ಮಂಡ್ಯ : ಬಿಜೆಪಿಯವರಿಗೆ ಕೇವಲ ಸುಳ್ಳು ಹೇಳಿಕೊಂಡೆ ಬಂದಿರುವಂತಹ ಚಾಳಿ ಇದೆ. ಬಿಜೆಪಿಗರು ಸುಳ್ಳನ್ನ 100 ಸಾರಿ ಹೇಳಿ ಸತ್ಯ ಮಾಡಬೇಕು ಅನ್ನೋವಂತ ‘ಹಿಟ್ಲರ್’ ವಂಶಸ್ಥರು ಇವರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಇಂದು ಅವರು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರುವ ಕೆ ಆರ್ ಎಸ್ ಡ್ಯಾಮ್ ಗೆ ಬಾಗಿನ ಅರ್ಪಿಸಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಿಜೆಪಿಯವರಿಗೆ ಜೆಡಿಎಸ್ ನವರಿಗೆ ತಾಕತ್ತಿದ್ದರೆ ಬಡವರ ವಿರುದ್ಧ ಹೇಳಿಕೆ ಕೊಡಲಿ ನೋಡೋಣ. ಗ್ಯಾರಂಟಿಗಳನ್ನು ನಿಲ್ಲಿಸಿ ಅಂತ ನೇರವಾಗಿ ಹೇಳಲಿ ನೋಡೋಣ. ನಿಮಗೆ ದಮ್ ಇಲ್ಲ. ಈ ವರ್ಷದ ಬಜೆಟ್ಟು 3,71,000 ಕೋಟಿ ರೂಪಾಯಿ. ಯಾವ ಇಲಾಖೆಗೆ ದುಡ್ಡು ಕೊಟ್ಟಿಲ್ಲ ಹೇಳಿ ನೀರಾವರಿ ಕೊಟ್ಟಿಲ್ವಾ? ಸಮಾಜ ಕಲ್ಯಾಣ ಇಲಾಖೆ ಕೊಟ್ಟಿಲ್ವಾ? ಎಲ್ಲರಿಗೂ ಕೊಟ್ಟಿದ್ದೇವೆ ಸುಮ್ಮನೆ ಪ್ರಚಾರ ಮಾಡುವುದು ಸಿದ್ದರಾಮಯ್ಯ ದಲಿತರ ಬಗ್ಗೆ ಮಾತನಾಡುತ್ತಾರೆ ಆದರೆ ದಲಿತರ ವಿರುದ್ಧವಾಗಿ ನಡೆದುಕೊಳ್ಳುತ್ತಾರೆ ಅಂತ ಅಪಪ್ರಚಾರ ಮಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ನಾವು ದಲಿತರಿಗೆ ಮಾಡಿರುವ ಕೆಲಸ ಬಿಜೆಪಿ ಅವರು ದಲಿತರ ದ್ರೋಹಿಗಳು ಬೇರೆ ಯಾವ ಸರ್ಕಾರ ಮಾಡಿಲ್ಲ. ಅವರು ನಮಗೆ ಪಾಠ ಹೇಳು ಕೊಡುವಂತ ಕೆಲಸ ಮಾಡುತ್ತಾರೆ ನಾನು ಕೇಳ್ತೀನಿ ಇವತ್ತು ನರೇಂದ್ರ ಮೋದಿಯವರಿಗೆ ಹಾಗೂ ರಾಜ್ಯ ಬಿಜೆಪಿ ನಾಯಕರಿಗೆ ಕೇಳುತ್ತೇನೆ ರಾಜ್ಯ ಬಿಜೆಪಿ ಎ ಸಿ ಪಿ ಟಿ ಎಸ್ ಪಿ ಕಾಯಿದೆ ಕರ್ನಾಟಕ ಬಿಟ್ಟರೆ ನಮ್ಮ ಸರ್ಕಾರ ಬಿಟ್ಟರೆ ಬಿಜೆಪಿ ಅಧಿಕಾರ ಇರುವಂತಹ ಯಾವ ರಾಜ್ಯಗಳಲ್ಲಿ ಇದೆ ಹೇಳಿ ನೋಡೋಣ? ಇವತ್ತು ಎಸಿಪಿ ಟಿಎಸ್ಪಿ ಕಾಯ್ದೆ ಐಡಿ 24% ದಲಿತರಿಗೆ 39,121 ಕೋಟಿಯನ್ನ ಕರ್ನಾಟಕ ಸರ್ಕಾರ ಖರ್ಚು ಮಾಡುತ್ತಿದೆ.
ಕೇಂದ್ರ ಸರ್ಕಾರದವರು ಮೊನ್ನೆ ಬಜೆಟ್ 48 ಕೋಟಿ ಲಕ್ಷ ಬಜೆಟ್ ಮಂಡನೆ ಮಾಡಿದರು. ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರಿಗೆ ಇಟ್ಟಂತಹ ಹಣ ಕೇವಲ 65000 ಕೋಟಿ ರೂಪಾಯಿ. ಆ 48 ಲಕ್ಷ ದಲ್ಲಿ 65,000 ಕೋಟಿ ಮಾತ್ರ ಇಟ್ಟಿದ್ದಾರೆ. ಜನಸಂಖ್ಯೆಗೆ ಅನುಗುಣವಾಗಿ ಇಡಬೇಕು ತಾನೆ? ನಿಮಗೆ ದಲಿತರ ಬಗ್ಗೆ ಮಾತನಾಡುವಂತಹ ನೈತಿಕತೆ ಇದೆಯಾ? ಹಿಂದುಳಿದವರ ಬಗ್ಗೆ ಮಾತನಾಡುವ ಕುರಿತು ನೈತಿಕತೆ ಇದೆಯ? ಅಲ್ಪಸಂಖ್ಯಾತರ ಬಗ್ಗೆ ಮಾತನಾಡುವ ನೈತಿಕತೆ ಇದೆಯಾ?
