ಬೆಂಗಳೂರು: ನಮ್ಮ ಮೆಟ್ರೋ ಅಧಿಕಾರಿಗಳ ವಿರುದ್ಧವೇ ಲೋಕಾಯುಕ್ತಕ್ಕೆ ಬಿಜೆಪಿಯಿಂದ ದೂರು ನೀಡಲಾಗಿದೆ. ಕಾರಣವೇನು ಅಂತ ಮುಂದೆ ಓದಿ.
ಬೆಂಗಳೂರಿನ ನಮ್ಮ ಮೆಟ್ರೋ ಅಧಿಕಾರಿಗಳ ವಿರುದ್ಧ ಬಿಜೆಪಿಯಿಂದ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ. ಅದು ನಮ್ಮ ಮೆಟ್ರೋ ನಿಲ್ದಾಣಗಳು, ಶೌಚಾಲಯಗಳು, ಹಸಿರು ಪ್ರದೇಶಕ್ಕೆ ನೀಡಲಾಗಿದ್ದ ಸರ್ಕಾರಿ ಜಾಗವನ್ನು ಖಾಸಗಿ ಹೋಟೆಲ್ ಉದ್ಯಮಿಗಳಿಗೆ ಕೊಟ್ಟು ಅಕ್ರಮ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ಆಗಿದೆ.
ಈ ಹಿನ್ನಲೆಯಲ್ಲಿ ಬಿಜೆಪಿ ನಗರ ಘಟಕದ ಅಧ್ಯಕ್ಷ, ಜಯನಗರ ಶಾಸಕ ಕೆ.ಸಿ ರಾಮಮೂರ್ತಿ ನೇತೃತ್ವದಲ್ಲಿ ಲೋಕಾಯುಕ್ತಕ್ಕೆ ನಮ್ಮ ಮೆಟ್ರೋ ಅಧಿಕಾರಿಗಳ ವಿರುದ್ಧ ದೂರು ನೀಡಿದ್ದಾರೆ. ಬಿಜೆಪಿ ನೀಡಿರುವಂತ ದೂರಿನಲ್ಲಿ ಮೆಟ್ರೋ ಮಾರ್ಗದಲ್ಲಿ ಅಕ್ರಮ ವಾಣಿಜ್ಯ ಮಳಿಗೆಗಳಿಗೆ ಅವಕಾಶ ಮಾಡಿಕೊಟ್ಟಿರುವಂತ ಗಂಭೀರ ಆರೋಪವನ್ನು ಮಾಡಲಾಗಿದೆ.
ಮೃತ ‘KSRTC ಸಿಬ್ಬಂದಿ’ಗಳ ಕುಟುಂಬಕ್ಕೆ ‘ತಲಾ 1 ಕೋಟಿ ಪರಿಹಾರ’ವನ್ನು ಸಚಿವ ರಾಮಲಿಂಗಾರೆಡ್ಡಿ ವಿತರಣೆ
ಸಾರ್ವಜನಿಕರೇ ಗಮನಿಸಿ : ಡಿಸೆಂಬರ್ 31ರೊಳಗೆ ತಪ್ಪದೇ ಈ 3 ಪ್ರಮುಖ ಕೆಲಸಗಳನ್ನು ಮುಗಿಸಿಕೊಳ್ಳಿ.!








