ಬಿಹಾರ : ಇತ್ತೀಚೆಗೆ ನಕಲಿ ಮದ್ಯ ಸೇವಿಸಿ ಸಾವನ್ನಪ್ಪಿದವರಿಗೆ ಯಾವುದೇ ಪರಿಹಾರ ನೀಡುವುದಿಲ್ಲ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಶುಕ್ರವಾರ ಹೇಳಿದ್ದಾರೆ.
#WATCH | "No compensation will be given to people who died after drinking…We have been appealing- if you drink, you will die…those who talk in favour of drinking will not bring any good to you…", said CM Nitish Kumar in assembly earlier today.
(Source: Bihar Assembly) pic.twitter.com/zquukNtRIA
— ANI (@ANI) December 16, 2022
ಬಿಹಾರದಲ್ಲಿ ಮದ್ಯಪಾನ ನಿಷೇಧದ ವಿಚಾರವಾಗಿ ರಾಜ್ಯ ವಿಧಾನಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಿಎಂ ನಿತೀಶ್ ಕುಮಾರ್ , ಮದ್ಯ ಸೇವಿಸಿದರೆ ಸಾಯುತ್ತಾರೆ ಎಂದಿದ್ದಾರೆ. ಈಗಾಗಲೇ ಬಿಹಾರದ ಛಾಪ್ರಾದಲ್ಲಿ ಮಂಗಳವಾರ ನಕಲಿ ಮದ್ಯ ಸೇವಿಸಿ ಸುಮಾರು 60 ಮಂದಿ ಸಾವನ್ನಪ್ಪಿದ್ದಾರೆ. ಈ ವಿಷಯವು ಮದ್ಯಪಾನ ನಿಷೇಧದ ಕುರಿತು ಗಂಭೀರ ಹೇಳಿಕೆಯನ್ನು ನೀಡಿದ್ದಾರೆ. ಛಾಪ್ರಾದಲ್ಲಿ ನಕಲಿ ಮದ್ಯ ಸೇವಿಸಿ ಸಾವನ್ನಪ್ಪಿದ ನಂತರ, ಶುಕ್ರವಾರ ರಾಜ್ಯದ ಸಿವಾನ್ ನಗರದಲ್ಲಿ 5 ಜನರು ಮದ್ಯ ಸೇವಿಸಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಬಿಹಾರದಲ್ಲಿ ಜನರ ಸಾವು ಯಾವಾಗಲೂ ಎದ್ದುಕಾಣುತ್ತದೆ ಮತ್ತು ಮದ್ಯಪಾನ ಸೇವನೆಯನ್ನು ನಿಲ್ಲಿಸಿ ಎಚ್ಚರಿಕೆ ನೀಡಿದ್ದಾರೆ. ನಕಲಿ ಮದ್ಯ ಸೇವಿಸಿ ಸಾವನ್ನಪ್ಪಿದರೆ ಪರಿಹಾರ ಸಿಗುತ್ತೆ ಎಂದು ಕೊಂಡರೆ ಅದು ನಿಮ್ಮ ತಪ್ಪು ಕಲ್ಪನೆ ಎಂದು ನಿತೀಶ್ ಕುಮಾರ್ ಮುಖ್ಯಮಂತ್ರಿ ಒತ್ತಿ ಹೇಳಿದರು.
ನೀವು ಒಳ್ಳೆಯ ಕೆಲಸ ಮಾಡಿ, ಈ ರೀತಿಯ ಮದ್ಯಪಾನ ಕುಡಿಯುವ ಕೆಟ್ಟ ಕೆಲಸ ಮಾಡಬೇಡಿ. ಜನರು ಮದ್ಯ ಸೇವಿಸಿದರೆ ಅದು ಯಾವುದೇ ರೀತಿಯಲ್ಲಿ ಫಲಕಾರಿಯಾಗುವುದಿಲ್ಲ ಆರೋಗ್ಯಕ್ಕೆ ಹಾನಿಯಾಗುತ್ತದೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮದ್ಯ ಸೇವಿಸದಂತೆ ಮನವಿ ಮಾಡಿದ್ದಾರೆ