ಕೊಟ್ಟಾಯಂ: ಕೇರಳದ ಕೊಟ್ಟಾಯಂ ಜಿಲ್ಲೆಯ ಮೂರು ಗ್ರಾಮಗಳಲ್ಲಿ ಕೊರೊನಾ ಬೆನ್ನಲ್ಲೆ ಹಕ್ಕಿ ಜ್ವರ ಹೆಚ್ಚಳಗೊಂಡಿದ್ದು, ಈಗಾಗಲೇ 6,000ಕ್ಕೂ ಹೆಚ್ಚು ಪಕ್ಷಿಗಳ ಮಾರಣಹೋಮ ಮಾಡಲಾಗಿದೆ
Watch: ಮಧ್ಯರಾತ್ರಿ ರಸ್ತೆಯಲ್ಲೆ ಹುಡುಗಿಯರು ಜುಟ್ಟು ಹಿಡಿದು, ದೊಣ್ಣೆಯಲ್ಲಿ ಥಳಿಸಿಕೊಂಡ video viral
ಕೊಟ್ಟಾಯಂ ಜಿಲ್ಲೆಯ ವೇಚೂರು, ನೀಂದೂರು ಮತ್ತು ಅರ್ಪೂಕರ ಪಂಚಾಯಿತಿ ವ್ಯಾಪ್ತಿಯಲ್ಲಿ ಶನಿವಾರ 6,017 ಪಕ್ಷಿಗಳು ಅವುಗಳಲ್ಲೂ ಹೆಚ್ಚಾಗಿ ಬಾತುಕೋಳಿಗಳನ್ನು ಹತ್ಯೆ ಮಾಡಲಾಗಿದೆ. ವೇಚೂರಿನಲ್ಲಿ ಸುಮಾರು 133 ಬಾತುಕೋಳಿಗಳು ಮತ್ತು 156 ಕೋಳಿಗಳು, ನೀಂದೂರಿನಲ್ಲಿ 2,753 ಬಾತುಕೋಳಿಗಳು ಮತ್ತು ಅರ್ಪೂಕರದಲ್ಲಿ 2,975 ಬಾತುಕೋಳಿಗಳು ಸಾವನ್ನಪ್ಪಿವೆ ಎಂದು ಕೊಟ್ಟಾಯಂ ಜಿಲ್ಲಾಡಳಿತ ಮಾಹಿತಿ ನೀಡಿದೆ
Watch: ಮಧ್ಯರಾತ್ರಿ ರಸ್ತೆಯಲ್ಲೆ ಹುಡುಗಿಯರು ಜುಟ್ಟು ಹಿಡಿದು, ದೊಣ್ಣೆಯಲ್ಲಿ ಥಳಿಸಿಕೊಂಡ video viral
ಹಕ್ಕಿಜ್ವರ ಎಂದರೇನು?
- ಹಕ್ಕಿ ಜ್ವರ ಎಂದರೆ ಅದು ಹಕ್ಕಿಗಳಿಗೆ ಬರುವಂತಹ ಜ್ವರವಾಗಿದೆ. ಆದರೆ ಇದು ಮನುಷ್ಯರಿಗೆ ಕೂಡ ಹಬ್ಬುವ ಕಾರಣದಿಂದಾಗಿ ತುಂಬಾ ಭೀತಿಯ ವಾತಾವರಣ ಸೃಷ್ಟಿಯಾಗಿದೆ.
- ಹಲವಾರು ರೀತಿಯ ಹಕ್ಕಿ ಜ್ವರದ ಮಾದರಿಗಳನ್ನು ಪತ್ತೆ ಮಾಡಲಾಗಿದ್ದು, ಇದರಲ್ಲಿ ನಾಲ್ಕು ಮಾದರಿಯಾಗಿರುವಂತಹ H5N1, H7N9, H5N6 ಮತ್ತು H5N8 ಮಾದರಿಯ ಹಕ್ಕಿ ಜ್ವರಗಳು ಇತ್ತೀಚಿನ ವರ್ಷಗಳಲ್ಲಿ ತುಂಬಾ ಚಿಂತೆಯನ್ನು ಸೃಷ್ಟಿ ಮಾಡಿದೆ.
