ಬಾಗಲಕೋಟೆ : ಸಿದ್ದರಾಮಯ್ಯರ ಬಗ್ಗೆ ಬಿಜೆಪಿಯವರು ಹಗುರವಾಗಿ ಮಾತನಾಡಿದ್ದಾರೆ. ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಬ್ರಿಯಾನ್ ಲಾರ ಅನೇಕರು ಸೇರಿ ಒಬ್ಬ ಸಿದ್ದರಾಮಯ್ಯ ಎಂದು ಬಾಗಲಕೋಟೆಯಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿಕೆ ನೀಡಿದರು.
ಗುಜರಾತ್ ಗು ಕರ್ನಾಟಕಕ್ಕೂ ಹೋಲಿಕೆ ಮಾಡಿ ನೋಡಿ ಸಾಕು. ಚುನಾವಣೆ ವೇಳೆ ಮಾತ್ರ ಬಿಜೆಪಿಯವರು ಗೋಮಾತೆ ಬಗ್ಗೆ ಮಾತನಾಡುತ್ತಾರೆ. ಇಡೀ ಜಗತ್ತಿನಲ್ಲಿಯೇ ನಮ್ಮ ದೇಶ ಬೀಫ್ ರಫ್ತು ಮಾಡುವಲ್ಲಿ ಎರಡನೇ ಸ್ಥಾನದಲ್ಲಿದೆ. ಗೋಮಾತೆಯನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಣೆ ಮಾಡಿಬಿಡಿ ಗೋ ಸಾಕಾಣಿಕೆ ತಡೆಯುವ ಹೆಸರಲ್ಲಿ ಹಣ ವಸೂಲಿ ಮಾಡಿದ್ದಾರೆ. ಅದರ ಹಣದಿಂದ ದೇಶದಲ್ಲಿ 800 ಬಿಜೆಪಿ ಕಚೇರಿಗಳನ್ನು ಕಟ್ಟಿಸಿದ್ದಾರೆ ಎಂದು ಸಚಿವ ಸಂತೋಷ್ ಲಾಡ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.








