ಬೆಂಗಳೂರು: ಕರ್ನಾಟಕ ಬಿಜೆಪಿಯಿಂದ ಲೋಕಸಭಾ ಚುನಾವಣೆಗೆ ಭರ್ಜರಿ ಸಿದ್ಧತೆಯನ್ನು ಮಾಡಿಕೊಳ್ಳಲಾಗುತ್ತಿದೆ. ಒಂದೆಡೆ ನಾಳೆಯಿಂದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಎರಡು ದಿನ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ. ಮತ್ತೊಂದೆಡೆ ಲೋಕಸಭಾ ಚುನಾವಣೆಗಾಗಿ ಬಿಜೆಪಿಯಿಂದ ಕ್ಲಸ್ಟರ್ ಉಸ್ತುವಾರಿಗಳನ್ನು ನೇಮಿಸಿ ಆದೇಶಿಸಲಾಗಿದೆ.
ಈ ಕುರಿತಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಆದೇಶ ಹೊರಡಿಸಿದ್ದು, ಲೋಕಸಭಾ ಕ್ಲಸ್ಟರ್ ಗಳಿಗೆ ಪ್ರಮುಖರನ್ನ ಈ ಕೆಳಕಂಡಂತೆ 8 ಕ್ಲಸ್ಟರ್ ಗಳಿಗೆ ನಿಯುಕ್ತಿ ಗೊಳಿಸಲಾಗಿದೆ ಎಂಬುದಾಗಿ ತಿಳಿಸಿದ್ದಾರೆ.
ಹೀಗಿದೆ ಲೋಕಸಭಾ ಕ್ಲಸ್ಟರ್ ಗಳಿಗೆ ನಿಯೋಜಿಸಿದ ಉಸ್ತುವಾರಿಗಳ ಪಟ್ಟಿ
- ಮೈಸೂರು, ಚಾಮರಾಜನಗ, ಮಂಡ್ಯ, ಹಾಸು – ಎಸ್ ಎ ರಾಮದಾಸ್
- ದಕ್ಷಿಣ ಕನ್ನಡ, ಉಡುಪಿ-ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ – ಎಂ.ಬಿ ಭಾನುಪ್ರಕಾಶ್
- ಬೆಳಗಾವಿ, ಚಿಕ್ಕೋಡಿ, ಬಾಗಲಕೋಟೆ, ವಿಜಯಪುರ – ಮಹೇಶ್ ಟೆಂಗಿನಕಾಯಿ
- ಬೀದರ್, ಗುಲ್ಬರ್ಗಾ – ರಾಜಕುಮಾರ್ ಪಾಟೀಲ ತೇಲ್ಕೂರ್
- ರಾಯಚೂರು, ಕೊಪ್ಪಳ, ಬಳ್ಳಾರಿ – ಚಂದ್ರಶೇಖರ್ ಪಾಟೀಲ್ ಹಲಗೇರಿ
- ಧಾರವಾಡ, ಹಾವೇರಿ, ದಾವಣಗೆರೆ, ಚಿತ್ರದುರ್ಗ – ಕೆ.ಎಸ್ ನವೀನ್
- ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ – ಎಸ್ ಮುನಿರಾಜು
- ಬೆಂಗಳೂರು ಗ್ರಾಮಾಂತರ, ಬೆಂಗಳೂರು ದಕ್ಷಿಣ, ಬೆಂಗಳೂರು ಕೇಂದ್ರ, ಬೆಂಗಳೂರು ಉತ್ತರ – ಹೆಚ್ ಎಸ್ ಗೋಪಿನಾಥ್ ರೆಡ್ಡಿ
BIG NEWS: ‘ಮೋದಿ’ ಮತ್ತೊಮ್ಮೆ ಪ್ರಾಧಾನಿಯಾಗಬೇಕು: ನಾವು ಹೊಂದಾಣಿಕೆಗೆ ಸಿದ್ಧ – ಶಾಸಕ ಜನಾರ್ಧನ ರೆಡ್ಡಿ
‘ಗ್ಯಾರಂಟಿ ಯೋಜನೆ’ ಫಲಾನುಭವಿಗಳಿಗೆ ಗುಡ್ ನ್ಯೂಸ್: ‘ಫೆಬ್ರವರಿ’ಯಲ್ಲಿ ಎಲ್ಲಾ ತಾಲೂಕುಗಳಲ್ಲಿ ‘ಸಮಾವೇಶ’