- H5N1, H7N9, H5N6 ಮಾದರಿಯ ಹಕ್ಕಿ ಜ್ವರದ ವೈರಸ್ ವಿಶ್ವದ ಹಲವು ದೇಶಗಳಲ್ಲಿ ಕಂಡುಬಂದಿದ್ದು, ಇದರಿಂದಾಗಿ ಸಾವಿರಾರು ಮಂದಿ ಸಾವನ್ನಪ್ಪಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ H5N1 ಸಾಮಾನ್ಯ ಮಾದರಿಯ ಹಕ್ಕಿ ಜ್ವರವಾಗಿದ್ದು, ಇದು ಮನುಷ್ಯರಲ್ಲಿ 1997ರಲ್ಲಿ ಪತ್ತೆ ಮಾಡಲಾಗಿದ್ದು, ಇದು ಪೀಡಿತರಲ್ಲಿ ಶೇ.60ರಷ್ಟು ಮಂದಿಯ ಪ್ರಾಣಕ್ಕೆ ಹಾನಿ ಉಂಟು ಮಾಡಿದೆ
- ಹಕ್ಕಿಗಳಿಗೆ ಇದು ತುಂಬಾ ಮಾರಣಾಂತಿಕ ವೈರಸ್ ಆಗಿದ್ದು, ಮನುಷ್ಯರು ಹಾಗೂ ಪ್ರಾಣಿಗಳಿಗೆ ಕೂಡ ಇದು ಸುಲಭವಾಗಿ ಹಬ್ಬುವುದು.
- ಆದರೆ ಮನುಷ್ಯರಿಂದ ಮನುಷ್ಯರಿಗೆ ಇದುವರೆಗೆ ಹಬ್ಬಿರುವುದು ತಿಳಿದುಬಂದಿಲ್ಲ. H5N8 ಮಾದರಿಯ ಹಕ್ಕಿ ಜ್ವರದ ವೈರಸ್ ಇದುವರೆಗೆ ವಿಶ್ವದಲ್ಲಿ ಮನುಷ್ಯರಲ್ಲಿ ಕಂಡುಬಂದಿಲ್ಲ ಎಂದು ರಾಷ್ಟ್ರೀಯ ಆರೋಗ್ಯ ಇಲಾಖೆಯು ಹೇಳಿದೆ.
Watch: ಮಧ್ಯರಾತ್ರಿ ರಸ್ತೆಯಲ್ಲೆ ಹುಡುಗಿಯರು ಜುಟ್ಟು ಹಿಡಿದು, ದೊಣ್ಣೆಯಲ್ಲಿ ಥಳಿಸಿಕೊಂಡ video viral
ಹಕ್ಕಿ ಜ್ವರದ ಲಕ್ಷಣಗಳೇನು ?
* ಕೆಮ್ಮು
ಉಸಿರಾಟದಲ್ಲಿ ತೊಂದರೆ
ತೀವ್ರ ಜ್ವರ
ತಲೆನೋವು
ಸ್ನಾಯುಗಳ ನೋವು
ಮೂಗು ಸೋರುವಿಕೆ
ಗಂಟಲಿನ ಊತ
ಮೂಗು ಮತ್ತು ಒಸಡಿನಿಂದ ರಕ್ತ ಸೋರುವಿಕೆ
ಕೆಲವರಲ್ಲಿ ವಾಕರಿಕೆ, ವಾಂತಿ ಮತ್ತು ಬೇಧಿಯು ಕಂಡುಬರುವುದು ಎಂದು ಹೇಳಲಾಗಿದೆ. ಇನ್ನು ಕೆಲವರಲ್ಲಿ ಕಣ್ಣು ಕೆಂಪಾಗುವ ಸಮಸ್ಯೆಯು ಕಂಡುಬರುವುದು. ಸೋಂಕು ದೇಹವನ್ನು ಒಗ್ಗಿಕೊಂಡು 2-5 ದಿನಗಳಲ್ಲಿ ಇದರ ಲಕ್ಷಣಗಳು ಕಾಣಿಸಿಕೊಳ್ಳುವುದು. ಇದಕ್ಕೆ ತಕ್ಷಣವೇ ಚಿಕಿತ್ಸೆ ಪಡೆದುಕೊಂಡರೆ ಆಗ ಇದು ಪ್ರಾಣಾಂತಿಕವಾಗುವುದನ್ನು ತಪ್ಪಿಸಬಹುದು.
ಕೆಲವೊಂದು ವೈರಲ್ ವಿರೋಧಿ ಔಷಧಿಗಳಿಂದ ಇದಕ್ಕೆ ಚಿಕಿತ್ಸೆ ನೀಡಲಾಗುತ್ತದೆ. ಇದರಿಂದ ಸೋಂಕಿನ ತೀವ್ರತೆಯು ಕಡಿಮೆ ಆಗುವುದು.
