ಬೆಂಗಳೂರು: ಲೋಕಸಭಾ ಚುನಾವಣೆಯ ಜೊತೆ ಜೊತೆಗೆ ವಿಧಾನಸಭಾ ಉಚ ಚುನಾವಣೆಯನ್ನು ಚುನಾವಣಾ ಆಯೋಗವು ಘೋಷಣೆ ಮಾಡಿತ್ತು. ಹೀಗೆ ಘೋಷಣೆ ಮಾಡಲಾಗಿದ್ದಂತ ಸುರಪುರ ವಿಧಾನಸಭಾ ಉಪ ಚುನಾವಣೆಗೆ ಬಿಜೆಪಿಯಿಂದ ರಾಜುಗೌಡ ನಾಯಕ್ ಗೆ ಟಿಕೆಟ್ ಘೋಷಣೆ ಮಾಡಲಾಗಿದೆ.
ಶಾಸಕ ರಾಜಾವೆಂಕಟಪ್ಪ ನಾಯಕ್ ನಿಧನದಿಂದ ತೆರವಾಗಿದ್ದಂತ ಯಾದಗಿರಿ ಜಿಲ್ಲೆಯ ಸುರಪುರ ವಿಧಾನಸಭಾ ಕ್ಷೇತ್ರಕ್ಕೆ ಚುನಾವಣಾ ಆಯೋಗದಿಂದ ಉಪ ಚುನಾವಣೆ ಘೋಷಣೆ ಮಾಡಲಾಗಿತ್ತು. ಮೇ.7ರಂದು ಸುರಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಮತದಾನ ನಡೆಯಲಿದೆ. ಅಂದೇ ಮೊದಲ ಹಂತದ ಲೋಕಸಭಾ ಚುನಾವಣೆಗೆ ಮತದಾನ ಕೂಡ ನಡೆಯಲಿದೆ.
ಈಗಾಗಲೇ ಕಾಂಗ್ರೆಸ್ ಪಕ್ಷದಿಂದ ಸುರಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ದಿವಂಗತ ರಾಜಾ ವೆಂಕಟಪ್ಪ ನಾಯಕ್ ಅವರ ಪುತ್ರನಿಗೆ ಟಿಕೆಟ್ ಘೋಷಣೆ ಮಾಡಲಾಗಿತ್ತು. ಇಂದು ಬಿಜೆಪಿಯಿಂದ ರಾಜುಗೌಡ ನಾಯಕ್ ಅವರಿಗೆ ಟಿಕೆಟ್ ನೀಡಲಾಗಿದೆ.
ಕಳೆದ ಮೇ ನಲ್ಲಿ ನಡೆದಿದ್ದಂತ ವಿಧಾನಸಭಾ ಚುನಾವಣೆಯಲ್ಲಿ ರಾಜಾ ವೆಂಕಟಪ್ಪ ನಾಯಕ ಗೆಲುವು ಸಾಧಿಸಿದ್ದರು. ಆದ್ರೇ ಅವರು ಅಕಾಲಿಕ ನಿಧನಹೊಂದಿದ್ದರು. ಅವರ ನಿಧನದಿಂದ ತೆರವಾದಂತ ಸುರಪುರ ವಿಧಾನಸಭಾ ಕ್ಷೇತ್ರಕ್ಕೆ ಮೇ.7ರಂದು ಚುನಾವಣೆ ನಡೆಯಲಿದೆ. ಜೂನ್.4ರಂದು ಫಲಿತಾಂಶ ಪ್ರಕಟವಾಗಲಿದೆ.
‘ಧರ್ಮ ಯುದ್ಧ’ ಆರಂಭಿಸುವ ಮುನ್ನ ‘ಮಂಜುನಾಥನ ದರ್ಶನ’ ಪಡೆದಿದ್ದೇನೆ: ಡಿಸಿಎಂ ಡಿ.ಕೆ. ಶಿವಕುಮಾರ್
BREAKING: ‘ಶಾಸಕ ರಿಜ್ವಾನ್ ಅರ್ಷದ್’ಗೆ ಬಿಗ್ ರಿಲೀಫ್: ಶಾಸಕರಾಗಿ ಆಯ್ಕೆ ಅಸಿಂಧು ಕೋರಿದ್ದ ಅರ್ಜಿ ವಜಾ