ಬೆಂಗಳೂರು : ನಿನ್ನೆ ಪ್ರಧಾನಿ ನರೇಂದ್ರ ಮೋದಿಯವರು ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಬಿಜೆಪಿ ಸಮಾವೇಶದಲ್ಲಿ ಭಾಗಿಯಾಗಲು ತೆರಳುತ್ತಿದ್ದ ವೇಳೆ ಕಾಂಗ್ರೆಸ್ ರಾಜ್ಯ ಯುವ ಘಟಕದ ಅಧ್ಯಕ್ಷ ಮಹಮ್ಮದ್ ನಲಪಾಡ್ ಚಂಬು ಪ್ರದರ್ಶಿಸಿದರು. ಈ ಒಂದು ಘಟನೆಗೆ ಸಂಬಂಧಿಸಿದಂತೆ ಇದೀಗ ಬಿಜೆಪಿ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ.
ಪ್ರಧಾನಿ ಮೋದಿ ತೆರಳುತ್ತಿದ್ದ ರಸ್ತೆಯಲ್ಲಿ ಭದ್ರತಾ ಲೋಪ ಆರೋಪಕ್ಕೆ ಸಂಬಂಧಿಸಿದಂತೆ ರಾಜ್ಯ ಚುನಾವಣಾ ಆಯೋಗಕ್ಕೆ ಬಿಜೆಪಿ ನಿಯೋಗದಿಂದ ದೂರು ಸಲ್ಲಿಕೆಯಾಗಿದೆ.ವಸಂತ್ ಕುಮಾರ್ ನೇತೃತ್ವದ ನಿಯೋಗದಿಂದ ಇದೀಗ ದೂರು ಸಲ್ಲಿಕೆಯಾಗಿದೆ. ಬಿಜೆಪಿ ಕಾನೂನು ಪ್ರಕೋಷ್ಠ ರಾಜ್ಯಸಂಚಾಲ ವಸಂತ್ ಕುಮಾರ್ ಅವರು ಇದೀಗ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ.
ಮೊಹಮ್ಮದ್ ನಲಪಾಡ್ ಹಾಗೂ ಸಿದ್ದಾಪುರ ಜಾನಿ ಪ್ರತಿಭಟನೆ ಮಾಡಿದ್ದಾರೆ ಚೊಂಬು ಪ್ರದರ್ಶಿಸಿದ್ದಾರೆ. ಪೊಲೀಸರು ಇದ್ದರೂ ಕೂಡ ಲೆಕ್ಕಿಸದೆ ಪ್ರಧಾನಿ ಅವರು ಬರುವ ರಸ್ತೆಯಲ್ಲಿ ನುಗ್ಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.