮೂಲಗಳಿಂದ ತಿಳಿದುಬಂದಿದೆ.
BREAKING : ಬೆಂಗಳೂರಿನಲ್ಲಿ ಘೋರ ದುರಂತ : ಬೆಂಕಿ ಹಚ್ಚಿಕೊಂಡು ಒಂದೇ ಕುಟುಂಬದ ಮೂವರು ಆತ್ಮಹತ್ಯೆ!
ಹೌದು ಮಾಜಿ ಸಿಎಂ ಸದಾನಂದ ಗೌಡ ಕಣಕ್ಕಿಳಿಸಲು ಬಿಜೆಪಿ ಹೈ ಕಮಾಂಡ್ ನಿರ್ಧಾರ ಮಾಡಿದ್ದಾರೆ ಚಿಕ್ಕಬಳ್ಳಾಪುರದಿಂದ ಟಿಕೆಟ್ ಸಿಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.ಇಂದು ಕೂಡ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸುವುದಿಲ್ಲ ಎಂದು ಬಲ್ಲಮೂಲಗಳಿಂದ ತಿಳಿದುಬಂದಿದೆ.
‘ಸ್ಟಾರ್ಟ್ಅಪ್ ಮಹಾಕುಂಭ’: ಭಾರತ್ ಮಂಟಪದಲ್ಲಿ ಉದ್ಯಮಿಗಳನ್ನು ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ
ಬೆಳಗ್ಗೆ ಮಾಜಿ ಸಿಎಂ ಸದಾನಂದಗೌಡ ಚಿಕ್ಕಬಳ್ಳಾಪುರ ಕ್ಷೇತ್ರದ ಟಿಕೆಟ್ ಘೋಷಣೆ ಬಾಕಿ ಇರಿಸಿಕೊಂಡಿದೆ. ಅಲ್ಲದೆ ಟಿಕೆಟ್ಗಾಗಿ ಮಾಜಿ ಸಚಿವ ಡಾಕ್ಟರ್ ಕೆ ಸುಧಾಕರ್ ಹಾಗು ಅಲೋಕ್ ವಿಶ್ವನಾಥ್ ನಡುವೆ ಪೈಪೋಟಿ ಏರ್ಪಟ್ಟಿದು, ಈ ಮಧ್ಯ ಮಂಡ್ಯ ಸಂಸದೆ ಸುಮಲತಾ ಹೆಸರು ಕೂಡ ಮುನ್ನೆಲೆಗೆ ಬಂದಿದೆ.ಹೈಕಮಾಂಡ್ ದೂರವಾಣಿ ಕರೆಯ ಬಳಿಕ ಸದಾನಂದ ಗೌಡ ಇಂದಿನ ಸುದ್ದಿಗೋಷ್ಠಿಯನ್ನು ಮುಂದೂಡಿದ್ದಾರೆ ಎಂದು ತಿಳಿದುಬಂದಿದೆ. ಚಿಕ್ಕಬಳ್ಳಾಪುರದಿಂದ ಸ್ಪರ್ಧೆ ಬಗ್ಗೆ ಇಂದು ಸ್ಪಷ್ಟತೆ ಸಿಗುವ ಸಾಧ್ಯತೆ ಇದೆ.