ಮೈಸೂರು : ಮೈಸೂರು ಕೊಡಗು ಕ್ಷೇತ್ರದಲ್ಲಿ ಪ್ರತಾಪ್ ಸಿಂಹ ಎರಡು ಬಾರಿ ಸಂಸದ ರಾಗಿದ್ದರು ಆದರೆ ಈ ಬಾರಿ ಅವರು ಸೋಲುತ್ತಾರೆ ಎಂಬ ಮಾಹಿತಿ ಬಂದಮೇಲೆ ಅವರಿಗೆ ಬಿಜೆಪಿ ಟಿಕೆಟ್ ನೀಡಿಲ್ಲ ಎಂದು ಮೈಸೂರಿನಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ತಿಳಿಸಿದರು.
UPDATE : ಬೆಂಗಳೂರಿನ ಜಯನಗರದಲ್ಲಿ ಕಾರಿನಲ್ಲಿ ಸಿಕ್ಕ ಹಣ 1.40ಕೋಟಿ : ಅಧಿಕಾರಿಗಳಿಂದ ಮಾಹಿತಿ ಬಹಿರಂಗ
ಮೈಸೂರಿನಲ್ಲಿ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿಯಲ್ಲಿ ಯಡಿಯೂರಪ್ಪ, ಬೊಮ್ಮಾಯಿ, ಪ್ರತಾಪ್ ಸಿಂಹ ಸಾಧನೆ ಶೂನ್ಯ. ಮೈಸೂರು ಕೊಡಗು ಕ್ಷೇತ್ರದಿಂದ ಪ್ರತಾಪ್ ಸಿಂಹ ಎರಡು ಬಾರಿ ಸಂಸದರಾಗಿದ್ದರು.ರಾಜ್ಯಕ್ಕೆ ಆದ ಅನ್ಯಾಯದ ವಿರುದ್ಧ ಬಿಜೆಪಿ ಸಂಸದರು ಪ್ರಶ್ನೆ ಮಾಡಲಿಲ್ಲ. ಪ್ರತಾಪ್ ಸಿಂಹನನ್ನು ಬದಲಿಸಿ ಬೇರೆಯವರಿಗೆ ಬಿಜೆಪಿ ಟಿಕೆಟ್ ಕೊಟ್ಟಿದ್ದಾರೆ ಸೋಲುತ್ತಾರೆ ಎನ್ನುವ ಮಾಹಿತಿಯ ಮೇರೆಗೆ ಪ್ರತಾಪ್ ಸಿಂಹಗೆ ಟಿಕೆಟ್ ಕೊಟ್ಟಿಲ್ಲ ಎಂದರು.
ಬಿಜೆಪಿ ಮತ್ತು ‘ಎಐಎಂಐಎಂ’ ಕೈ ಜೋಡಿಸಿ ಕೆಲಸ ಮಾಡುತ್ತಿವೆ: ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್
ನಾನು ಮಾಡಿದ್ದನ್ನು ಬಿಜೆಪಿ ತಾವು ಮಾಡಿದ್ದೇವೆ ಎಂದು ಹೇಳಿಕೊಂಡರು.ಬಿಜೆಪಿಯವರು ರಾಜ್ಯದಲ್ಲಿ ಹಿಂಬಾಗಿಲಿನಿಂದ ಬಂದು ಅಧಿಕಾರ ಮಾಡಿದರು. ಮೂರು ವರ್ಷ 10 ತಿಂಗಳ ಅವಧಿಯಲ್ಲಿ ಇಬ್ಬರು ಮುಖ್ಯಮಂತ್ರಿಗಳಾದರು. ಬಿಜೆಪಿಯವರಿಗೆ ಸುಭದ್ರ ಸರ್ಕಾರ ಕೊಡಲು ಸಾಧ್ಯವಾಗಲಿಲ್ಲ. ನಮ್ಮ ಕಾರ್ಯಕರ್ತರು ಮತದಾರರ ಬಳಿ ಹೋಗಿ ಸತ್ಯವನ್ನು ಹೇಳಬೇಕು. ಸೋಮಶೇಖರ ಜೊತೆ ರಾಜೀವ್ ಸೇರಿರುವುದರಿಂದ ಆನೆ ಬಲ ಬಂದಂತಿದೆ ಎಂದು ಮೈಸೂರಿನಲ್ಲಿ ಕಾಂಗ್ರೆಸ್ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದರು.