ಬೆಂಗಳೂರು : ಭಾಷೆ ಹೆಸರಿನಲ್ಲೂ ಸಿಎಂ ಸಿದ್ದರಾಮಯ್ಯ ಅವರು ರಾಜಕೀಯ ಮಾಡುತ್ತಾರೆ.ನಾಡು, ನುಡಿ ಮತ್ತು ಜನರ ಬಗೆಗಿನ ಕಾಳಜಿ ಕುರಿತು ನಿಮ್ಮ ಮೊಸಳೆ ಕಣ್ಣೀರಿನ ಕನ್ನಡ ಪ್ರೇಮದಿಂದ ಪಾಠ ಕಲಿಯುವ ಅವಶ್ಯಕತೆ ಬಿಜೆಪಿಗೆ ಇಲ್ಲ ಎಂದು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಬಿ. ವೈ ವಿಜಯೇಂದ್ರ ಟೀಕಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು, ಕನ್ನಡ, ಕನ್ನಡಿಗ ಕರ್ನಾಟಕದ ಬಗ್ಗೆ ದಿಢೀರ್ ಕಾಳಜಿ ಪ್ರದರ್ಶಿಸುತ್ತಿರುವ ಸಿದ್ದರಾಮಯ್ಯ ನವರೇ, ಡಾ. ರಾಜ್ ನೇತೃತ್ವದ ಐತಿಹಾಸಿಕ ಗೋಕಾಕ್ ಚಳುವಳಿಗೆ ಕಾರಣವಾದ ಸರ್ಕಾರ ಯಾವುದು? ಕನ್ನಡಿಗರ ಕಣ್ಮಣಿ ಡಾ. ರಾಜಕುಮಾರ್ ಹಾಗೂ ಸಾಹಿತಿ, ಕಲಾವಿದರನ್ನು ಕನ್ನಡಕ್ಕಾಗಿ ಬೀದಿಗೆ ಇಳಿಸುವ ಪರಿಸ್ಥಿತಿ ತಂದದ್ದು ನಿಮ್ಮ ಕಾಂಗ್ರೆಸ್ ಸರ್ಕಾರ ಎನ್ನುವ ಇತಿಹಾಸ ಮರೆತಿರಾ?
ಕನ್ನಡಕ್ಕೆ ಕಂಟಕರಾಗಿದ್ದು, ಕನ್ನಡಿಗರನ್ನು ತಾತ್ಸಾರವಾಗಿ ಕಂಡಿದ್ದು, ಕನ್ನಡ ಹೋರಾಟಗಾರರನ್ನುಜೈಲಿಗಟ್ಟಿದ್ದು, ಮೊನ್ನೆ ಮೊನ್ನೆಯಷ್ಟೇ ಕನ್ನಡ ನಾಮಫಲಕಕ್ಕಾಗಿ ಹೋರಾಡಿದವರನ್ನು ಜೈಲಿಗಟ್ಟಿದ್ದು ನೀವಲ್ಲವೇ?ನಿಮ್ಮ ಮೊಸಳೆ ಕಣ್ಣೀರಿನ ಕನ್ನಡ ಪ್ರೇಮದಿಂದ ನಾಡು ನುಡಿ ಜನರ ಬಗೆಗಿನ ಕಾಳಜಿಯ ಪಾಠ ಕಲಿಯುವ ದರ್ದು ಬಿಜೆಪಿಗಿಲ್ಲ.
ದೇಶದ ಇತಿಹಾಸದಲ್ಲಿ ಮಾತೃಭಾಷೆಗೆ ಮಾನ್ಯತೆ ಕೊಟ್ಟಿದ್ದರೆ, ಅದು ನಮ್ಮ ನರೇಂದ್ರಮೋದಿ ಜೀ ಅವರ ನೇತೃತ್ವದ ಬಿಜೆಪಿ ಸರ್ಕಾರ ಮಾತ್ರ. “ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ” ಆದ್ಯತೆ ಇರುವುದು ಈ ನೆಲದ ಭಾಷೆಗೆ ಹೊರೆತು ಆಂಗ್ಲ ಭಾಷೆಗಲ್ಲ, ಆದರೆ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ವಿರೋಧಿಸುವ ಮೂಲಕ ನಮ್ಮ ಸಂಸ್ಕೃತಿ, ನಮ್ಮ ಭಾಷೆ ಹಾಗೂ ನಮ್ಮ ತನವನ್ನು ವಿರೋಧಿಸುತ್ತಿರುವ ನೀವು ಕನ್ನಡ ಪ್ರೇಮಿಯಾಗಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದ್ದಾರೆ.
ಮಾನ್ಯ ಅಮಿತ್ ಶಾಅವರ ಬದ್ಧತೆ ಸ್ಥಳೀಯ ಭಾಷೆ, ಅಲ್ಲಿನ ಸಂಸ್ಕೃತಿ, ಆಚಾರ-ವಿಚಾರಗಳು ಉಳಿಯಬೇಕೆನ್ನುವುದೇ ಹೊರತು, ನಿಮ್ಮ ರೀತಿ ಭಾಷೆ ಹೆಸರಿನಲ್ಲೂ ರಾಜಕೀಯ ಮಾಡುವ ಕುಬ್ಜತನವಲ್ಲ ಎಂದು ವಾಗ್ದಾಳಿ ನಡೆಸಿದರು.
ಕನ್ನಡ, ಕನ್ನಡಿಗ ಕರ್ನಾಟಕದ ಬಗ್ಗೆ ದಿಢೀರ್ ಕಾಳಜಿ ಪ್ರದರ್ಶಿಸುತ್ತಿರುವ @siddaramaiah ನವರೇ,
ಡಾ. ರಾಜ್ ನೇತೃತ್ವದ ಐತಿಹಾಸಿಕ ಗೋಕಾಕ್ ಚಳುವಳಿಗೆ ಕಾರಣವಾದ ಸರ್ಕಾರ ಯಾವುದು?
ಕನ್ನಡಿಗರ ಕಣ್ಮಣಿ ಡಾ. ರಾಜಕುಮಾರ್ ಹಾಗೂ ಸಾಹಿತಿ, ಕಲಾವಿದರನ್ನು ಕನ್ನಡಕ್ಕಾಗಿ ಬೀದಿಗೆ ಇಳಿಸುವ ಪರಿಸ್ಥಿತಿ ತಂದದ್ದು ನಿಮ್ಮ ಕಾಂಗ್ರೆಸ್ ಸರ್ಕಾರ ಎನ್ನುವ… https://t.co/EZR4O0L2RM pic.twitter.com/cMjrF8PnUD— Vijayendra Yediyurappa (@BYVijayendra) February 11, 2024