ಬೆಂಗಳೂರು : ರಾಜ್ಯ ಸರ್ಕಾರದ ಬಜೆಟ್ಗೆ ಬಿಜೆಪಿ ನಾಯಕರಿಂದ ಟಿಕೆ ವಿಚಾರವಾಗಿ ಬಿಜೆಪಿ ಶಾಸಕರು ಬಜೆಟ್ ಅನ್ನು ಕೇಳದೆ ಸಭಾ ತ್ಯಾಗ ಮಾಡಿದ್ದಾರೆ. ಏನಿಲ್ಲ ಏನಿಲ್ಲ ಎಂದು ಯಾವುದೋ ಸಿನಿಮಾ ಗೀತೆಯನ್ನು ಹೇಳುತ್ತಿದ್ದಾರೆ ನಿಜಕ್ಕೂ ತಲೆಯಲ್ಲಿ ಏನೂ ಇಲ್ಲ ಎಂಬುದು ನಿನ್ನೆ ಸಾಬೀತಾಯಿತು ಎಂದು ಸಚಿವ HC ಮಹದೇವಪ್ಪ ಕಿಡಿ ಕಾರಿದ್ದಾರೆ.
ಈ ಕುರಿತು ಟ್ವೀಟ್ ನಲ್ಲಿ ಮಾಹಿತಿ ಹಂಚಿಕೊಂಡ ಅವರು, ಬಜೆಟ್ ಕೇಳಿಸಿಕೊಂಡು ಟೀಕೆ ಮಾಡುವವರನ್ನು ನಾನು ನೋಡಿದ್ದೇನೆ.ಆದರೆ ಬಿಜೆಪಿಯವರು ಬಜೆಟ್ ಕೇಳದೆ ಟೀಕೆ ಮಾಡುತ್ತಿದ್ದಾರೆ ಬಿಜೆಪಿಗರಿಗೆ ನಿಜಕ್ಕೂ ಆಡಳಿತಾತ್ಮಕ ಜ್ಞಾನವಿಲ್ಲ. ಮಂದಿರ ಮಸೀದಿ ಎಂಬುದು ಬಿಟ್ಟರೆ ಜನಪರವಾಗಿ ಚಿಂತಿಸಿದ್ದು ಕಾಣಲಿಲ್ಲ.
ಬಜೆಟ್ ಮಂಡಿಸುವ ಮೊದಲೇ ಬಜೆಟ್ ಸರಿಯಿಲ್ಲ ಎಂದು ಘೋಷಿಸುವ ಬಿಜೆಪಿಗರ ಮಾನಸಿಕ ಖಾಯಿಲೆಗೆ ಏನು ಹೇಳುವುದು?ಇವರಿಗೆ ಆಡಳಿತ ಪಕ್ಷವಾಗಿ ಕೆಲಸ ಮಾಡುವ ಸಾಮರ್ಥ್ಯ ಇಲ್ಲ, ವಿರೋಧ ಪಕ್ಷವಾಗಿ ಹೇಗೆ ನಡೆದುಕೊಳ್ಳಬೇಕೆಂಬ ಪ್ರಜ್ಞೆಯೂ ಇಲ್ಲ ಎಂದು ಬರೆದುಕೊಂಡಿದ್ದಾರೆ.
ಏನಿಲ್ಲ ಏನಿಲ್ಲ ಬಿಜೆಪಿಗೆ ಜವಾಬ್ದಾರಿ ಇಲ್ಲ ಜನಪರ ಕಾಳಜಿ ಇಲ್ಲ ಬಿಜೆಪಿಯವರು ಸಾರ್ವಜನಿಕ ಜೀವನದಲ್ಲಿ ಇರಲು ಅರ್ಹರಲ್ಲ ಟ್ವೀಟ್ ಮೂಲಕ ಬಿಜೆಪಿ ವಿರುದ್ಧ ಸಚಿವ ಹೆಚ್ಚಿಸಿ ಮಾದೇವಪ್ಪ ವಾಗ್ದಾಳಿ ನಡೆಸಿದ್ದಾರೆ.
ಏನಿಲ್ಲಾ ಏನಿಲ್ಲಾ…
ಬಜೆಟ್ ಅಧಿವೇಶವನ್ನು ತೊರೆದು ಹೋದ ವಿರೋಧ ಪಕ್ಷ @BJP4Karnataka ಅವರಿಗೆ, ಕನಿಷ್ಟ
– ಜವಾಬ್ದಾರಿ ಇಲ್ಲ
– ಅವರಿಗೆ ಜನಪರ ಕಾಳಜಿ ಇಲ್ಲ
– ಅವರಿಗೆ ಪ್ರಜಾಪ್ರಭುತ್ವ ಗೊತ್ತಿಲ್ಲ
– ಅವರು ಸಾರ್ವಜನಿಕ ಜೀವನದಲ್ಲಿ ಇರಲು ಅರ್ಹರಲ್ಲ. pic.twitter.com/HUCWdgf9q6
— Dr H.C.Mahadevappa (@CMahadevappa) February 17, 2024