ಹುಬ್ಬಳ್ಳಿ : ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇನ್ನೊಂದೆಡೆ ಎಚ್ ಡಿ ಕುಮಾರಸ್ವಾಮಿ ವಿರುದ್ಧವು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿ ಎಂದು ಕಾಂಗ್ರೆಸ್ ಆಗ್ರಹಿಸಿದ ಬೆನ್ನಲ್ಲೆ ಇದೀಗ HD ಕುಮಾರಸ್ವಾಮಿ ಅವರನ್ನು ಮುಗಿಸಲು ಬಿಜೆಪಿ ಷಡ್ಯಂತ್ರ ಮಾಡುತ್ತಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಗಂಭೀರ ಆರೋಪ ಮಾಡಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಮುಗಿಸಲು ಬಿಜೆಪಿಯಿಂದಲೇ ನಡೆಯುತ್ತಿರುವ ಯತ್ನ ಇದು. ಜೆಡಿಎಸ್ನ್ನು ಮುಗಿಸಲು ಬಿಜೆಪಿಯಿಂದಲೇ ಪ್ಲ್ಯಾನ್ ನಡೆಯುತ್ತಿದೆ. ಯಾರ್ಯಾರು ನಾಯಕರಿದ್ದಾರೆ ಅವರ ವಿರುದ್ಧ ಪ್ರಾಸಿಕ್ಯೂಷನ್ ಕೊಡಿಸಲು ಬಿಜೆಪಿ ಷಡ್ಯಂತ್ರ ರೂಪಿಸುತ್ತಿದೆ ಎಂದು ಅವರು ಆರೋಪಿಸಿದರು.
ಎಚ್ಡಿಕೆಯವರ ಬಳಿ ಗಣಿ ಇಲಾಖೆ ಇದೆ. ಕುಮಾರಸ್ವಾಮಿ ರಾಜೀನಾಮೆ ಕೊಡಬೇಕು. ಕುಮಾರಸ್ವಾಮಿ ಅವರ ತಲೆದಂಡ ರಾಜ್ಯಪಾಲರ ತೀರ್ಮಾನದಿಂದ ಆಗಬಹುದು. ಬಹುಷಃ ಬಿಜೆಪಿಯವರು ಕುಮಾರಸ್ವಾಮಿ ತೆಗೆಯೋದಕ್ಕೆ ಮಾಡಿರೋ ಪ್ಲ್ಯಾನ್ ಮಾಡಿದ್ದಾರೆ. ಮೊದಲೇ ಬಿಜೆಪಿ ಜೆಡಿಎಸ್ ಮುಗಿಸಲು ಪ್ಲ್ಯಾನ್ ಮಾಡಿದ್ದಾರೆ ಅಂತಾ ನನಗೆ ಅನಿಸತ್ತೆ. ಕುಮಾರಸ್ವಾಮಿ ಅವರನ್ನು ತೆಗೆಯುವ ಸನ್ನಿವೇಶಕ್ಕೆ ಬಿಜೆಪಿಯವರು ತೆಗೆದುಕೊಂಡು ಹೋಗುತ್ತಿದ್ದಾರೆ ಎಂದರು.
ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಆಗಿದೆ. ರಾಜ್ಯಪಾಲರಿಗೆ ಅಡ್ವೈಸ್ ಮಾಡಲು ತೀರ್ಮಾನ ಮಾಡಲಾಗಿದೆ. ಕುಮಾರಸ್ವಾಮಿ, ನಿರಾಣಿ, ಜೊಲ್ಲೆ, ಜನಾರ್ದನರೆಡ್ಡಿ ಮೇಲೆ ಪ್ರಾಸಿಕ್ಯೂಷನ್ ಗೆ ಅನುಮತಿ ಕೊಡಿ. ಇದನ್ನು ತೀರ್ಮಾನ ಮಾಡಿ ಎಂದು ಅಡ್ವೈಸ್ ಮಾಡಲು ತೀರ್ಮಾನ ಮಾಡಿದ್ದೇವೆ. ರಾಜ್ಯಪಾಲರು ಕಾನೂನಾತ್ಮಕವಾಗಿ ನಡೆದುಕೊಳ್ತಿಲ್ಲ ಎಂದರು.