ಬೆಂಗಳೂರು: ಚಿಲುಮೆ ಡೇಟಾ ಕಳವು ಪ್ರಕರಣ ಕೇಂದ್ರ ಚುನಾವಣಾ ಆಯೋಗದ ಮೆಟ್ಟಿಲೇರಿದೆ. ಇಂದು ಕೇಂದ್ರ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರು ನೀಡುತ್ತಿರುವ ಹಿನ್ನೆಲೆ ನಿನ್ನೆ ರಾತ್ರಿಯೇ ಬಿಜೆಪಿಯಿಂದ ಕೇಂದ್ರ ಚುನಾವಣಾ ಆಯೋಗಕ್ಕೆ ಫ್ಯಾಕ್ಸ್ ಮೂಲಕ ದೂರು ಸಲ್ಲಿಕೆ ಆಗಿದೆ.
BIGG NEWS: ಬೆಳ್ಳಂಬೆಳಗ್ಗೆ ಪೊಲೀಸರ ಭರ್ಜರಿ ಕಾರ್ಯಾಚರಣೆ; ರೌಡಿಶೀಟರ್ಗಳ ಮನೆ ಮೇಲೆ ದಾಳಿ
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಚಿಲುಮೆ ಸಂಸ್ಥೆಗೆ ಅನುಮತಿ ನೀಡಿರುವ ವಿಚಾರ ಉಲ್ಲೇಖಿಸಿ ಪರಿಷತ್ ಸದಸ್ಯ ಎನ್. ರವಿಕುಮಾರ್ 4 ಪುಟಗಳ ದೂರು ಸಲ್ಲಿಸಿದ್ದಾರೆ. ಮತಪಟ್ಟಿ ಡಿಲೀಟ್ಗೂ ರಾಜ್ಯ ಸರ್ಕಾರಕ್ಕೂ ಸಂಬಂಧ ಇಲ್ಲ. ಚಿಲುಮೆ ಸಂಸ್ಥೆಯ ನೇಮಕ ಮಾಡಿದ್ದೇ ಕಾಂಗ್ರೆಸ್. ಈ ಪ್ರಕರಣದಲ್ಲಿ ಕೇಂದ್ರ ಚುನಾವಣಾ ಆಯೋಗ ಮಧ್ಯ ಪ್ರವೇಶಿಸಿ ಸೂಕ್ತ ಕ್ರಮ ಕೈಗೊಳ್ಳುವ ಅಗತ್ಯ ಇದೆ ಎಂದು ಮನವಿ ಮಾಡಲಾಗಿದೆ.
ಸದ್ಯ ಚಿಲುಮೆ ಕೇಸ್ ನ ಎಲ್ಲ ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಮುಖ ಆರೋಪಿ ರವಿಕುಮಾರ್ ಸಹ ಪೊಲೀಸ್ ಕಬ್ಜಾದಲ್ಲಿದ್ದಾನೆ. ಈ ಆರೋಪಿಗಳು ವಿಚಾರಣೆ ವೇಳೆ ಕೆಲ ಸುಳಿವು ಬಾಯಿ ಬಿಟ್ಟಿದ್ದಾರೆನ್ನಲಾಗಿದೆ. ಆರೋಪಿಗಳ ವಿಚಾರಣಾ ಹೇಳಿಕೆಯ ಮಾಹಿತಿಗಳೇ ಈಗ ಬಿಜೆಪಿಗೆ ಅಸ್ತ್ರವಾಗಿದೆ.