ಉತ್ತರ ಪ್ರದೇಶ: ದೆಹಲಿ ಮುಖ್ಯಮಂತ್ರಿ ಮತ್ತು ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಉತ್ತರ ಪ್ರದೇಶದ ಗಾಜಿಪುರದ ಹೂಳು ತುಂಬುವ ಸ್ಥಳಕ್ಕೆ ಭೇಟಿ ನೀಡಿದ್ದರು.
ವಿಡಿಯೋ ಗೇಮ್ ಆಡುವ ಮಕ್ಕಳ ಮೆದುಳು ಹೆಚ್ಚು ಅಕ್ಟಿವ್ ಆಗಿರುತ್ತದೆ : ಸಂಶೋಧನೆಯಲ್ಲಿ ಮಾಹಿತಿ ಬಹಿರಂಗ
ಈ ವೇಳೆ ಮಾತನಾಡಿದ ಅವರು, ಸ್ವಲ್ಪ ಯೋಚಿಸಿ, ಬಿಜೆಪಿ ದೆಹಲಿಗೆ ಮಣ್ಣು, ಕಸದ ಬೆಟ್ಟಗಳನ್ನು ಬಿಟ್ಟು ಏನು ಕೊಟ್ಟಿದೆ, ಒಮ್ಮೆ ಪಕ್ಷ ಮರೆತು ದೇಶಕ್ಕಾಗಿ ಮತ ಹಾಕಿ ಎಂದೇಳಿದ್ದಾರೆ.
मेरी बीजेपी के समर्थकों से अपील है -“थोड़ा सोचो। बीजेपी ने दिल्ली को गंदगी और कूड़े के पहाड़ों के सिवाय क्या दिया? एक बार अपनी पार्टी भूलकर देश के लिये वोट दो” https://t.co/OtlC94ZCVv
— Arvind Kejriwal (@ArvindKejriwal) October 27, 2022
ದೆಹಲಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಆಡಳಿತದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕಳೆದ 15 ರಿಂದ ದೆಹಲಿಯ ಮಹಾನಗರ ಪಾಲಿಕೆಯಲ್ಲಿ ಕುಳಿತಿರುವ ಬಿಜೆಪಿಯವರು ದೆಹಲಿಯಲ್ಲಿ ಎಲ್ಲೆಂದರಲ್ಲಿ ಕಸ ಹರಡಿದ್ದಾರೆ. ಇಂದು ನಾನು ಅವರ ಗಾಜಿಪುರದ ಕಸದ ಪರ್ವತವನ್ನು ನೋಡಲು ಬಂದಿದ್ದೇನೆ ಎಂದೇಳಿದ್ದಾರೆ.
ಮುಂದೊಂದು ದಿನ ಸಂಬಿತ್ ಪಾತ್ರಾ ಕೂಡ ಬಿಜೆಪಿ ಕೊಳಕು ಪಕ್ಷ ಮತ್ತು ಆಪ್ ಉತ್ತಮ ಪಕ್ಷ ಎಂದು ಹೇಳಲಿದ್ದಾರೆ. ಎಲ್ಲ ಬಿಜೆಪಿ ಕಾರ್ಯಕರ್ತರು ಎಎಪಿಯ ಭಾಗವಾಗುವ ದಿನ ಬರಲಿದೆ ಎಂದಿದ್ದಾರೆ.
पिछले 15 से दिल्ली नगर निगम में बैठी भाजपा ने पूरी दिल्ली में हर जगह कूड़ा फैला रखा है, आज इनका ग़ाज़ीपुर वाला कूड़े का पहाड़ देखने आया हूँ। LIVE https://t.co/c9Fs1KTTGv
— Arvind Kejriwal (@ArvindKejriwal) October 27, 2022
ಅಲ್ಲದೆ ತನ್ನನ್ನು ತಾನು ಜಾದೂಗಾರ ಎಂದು ಕರೆದುಕೊಂಡ ಅರವಿಂದ್, ನಾನು ಮಾಂತ್ರಿಕ, ಮನ ಗೆಲ್ಲುವುದು ಗೊತ್ತು, ಜನರಿಗಾಗಿ ದುಡಿಯುತ್ತೇನೆಯೇ ಹೊರತು ಅವರಂತೆ ಕಪ್ಪು ಬಾವುಟ ಹಿಡಿದು ನಿಲ್ಲುವುದಿಲ್ಲ ಎಂದಿದ್ದಾರೆ.
BIGG NEWS: ಆನೇಕಲ್ ನಲ್ಲಿ ದೀಪಾವಳಿ ಹಬ್ಬಕ್ಕೆ ಹೊಸ ಬಟ್ಟೆ ಕೊಡಿಸದ್ದಕ್ಕೆ ಯುವಕ ಆತ್ಮಹತ್ಯೆ