ಬೆಂಗಳೂರು : ಗ್ಯಾರಂಟಿ ಯೋಜನೆಗಳ ಬಗ್ಗೆ ಹಬ್ಬಿರುವ ಊಹಾಪೋಹದ ಬೆನ್ನಲ್ಲೇ ಇದೀಗ ಡಿಸಿಎಂ ಡಿಕೆ ಶಿವಕುಮಾರ್ ಸ್ಪಷ್ಟನೆ ನೀಡಿದ್ದು, ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಯಗಳನ್ನ ನಿಲ್ಲಿಸಲ್ಲ. ಬಿಬಿಜೆಪಿಯವ್ರು ಇನ್ನೂ ನೂರು ಜನ್ಮ ತಾಳಿದ್ರೂ ಈ ಐದು ಗ್ಯಾರಂಟಿ ಯೋಜನೆಗಳನ್ನ ನಿಲ್ಲಿಸೋದಕ್ಕೆ ಆಗೊಲ್ಲ. ಕಾಂಗ್ರೆಸ್ ಶಕ್ತಿ ಈ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸವೆಂದರೆ ದೇಶದ ಇತಿಹಾಸ ಎಂದು ತಿಳಿಸಿದರು.
ಇಂದು ಪದ್ಮನಾಭನಗರದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಕಚೇರಿಯ ಉದ್ಘಾಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಾನು ಪಕ್ಷದ ಅಧ್ಯಕ್ಷನಾಗಿ ಹೇಳ್ತಿದ್ದೇನೆ ಹಾಗೂ ಸಿಎಂ ಸಿದ್ದರಾಮಯ್ಯ ಕೂಡ ಹೇಳಿದ್ದಾರೆ, ಯಾವುದೆ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲ್ಲ. ಕೆಲವು ಕಡೆ ಅನುಕೂಲ ಇದ್ದವರು ಕೂಡ ಯೋಜನೆ ಪಡೆಯುತ್ತಿದ್ದಾರೆ. ತೆರಿಗೆ ಪಾವತಿಸುವವರು, ಉಳ್ಳವರು ಪಡೆಯುತ್ತಿದ್ದಾರೆ ಎಂಬ ದೂರು ಬಂದಿದೆ.ಆ ಕುರಿತು ಪರಿಶೀಲನೆ ಮಾಡುತ್ತೇವೆ ಆದರೆ ಯೋಜನೆಗಳನ್ನು ಮಾತ್ರ ನಿಲ್ಲಿಸಲ್ಲ ಎಂದು ಸ್ಪಷ್ಟನೆ ನೀಡಿದರು.
ಹಿಂದೆ ನಾವು ಗೃಹಲಕ್ಷ್ಮೀ ಯೋಜನೆ ಜಾರಿ ಮಾಡಿದಾಗ ಇದರಿಂದ ಕುಟುಂಬಗಳಲ್ಲಿ ಅತ್ತೆ-ಸೊಸೆ ನಡುವೆ ಜಗಳ ಹಚ್ಚಿ ದೂರ ಮಾಡ್ತಿದ್ದಾರೆ ಎಂದು ಬಿಜೆಪಿಯವ್ರು ಹೇಳಿದ್ರು. ನೀವು ಅತ್ತೆ ಸೊಸೆ ಜಗಳ ಆಡಿದ್ದೇರನಮ್ಮ ಎಂದು ಮಹಿಳೆಯರನ್ನ ಪ್ರಶ್ನಿಸಿದರು ಮುಂದುವರಿದು, ನಾನು ಪುರುಷರಿಗೆ ಎರಡು ಸಾವಿರ ಕೊಟ್ಟಿಲ್ಲ ಯಾಕೆಂದರೆ ಅವ್ರು ತಗೊಂಡು ವೈನ್‌ಶಾಪ್‌ಗೆ ಹೋಗ್ತಾರೆ ಅಂತಾ. ಹೀಗಾಗಿ ಮನೆಯೊಡತಿಗೆ ಹಣ ನೀಡಿದೇವು ಎಂದರು.
ನಿಮ್ಮ ಯೋಜನೆಯನ್ನು ಬಿಜೆಪಿಯವರು ಪಡೆದುಕೊಳ್ತಿದ್ದಾರೆ. ಬಿಜೆಪಿ ಅವ್ರು ಫ್ರೀ ಕರೆಂಟು ಪಡೆಯುತ್ತ ಇದ್ದಾರೆ. ಫ್ರೀಯಾಗಿ ಬಸ್‌ನಲ್ಲಿ ಓಡಾಡ್ತಾ ಇದ್ದಾರೆ. ಅಶೋಕ್‌ಗೆ ಹೇಳೋದಕ್ಕೆ ಹೇಳಿ ಬಿಜೆಪಿಯವರು ಎಲ್ಲರೂ ಬಸ್ ಟಿಕೆಟ್ ತಗೊಂಡು ಪ್ರಯಾಣ ಮಾಡಲಿ ಅಂತಾ. ಗ್ಯಾರಂಟಿ ಯೋಜನೆಗಳನ್ನ ಪಡೆಯಬೇಡಿ, ಬರೆದುಕೊಡೋಕೆ ಹೇಳಲಿ ಎಂದು ಕಾಂಗ್ರೆಸ್ ಯೋಜನೆಗಳನ್ನು ವಿರೋಧಿಸಿದವರು ಯಾಕೆ ಬಳಸಿಕೊಳ್ತಾರೆ? ಎಂದು ವಾಗ್ದಾಳಿ ನಡೆಸಿದರು.