ಬೆಂಗಳೂರು : ರಾಮ ಮಂದಿರ ಉದ್ಘಾಟನೆಗೆ ರಾಷ್ಟ್ರಪತಿ ಆಹ್ವಾನಿಸದಿರುವುದಕ್ಕೆ ವಿಧಾನಸಭೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರ ನಡುವೆ ಗದ್ದಲ ಗಲಾಟೆ ಕೋಲಾಹಲ ಉಂಟಾಯಿತು.
ಸದನದಲ್ಲಿ ಬಿಜೆಪಿ ನಾಯಕರನ್ನು ಕಾಂಗ್ರೆಸ್ ಸದಸ್ಯರು ಕೆಣಕಿದ್ದಾರೆ.ಈ ವೇಳೆ ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರ ನಡುವೆ ಗದ್ದಲ ಗಲಾಟೆ ಏರ್ಪಟ್ಟಿತು.ಈ ವೇಳೆ ಕಾಂಗ್ರೆಸ್ ವಿರುದ್ಧ ಬಿಜೆಪಿ ಸದಸ್ಯರು ಧಿಕ್ಕಾರ ಕೂಗಿದರು ಶ್ರೀ ರಾಮನ ವಿರೋಧಿಗಳು ಅಂತ ಬಿಜೆಪಿ ಸದಸ್ಯರು ಕಾಂಗ್ರೆಸ್ ವಿರುದ್ಧ ಧಿಕ್ಕಾರ ಕೂಗಿದರು.ಜೈ ಶ್ರೀ ರಾಮ್ ಎಂದು ಬಿಜೆಪಿ ಸದಸ್ಯರು ಘೋಷಣೆ ಕೂಗಿದರು.
ಇದೆ ವೇಳೆ ಕರ್ನಾಟಕದಲ್ಲಿ ಉಗ್ರರ ಚಟುವಟಿಕೆ ಸ್ಲೀಪರ್ ಸೇಲ್ ಬಗ್ಗೆ ವಿಪಕ್ಷ ನಾಯಕ ಆರ್. ಅಶೋಕ್ ಇದೆ ವೇಳೆ ಪ್ರಸ್ತಾಪ ಮಾಡಿದರು..ಈಗ ಶಂಕಿತರು ಸುಧಾರಿತ ಬಾಂಬ್ ತಯಾರು ಮಾಡುತ್ತಿದ್ದಾರೆ.ಬಳ್ಳಾರಿಯಲಿ ಕಿಂಗ್ ಪಿನ್ ಮೊಹಮ್ಮದ್ ಸುಲೇಮಾನ್ ಇದ್ದಾನೆ.
ಮುಗ್ಧ ಯುವಕರನ್ನು ಗುರಿಯಾಗಿಸಿಕೊಂಡು ಕೃತ್ಯಕ್ಕೆ ಕುಮ್ಮಕ್ಕು ನೀಡಲಾಗುತ್ತಿದೆ. ಶಿವಾಜಿನಗರದಲ್ಲೂ ಎನ್ಐಎ ತಂಡ ಒಬ್ಬನನ್ನು ಬಂಧಿಸಿದೆ. ರಾಜ್ಯದಲ್ಲಿ ಇಂತಹವರು ಸ್ಲೀಪರ್ ಸೆಲ್ ಆಗಿ ಕೆಲಸ ಮಾಡುತ್ತಿದ್ದಾರೆ. ಸ್ಲೀಪರ್ ಸೆಲ್ ಗೆ ಎಲ್ಲಿಂದ ಯಾರಿಗೆ ಹಣ ಬರುತ್ತಿದೆಯೋ ಗೊತ್ತಿಲ್ಲ ಎಂದು ವಿಧಾನಸಭೆಯಲ್ಲಿ ಪಕ್ಷ ನಾಯಕರು ಹೇಳಿದರು.