ಬೆಂಗಳೂರು : ಬಿಟ್ ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ಇನ್ಸ್ಪೆಕ್ಟರ್ ಲಕ್ಷ್ಮಿಕಾಂತಯ್ಯನನ್ನು ಸಿಐಡಿ ಹಾಗೂ ಎಸ್ಐಟಿ ಬಂಧಿಸಿದೆ ಎಂದು ತಿಳಿದು ಬಂದಿದೆ. ಈ ಹಿಂದೆ ಲಕ್ಷ್ಮಿಕಾಂತಯ್ಯ ಬಿಟ್ ಕಾಯಿನ್ ಪ್ರಕರಣದ ತನಿಖಾಧಿಕಾರಿ ಆಗಿದ್ದರು.ಕೆಲ ಹೊತ್ತಿನಲ್ಲಿ ಇನ್ಸ್ಪೆಕ್ಟರ್ ನನ್ನು ಬೆಂಗಳೂರಿನ ಒಂದನೇ ACMM ಕೋರ್ಟಿಗೆ ಎಸ್ಐಟಿ ಆರೋಪಿಯನ್ನು ಹಾಜರುಪಡಿಸಲಿದೆ.
ಇನ್ನೂ ಇದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಟ್ ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಪ್ರಮುಖ ಆರೋಪಿಯನ್ನು ಬಂಧಿಸುವುದಕ್ಕೆ ತೆರಳಿದಾಗ ಆರೋಪಿ ಡಿವೈಎಸ್ಪಿ ಶ್ರೀಧರ್ ಪೂಜಾರ್, ಪೊಲೀಸರ ಕಾರಿಗೆ ಗುದ್ದಿ ಎಸ್ಕೇಪ್ ಆದ ಘಟನೆ ನಿನ್ನೆ ಕಾಫಿ ಬೋರ್ಡ್ ಸಿಗ್ನಲ್ ಬಳಿ ನಡೆದಿದೆ.
ಎಸ್ಐಟಿ ತಂಡದ ಇನ್ಸ್ಪೆಕ್ಟರ್ ಅನಿಲ್ ಮತ್ತು ಅವರ ತಂಡ ಬಂಧಿಸಲು ಹೋಗಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಇನ್ನು ಶ್ರೀಧರ್ ಪೂಜಾರ್ ವಿರುದ್ಧ 307 ಕೊಲೆ ಯತ್ನ, 353 ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಹಿನ್ನಲೆ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು ಮಾಡಲಾಗಿದೆ.