ಕೊಪ್ಪಳ : ತಲ್ವಾರ್ನಿಂದ ಕೇಕ್ ಕತ್ತರಿಸಿ ಬರ್ತ್ಡೇ ಆಚರಣೆ ಮಾಡಲಾಗಿದೆ. ಕೊಪ್ಪಳದಲ್ಲಿ ಈ ಒಂದು ಘಟನೆ ನಡೆದಿದೆ. ಯಮನೂರಪ್ಪ ಇಸ್ಲಾಂಪುರ ಎನ್ನುವಂತ ಯುವಕ ತಲ್ವಾರ್ನಿಂದ ಕೇಕ್ ಕತ್ತರಿಸಿದ್ದು ಶಸ್ತ್ರಾಸ್ತ್ರ ಕಾಯಿದೆ ಉಲ್ಲಂಘಿಸಿದ್ದಾನೆ.
ಫೆಬ್ರುವರಿ 24ರಂದು ಈ ಒಂದು ಘಟನೆ ನಡೆದಿದ್ದು ತಲ್ವಾರ್ನಿಂದ ಕೇಕ್ ಅನ್ನು ಯಮನೂರಪ್ಪ ಕಟ್ ಮಾಡಿದ್ದಾನೆ. ಇದೆಲ್ಲ ಕೂಡ ಕಾನೂನು ಬಾಹಿರ ಎಂದು ಹೇಳಿದರೂ ಕೂಡ ಇಂತಹ ಘಟನೆಗಳು ಮರುಕಳಿಸುತ್ತಿವೆ. ಸಾಲಾಗಿಟ್ಟಿರುವ ಕೇಕನ್ನು ತಲ್ವಾರ್ನಿಂದ ಯಮನೂರಪ್ಪ ಕಟ್ ಮಾಡಿದ್ದಾನೆ. ಈ ಕುರಿತು ಕನಕಗಿರಿ ಠಾಣೆಯಲ್ಲಿ ಯಮನೂರಪ್ಪ ವಿರುದ್ಧ ಕೇಸ್ ದಾಖಲಾಗಿದೆ.








