ಚಿಕ್ಕಮಗಳುರು: ಮಾಜಿ ಸಿಎಂ ಸಿದ್ದುಗೆ ಮತ್ತೆ ಪ್ರತಿಭಟನೆ ಬಿಸಿ ಎದುರಾಗಿದ್ದು, ಚಿಕ್ಕಮಗಳೂರಿನಲ್ಲಿ ಬಿಜೆಪಿಗರಿಂದ ಕಪ್ಪು ಬಟ್ಟೆ ಪ್ರದರ್ಶನ ಮಾಡಿರುವ ಘಟನೆ ನಡೆದಿದೆ.
ಇಂದು ಜಿಲ್ಲೆಯ ಶೃಂಗೇರಿ ತಾಲ್ಲೂಕಿನ ಮೆಣಸೆಯ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯ ಸಮೀಪದಲ್ಲಿ ಈ ಘಟನೆ ನಡೆದಿದ್ದು, ಇದೇ ವೇಳೆಯಲ್ಲಿ ಸಿದ್ದರಾಮಯ್ಯ ವಾಹನಕ್ಕೆ ಕಪ್ಪು ಬಟ್ಟೆ ಪ್ರದರ್ಶಿಸಿದರು, ಕೂಡಲೇ ಸ್ಥಳದಲ್ಲಿದ್ದ ಕಾಂಗ್ರೆಸ್ನವರು ಸಿದ್ದರಾಮಯ್ಯಗೆ ಜೈ ಘೋಷಣೆ ಮೊಳಗಿಸಿ ಟಾಂಗ್ ಕೋಡಲು ಮುಂದಾದರು ಸ್ಥಳದಲ್ಲಿದ್ದು, ಪೋಲಿಸ್ ನವರು ಎರಡು ಕಡೆಯವರನ್ನು ಚದುರಿಸಲು ಹರ ಸಾಹಸ ಪಡಬೇಕಾದ ಸನ್ನಿವೇಶ ನಿರ್ಮಾಣವಾಯಿತು.
ಈ ನಡುವೆ ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆದ ಪ್ರಕರಣ ಸಂಬಂಧ ಮಾಜಿ ಸಿಎಂ ಸಿದ್ದರಾಮಯ್ಯ ಟ್ಟಿಟ್ಟರ್ನಲ್ಲಿ “ಸಿದ್ದಾಂತಕ್ಕೆ ಸಿದ್ದಾಂತ ಉತ್ತರವಾಗಬೇಕು ಎಂದು ಮತ್ತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಸಿದ್ದಾಂತಕ್ಕೆ ಸಿದ್ದಾಂತ ಉತ್ತರವಾಗಬೇಕು, ಸಿದ್ದಾಂತವನ್ನು ಕಲ್ಲು-ಮೊಟ್ಟೆಗಳ ಮೂಲಕ ಎದುರಿಸುವುದು, ಸಮರ್ಥಿಸುವುದು ಹೇಡಿಗಳ ಲಕ್ಷಣ” ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಇನ್ನೂ ಸಿದ್ದರಾಮಯ್ಯ ಅವರ ಕಾರಿಗೆ ಬಿಜೆಪಿ ಕಾರ್ಯಕರ್ತರು ಮೊಟ್ಟೆ ಎಸೆದ ಪ್ರಕರಣವನ್ನು ಕಾಂಗ್ರೆಸ್ ದೊಡ್ಡ ಮಟ್ಟದಲ್ಲಿ ರಾಜಕೀಯ ಅಸ್ತ್ರವನ್ನಾಗಿ ಮಾಡಿಕೊಳ್ಳುವುದಕ್ಕೆ ಮುಂದಾಗಿದ್ದು, ಈ ನಿಟ್ಟಿನಲ್ಲಿ ಇದೇ ಆಗಸ್ಟ್ 26 ರಂದು ಕೊಡಗಿನಲ್ಲಿ ಎಸ್ಪಿ ಕಚೇರಿಗೆ ಮುತ್ತಿಗೆ ಹಾಕಲು ಮುಂದಾಗಿದ್ದು, ಬರೋಬ್ಬರಿ ಒಂದು ಲ ಮಂದಿಯನ್ನು ಸೇರಿಸಲು ಸಿದ್ದತೆಯನ್ನು ನಡೆಸಲು ಮುಂದಾಗಿದೆ ಎನ್ನಲಾಗಿದೆ.
ಈ ಮೂಲಕ ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ಅವರು ಬಿಜೆಪಿಗೆ ಟಕ್ಕರು ಕೊಡಲು ಮುಂದಾಗಿರುವುದು ಸುಳ್ಳಲ್ಲ. ಇನ್ನೂ ಟ್ವಿಟರ್ನಲ್ಲಿ ಈ ಬಗ್ಗೆ ಮಾಹಿತಿ ನೀಡಿರವ ಮಾಜಿ ಸಿಎಂ ಸಿದ್ದರಾಮಯ್ಯ ಅವರು, ರಾಜ್ಯ ಪೊಲೀಸ್ ಇಲಾಖೆ ಸಂಘಪರಿವಾರದ ಕೈಗೊಂಬೆಯಾಗಿದೆ. ಬಿಜೆಪಿ ಕರ್ನಾಟಕ ಪಕ್ಷದ ಪುಂಡರ ಗೂಂಡಾಗಿರಿಗೆ ಅವಕಾಶ ನೀಡಿ, ಕೈಕಟ್ಟಿಕೊಂಡು ತಮಾಷೆ ನೋಡುವ ಪೊಲೀಸರ ಕರ್ತವ್ಯ ಲೋಪ ಖಂಡಿಸಿ ಈ ತಿಂಗಳ 26 ರಂದು ಕೊಡಗಿನ ಎಸ್.ಪಿ ಕಚೇರಿಗೆ ಮುತ್ತಿಗೆ ಹಾಕುತ್ತೇವೆ. ಬಿಜೆಪಿಯ ಗೂಂಡಾಗಿರಿಗೆ ಹೋರಾಟದ ಮೂಲಕವೇ ತಕ್ಕ ಉತ್ತರ ಕೊಡುತ್ತೇವೆ ಅಂತ ಹೇಳಿದ್ದಾರೆ.