ಬೆಂಗಳೂರು : ಹಿಂದಿ ಹೇರಿಕೆ ಕುರಿತಂತೆ ದಕ್ಷಿಣ ಭಾರತಕ್ಕೆ ಕೇಂದ್ರ ಸರ್ಕಾರ ನೀಡುವ ಅನುದಾನದಲ್ಲಿ ದಕ್ಷಿಣ ಭಾರತಕ್ಕೆ ಅನ್ಯಾಯವಾಗುತ್ತಿದೆ ಹೀಗಾದರೆ ರಾಷ್ಟ್ರ ಕೂಗು ಅನಿವಾರ್ಯತೆಯಾಗುತ್ತದೆ ಎಂದು ಸಂಸದ ಡಿಕೆ ಸುರೇಶ್ ಹೇಳಿಕೆ ರಾಷ್ಟ್ರದಲ್ಲಿ ಭಾರಿ ಸಂಚಲನ ಸೃಷ್ಟಿಸಿತ್ತು ಇದೀಗ ಅವರು ತಮ್ಮ ಹೇಳಿಕೆಗೆ ಉಲ್ಟಾ ಹೊಡೆದಿದ್ದು ನಾನು ಆ ರೀತಿ ಹೇಳಿಕೆ ನೀಡಲಿಲ್ಲ ಎಂದು ಯು ಟರ್ನ್ ಹೊಡೆದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ನಾನು ದೇಶ ವಿಭಜನೆ ಆಗಬೇಕು ಅಂತ ಹೇಳಿಲ್ಲ. ಬಿಜೆಪಿಯವರು ನನ್ನ ಹೇಳಿಕೆಯನ್ನು ತಿರುಚಿದ್ದಾರೆ, ಬಿಜೆಪಿಯವರು ವಿಭಜನೆಯ ಭಾವದಲ್ಲೇ ಹೋಗುತ್ತಿದ್ದಾರೆ.ಬೇರೆ ರಾಜಕಾರಣ ಮಾಡಲಿಕ್ಕೆ ಹೀಗೆ ಮಾಡುತ್ತಿದ್ದಾರೆ.ನಾನು ನೀಡಿರುವ ಹೇಳಿಕೆಗಳು ಬಹಳ ಸ್ಪಷ್ಟವಾಗಿವೆ ಎಂದು ಬಿಜೆಪಿ ವಿರುದ್ಧ ಸಂಸದ ಡಿಕೆ ಸುರೇಶ ಆಕ್ರೋಶ ಹೊರ ಹಾಕಿದ್ದಾರೆ.
ಹೋರಾಟ ಪ್ರಜಾಪ್ರಭುತ್ವದ ಹಕ್ಕು ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಹೋರಾಟ ಮಾಡುವುದಕ್ಕೆ ಅವಕಾಶ ಇದೆ.ಹಾಗಾಗಿ ಅವರು ಹೋರಾಟ ಮಾಡುತ್ತಿದ್ದಾರೆ ಪ್ರತಿಭಟನೆ ಮಾಡುತ್ತಿದ್ದಾರೆ. ಅದರಲ್ಲಿ ತಪ್ಪೇನಿದೆ ನನ್ನ ಹೇಳಿಕೆಗಳು ಬಹಳ ಸ್ಪಷ್ಟವಾಗಿವೆ ನನ್ನ ಹೇಳಿಕೆ ವಂತಹ ಕೆಲಸ ಮಾಡುತ್ತಿದ್ದಾರೆ.ಹಾಗಾಗಿ ನಾನು ಅದಕ್ಕೆ ಉತ್ತರ ಕೊಡುವ ಅವಶ್ಯಕತೆ ಇಲ್ಲ ಎಂದು ತಿಳಿಸಿದರು.