ನೀವು ಯಾವಾಗಲೂ ಸಾಮಾಜಿಕ ನ್ಯಾಯದ ವಿರುದ್ಧ ವಿರುದ್ಧವಾದವರು. ಸಮ ಸಮಾಜ ನಿರ್ಮಾಣ ಮಾಡಬಾರದು ಅಂತ ಇರುವವರು ಇವರು. ಬಸವಣ್ಣನವರ ವಿಚಾರಗಳು, ಅಂಬೇಡ್ಕರ್ ಅವರ ವಿಚಾರಗಳು, ಗಾಂಧೀಜಿ ಅವರ ವಿಚಾರಗಳು, ಇದಕ್ಕೆ ವಿರುದ್ಧವಾಗಿದ್ದವರು ಇವರು. ಇವರಿಂದ ನಾವು ಪಾಠ ಕಲಿಯುವ ಅಗತ್ಯತೆ ನಮಗೆ ಇಲ್ಲ. ಈ ರಾಜ್ಯದ ಜನ ನಮಗೆ ಆಶೀರ್ವಾದ ಮಾಡಿದ್ದಾರೆ. ನಾವು ಎಲ್ಲ ಜಾತಿಯ ಬಡವರು ಎಲ್ಲಾ ಧರ್ಮದ ಬಡವರಿಗೆ ಆರ್ಥಿಕ ಸಾಮಾಜಿಕ ತುಂಬುವಂತಹ ಪ್ರಯತ್ನ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೇ ಮಾಡುತ್ತಿದೆ.
ಹೇಳಿದ್ದೇ ಸುಳ್ಳು ಹೇಳಿ ಎಷ್ಟು ದಿನ ಜನರ ದಾರಿ ತಪ್ಪಿಸುತ್ತೀರಿ? ಸುಳ್ಳೇನೂರು ಸಾರಿ ಹೇಳಿ ಸತ್ಯಮಾಡಬೇಕು ಅಂತ ಹಿಟ್ಲರ್ ನ ವಂಶಸ್ತರು ಇವರೆಲ್ಲ. ಇವರಿಂದ ನಾವು ಏನು ಪಾಠ ಕಲಿಯಬೇಕಾದಂತಹ ಅಗತ್ಯತೆ ಇಲ್ಲ. ನಾನು ಕಾವೇರಿ ಮಾತೆಯಲ್ಲಿ ಪ್ರಾರ್ಥನೆ ಮಾಡುತ್ತೇನೆ. ತಾಯಿ ಕಾವೇರಿ ಪ್ರತಿ ವರ್ಷ ಕನ್ನಂಬಾಡಿ ಕಟ್ಟೆಯನ್ನು ತುಂಬಿಸಮ್ಮ ಎಂದು ಪ್ರಾರ್ಥಿಸುತ್ತೇನೆ ಎಂದರು.
ಇವತ್ತು ನಾಡಿನ ಸಮೃದ್ಧಿ ಆಗಬೇಕಾದರೆ ಒಳ್ಳೆ ಮಳೆ ಬಿದ್ದರೆ ಮಾತ್ರ ಒಳ್ಳೆ ಬೆಳೆ ಬೆಳೆದಾಗ ಮಾತ್ರ ರೈತರ ಸಮೃದ್ಧಿಯಾಗುತ್ತದೆ. ರೈತರ ಮುಖದಲ್ಲಿ ಹರ್ಷವನ್ನು ಕಾಣಲಿಕ್ಕೆ ಸಾಧ್ಯವಾಗುತ್ತದೆ. ಬಿಜೆಪಿ ಹಾಗೂ ಜೆಡಿಎಸ್ ನವರ ಮಾತು ಕೇಳಿ ನಮ್ಮ ಮೇಲೆ ಅನುಮಾನ ಪಟ್ಟು ಕೊಳ್ಳುವಂತಹ ಕೆಲಸಮಾಡಬೇಡಿ. ಅವರು ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಸಿದ್ದರಾಮ ಸರಕಾರವನ್ನ ದುರ್ಬಲಗೊಳಿಸಬೇಕು ಹತ್ತಿರಗೊಳಿಸಬೇಕು ಅಂತ ಪ್ರಯತ್ನ ಮಾಡುತ್ತಿದ್ದಾರೆ. ನಾನು ಅನೇಕ ಕಡೆಗಳಲ್ಲಿ ನೋಡಿದ್ದೇನೆ. ಕೇಂದ್ರದಲ್ಲಿ ನರೇಂದ್ರ ಮೋದಿ ಅವರ ಬಿಜೆಪಿ ಸರ್ಕಾರ ಬಂದ ಮೇಲೆ 121 ಈಡಿ ಪ್ರಕರಣಗಳು ಆಗಿವೆ. 121 ರಲ್ಲಿ 115 ಪ್ರಕರಣಗಳು ವಿರೋಧ ಪಕ್ಷದ ಮೇಲೆ ದಾಳಿಯಾಗಿವೆ ಎಂದು ತಿಳಿಸಿದರು.