ಬೆಳಗಾವಿ : ಟಿಕೆಟ್ ವಿಚಾರವಾಗಿ ಕನ್ನಡ ಮಾತನಾಡುವ ಎಂದಿದ್ದಕ್ಕೆ ಬೆಳಗಾವಿಯಲ್ಲಿ ಕಂಡಕ್ಟರ್ ಮಹದೇವಪ್ಪ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಯುವತಿ ಕಂಡಕ್ಟರ್ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಿದ್ದಳು. ಇದೀಗ ಸಂತ್ರಸ್ತ ಯುವತಿಯ ತಾಯಿ ಪೋಕ್ಸೋ ಪ್ರಕರಣವನ್ನು ಹಿಂಪಡೆದಿದ್ದೇವೆ. ಈ ಒಂದು ಪ್ರಕರಣ ಇಲ್ಲಿಗೆ ಬಿಟ್ಟುಬಿಡಿ ಬೆಳೆಸಬೇಡಿ ಎಂದು ವಿಡಿಯೋ ಮೂಲಕ ಮನವಿ ಮಾಡಿಕೊಂಡಿದ್ದಾರೆ.
ವಿಡಿಯೋ ಹೇಳಿಕೆಯಲ್ಲಿ ಅವರು, ನಾವು ಸಹ ಕನ್ನಡಿಗರು ಇದನ್ನು ಬೆಳೆಸಬೇಡಿ ನಾವು ಮರಾಠಿಗರು ಆದರೂ ಕನ್ನಡ ಭಾಷೆ ಮಾತನಾಡುತ್ತೇವೆ. ಹಾಗಾಗಿ ಈ ಒಂದು ಘಟನೆ ಮುಂದಕ್ಕೆ ತೆಗೆದುಕೊಂಡು ಹೋಗದೆ ಬೆಳೆಸದೆ ಇಲ್ಲಿಗೆ ಬಿಟ್ಟುಬಿಡಿ. ಪೋಕ್ಸೋ ಕೇಸ್ ಹಿಂಪಡೆದಿದ್ದೇವೆ. ನಾವು ಸಹ ಕನ್ನಡಿಗರು ಎಂದು ವಿಡಿಯೋದಲ್ಲಿ ತಿಳಿಸಿದ್ದಾರೆ.
ಟಿಕೆಟ್ ವಿಚಾರವಾಗಿ ನಮ್ಮಮಗಳ ಹಾಗೂ ಕಂಡಕ್ಟರ್ ನಡುವೆ ಜಗಳ ನಡೆದಿದೆ. ಬಳಿಕ ನನ್ನ ಮಗಳು ಕಂಡಕ್ಟರ್ ವಿರುದ್ಧ ಹೋಗ್ತೋ ಕೇಸ್ ದಾಖಲಿಸಿದ್ದಾಳೆ ಭಾಷೆ ವಿಚಾರವಾಗಿ ಕರ್ನಾಟಕ ಮಹಾರಾಷ್ಟ್ರ ನಡುವೆ ಗಲಾಟೆ ನಡೆಯುವುದು ಬೇಡ. ಭಾಷೆ ಮರಾಠಿಯ ಆಗಿದ್ದರು ನಾವು ಸಹ ಕನ್ನಡಿಗರೇ. ಇದರಿಂದ ನಮಗೂ ಬೇಸರವಾಗಿದೆ. ಹಾಗಾಗಿ ಈ ಒಂದು ಪೋಕ್ಸೋ ಪ್ರಕರಣ ಹಿಂಪಡೆಯುತ್ತಿದ್ದೇವೆ ಎಂದು ಸಂತ್ರಸ್ತೆ ತಾಯಿ ತಿಳಿಸಿದ್ದಾರೆ.