Watch: ಮಧ್ಯರಾತ್ರಿ ರಸ್ತೆಯಲ್ಲೆ ಹುಡುಗಿಯರು ಜುಟ್ಟು ಹಿಡಿದು, ದೊಣ್ಣೆಯಲ್ಲಿ ಥಳಿಸಿಕೊಂಡ video viral
ಹರಡುವ ವಿಧಾನ
- ಸೋಂಕು ತಗುಲಿರುವಂತಹ ಹಕ್ಕಿಯನ್ನು ಸ್ಪರ್ಶಿಸುವುದು, ಅದರ ಹಿಕ್ಕೆಗಳು ಮತ್ತು ಹಾಸನ್ನು ಮುಟ್ಟುವುದು, ಸೋಂಕಿತ ಹಕ್ಕಿಯನ್ನು ಕೊಲ್ಲುವುದು ಅಥವಾ ಅದನ್ನು ಅಡುಗೆಗೆ ಬಳಸುವುದು ಇತ್ಯಾದಿಯಿಂದ ಸೋಂಕು ಹರಡುವುದು.
- ಸೋಂಕು ಹರಡಿರುವಂತಹ ಪ್ರದೇಶದಲ್ಲಿ ಕೋಳಿ ಅಥವಾ ಕೋಳಿ ಮೊಟ್ಟೆಯನ್ನು ಸರಿಯಾಗಿ ಬೇಯಿಸಿ ತಿಂದರೆ ಅದರಿಂದ ಯಾವುದೇ ಸೋಂಕು ಹಬ್ಬುವ ಸಾಧ್ಯತೆಯು ಇರುವುದಿಲ್ಲ.
Watch: ಮಧ್ಯರಾತ್ರಿ ರಸ್ತೆಯಲ್ಲೆ ಹುಡುಗಿಯರು ಜುಟ್ಟು ಹಿಡಿದು, ದೊಣ್ಣೆಯಲ್ಲಿ ಥಳಿಸಿಕೊಂಡ video viral
ಸ್ವಚ್ಛತೆ ಬಗ್ಗೆ ಗಮನ ನೀಡಿ
- ಕೈಗಳನ್ನು ನಿರಂತರವಾಗಿ ತೊಳೆಯುತ್ತಿರಿ. ಬಿಸಿ ನೀರು ಮತ್ತು ಸೋಪು ಬಳಸಿ. ಆಹಾರ ಸೇವನೆಗೆ ಮೊದಲು ಅಥವಾ ಅದನ್ನು ತಯಾರಿಸುವ ಮೊದಲು ಕೈಗಳನ್ನು ಸರಿಯಾಗಿ ತೊಳೆಯಿರಿ. ಆಲ್ಕೋಹಾಲ್ ಇರುವ ಸ್ಯಾನಿಟೈಸರ್ ನ್ನು ಪ್ರಯಾಣದ ವೇಳೆ ಬಳಸಿ.
- ತೆರೆದ ಮಾರುಕಟ್ಟೆ ಅಥವಾ ಹಕ್ಕಿಗಳು ಹೆಚ್ಚಿರುವಂತಹ ಮಾರುಕಟ್ಟೆಯಿಂದ ದೂರವಿರಿ.
- ಸರಿಯಾಗಿ ಬೇಯಿಸದೆ ಇರುವ ಕೋಳಿ ಅಥವಾ ಬಾತುಕೋಳಿ ತಿನ್ನಬೇಡಿ.
- ಹಸಿ ಮೊಟ್ಟೆ ಸೇವಿಸಬೇಡಿ.
- ಪ್ರಯಾಣಕ್ಕೆ ಮೊದಲು ಜ್ವರದ ಬಗ್ಗೆ ವೈದ್ಯರಿಂದ ಮಾಹಿತಿ ಪಡೆಯಿರಿ. ನೀವು ಹಕ್ಕಿ ಜ್ವರ ಬರದಂತೆ ತಡೆಯಲು ಸಾಧ್ಯವಿಲ್ಲದೆ ಇದ್ದರೂ ಅದರ ಅಪಾಯವನ್ನು ಕಡಿಮೆ ಮಾಡಬಹುದು.
- H5N1 ಹಕ್ಕಿಜ್ವರದ ವೈರಸ್ ಗೆ ಈಗಾಗಲೇ ಲಸಿಕೆ ಕಂಡು ಹಿಡಿಯಲಾಗಿದ್ದು, ಇದಕ್ಕೆ ಅಮೆರಿಕಾದ ಎಫ್ ಡಿಎಯಿಂದ ಅನುಮತಿ ಕೂಡ ಸಿಕ್ಕಿದೆ. ಆದರೆ ಇದನ್ನು ಸಾರ್ವಜನಿಕ ಬಳಕೆಗೆ ಇದುವರೆಗೆ ನೀಡಲಾಗಿಲ್ಲ.
Watch: ಮಧ್ಯರಾತ್ರಿ ರಸ್ತೆಯಲ್ಲೆ ಹುಡುಗಿಯರು ಜುಟ್ಟು ಹಿಡಿದು, ದೊಣ್ಣೆಯಲ್ಲಿ ಥಳಿಸಿಕೊಂಡ video viral