ಬಿಹಾರ: ಬಿಹಾರದ ಕೋಚಿಂಗ್ ಸೆಂಟರ್ನಲ್ಲಿ ಶಿಕ್ಷಕರೊಬ್ಬರು 5 ವರ್ಷದ ವಿದ್ಯಾರ್ಥಿಗೆ ಮನಬಂದಂತೆ ಥಳಿಸಿದ ಪರಿಣಾಮ ಬಾಲಕ ಪ್ರಜ್ಞೆ ತಪ್ಪಿದ್ದು, ಆಸ್ಪತ್ರೆಗೆ ದಾಖಲಿಸಿರುವ ಘಟನೆ ನಡೆದಿದೆ.
ಜಯಾ ಕೋಚಿಂಗ್ ಕ್ಲಾಸ್ ಟ್ಯೂಷನ್ ಸೆಂಟರ್ನಲ್ಲಿ ನಡೆದ ಈ ಘಟನೆಯ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲಾಗಿದ್ದು, ವೈರಲ್ ಆಗುತ್ತಿದೆ.
ಬಾಲಕನನ್ನು ಹೊಡೆಯಲು ಶಿಕ್ಷಕನು ಕೋಲು ಬಳಸಿದ್ದಾನೆ. ಹೊಡೆತದ ನೋವಿನಿಂದ ಬಾಲಕ ಎಷ್ಟೇ ಅಂಗಲಾಚಿ ಬೇಡಿದರೂ, ಮಣಿಯದ ಶಿಕ್ಷಕ ಮನಬಂದಂತೆ ಥಳಿಸಿದ್ದಾನೆ ಎನ್ನಲಾಗಿದೆ. ಅಮಾನುಷವಾಗಿ ಥಳಿಸಿದ್ದರಿಂದ ವಿದ್ಯಾರ್ಥಿ ಪ್ರಜ್ಞೆ ತಪ್ಪಿದ್ದು, ಸ್ಥಳೀಯರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಬಾಲಕನ ಹೆಸರನ್ನು ಛೋಟು ಹೆಸರಿಸಲಾಗಿದೆ. ಮಗುವಿನ ಸ್ಥಿತಿಯ ಬಗ್ಗೆ ಶಿಕ್ಷಕನನ್ನು ವಿಚಾರಿಸಿದಾಗ, ʻಛೋಟು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ. ಈ ವೇಳೆ ಅವನನ್ನು ಆಸ್ಪತ್ರೆಗೆ ದಾಖಲಿಸಿದ್ದೇವೆʼ ಎಂದು ಕೋಚಿಂಗ್ ಸೆಂಟರ್ ಮಾಲೀಕ ಅಮರಕಾಂತ್ ಕುಮಾರ್ ಹೇಳಿಕೆ ನೀಡಿದ್ದಾನೆ.
ಸ್ಥಳೀಯರೊಬ್ಬರು ಇಡೀ ಘಟನೆಯನ್ನು ರೆಕಾರ್ಡ್ ಮಾಡಿದ್ದು, ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಘಟನೆ ಬಗ್ಗೆ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
13 ವರ್ಷದ ಪೋರನ ಸಾಧನೆ: 17 ಕಂಪ್ಯೂಟರ್ ಪ್ರೊಗ್ರಾಮಿಂಗ್ ಭಾಷೆಗಳನ್ನು ಕಲಿತ ತಮಿಳುನಾಡಿನ ʻಅರ್ನವ್ ಶಿವರಾಮ್ʼ