ಮೈಸೂರು : ವಿಶ್ವವಿಖ್ಯಾತ ಮೈಸೂರು ದಸರಾ 2022 ವಿದೇಶಿ, ದೇಶಿ ಪ್ರವಾಸಿಗರು ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ನಿನ್ನೆ ಜಿಲ್ಲಾಡಳಿತ “ಗೋಲ್ಡ್ ಕಾರ್ಡ್” ( Gold Card Release )ಬಿಡುಗಡೆ ಮಾಡಿದೆ. ಈ ಬೆನ್ನಲ್ಲೇ ಪ್ರತಿ ಗೋಲ್ಡ್ ಕಾರ್ಡ್ ಮೌಲ್ಯ 4,999 ರೂಪಾಯಿ ಆಗಿದೆ. 4999 ರೂ ಮೌಲ್ಯದ ಕಾರ್ಡ್ 8000 ರೂಪಾಯಿಗೆ ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ
BIGG NEWS: ನಮ್ಮ ರಾಜೀನಾಮೆಯಿಂದ ಬೊಮ್ಮಾಯಿ ಸಿಎಂ ಆದ್ರೂ; ಹಾವೇರಿ ಜಿಲ್ಲೆಗೆ ಮೆಗಾ ಡೈರಿ ಬಂತು; ಬಿಸಿ ಪಾಟೀಲ್
ಸವಾರಿ ಇಂಟರ್ನ್ಯಾಷನಲ್ ಟ್ರಾವೆಲ್ಸ್ ಹೆಸರಿನಲ್ಲಿ ಪಾಸ್ ಮಾರಾಟ ಮಾಡಲಾಗುತ್ತಿದೆ. ಇನ್ನೂ ಸ್ವಲ್ಪ ದಿನ ಕಳೆದರೆ 10ಸಾವಿರ ರೂ. ಆಗುತ್ತದೆ ಎಂಬ ವದಂತಿ ಹಬ್ಬಿಸಲಾಗುತ್ತಿದೆ. ಇನ್ನೂ ಎರಡೇ “ಗೋಲ್ಡ್ ಕಾರ್ಡ್” ಕಾರ್ಡ್ ಉಳಿದಿದೆ ಎಂದು ದೂರವಾಣಿ ಕರೆ ಮೂಲಕ ತಿಳಿಸಲಾಗಿದೆ. 5 ಗೋಲ್ಡ್ ಕಾರ್ಡ್ ಖರೀದಿಸಿದರೆ 7 ಸಾವಿರಕ್ಕೆ ನೀಡುವುದಾಗಿ ಆಫರ್ ನೀಡಲಾಗುತ್ತಿದೆ.
BIGG NEWS: ನಮ್ಮ ರಾಜೀನಾಮೆಯಿಂದ ಬೊಮ್ಮಾಯಿ ಸಿಎಂ ಆದ್ರೂ; ಹಾವೇರಿ ಜಿಲ್ಲೆಗೆ ಮೆಗಾ ಡೈರಿ ಬಂತು; ಬಿಸಿ ಪಾಟೀಲ್
ಗೋಲ್ಡ್ ಕಾರ್ಡ್ ಸೌಲಭ್ಯ ಪಡೆಯುವ ವಿಧಾನ :
ಗೋಲ್ಡ್ ಕಾರ್ಡ್ ಪಡೆಯಲು www.mysoredasara.gov.in ಆನ್ಲೈನ್ನಲ್ಲಿ ಅವಕಾಶ ಕಲ್ಪಿಸಲಾಗಿದೆ. ಗೋಲ್ಡ್ ಕಾರ್ಡ್ ಬೆಲೆ 4,999 ರೂಪಾಯಿ ಆಗಿದೆ. ಒಂದು ಬಾರಿಗೆ ಗರಿಷ್ಠ ಎರಡು ಗೋಲ್ಡ್ ಕಾರ್ಡ್ ಖರೀದಿಸಬಹುದು. ಒಮ್ಮೆ ಆನ್ಲೈನ್ ಪಾವತಿ ದೃಢೀಕರಿಸಿದ ಬಳಿಕ ಪ್ರವಾಸಿಗರು ಗೋಲ್ಡ್ ಕಾರ್ಡ್ ಅನ್ನು ನಾಳೆ (ಸೆ. 29) ಬೆಳಗ್ಗೆ 11 ಗಂಟೆಯಿಂದ ಸಂಜೆ 5.30ರವರೆಗೆ ಮೈಸೂರಿನ ಮಯೂರ ಹೋಟೆಲ್ ಹತ್ತಿರದ ಪ್ರವಾಸೋದ್ಯಮ ಇಲಾಖೆಯಲ್ಲಿ ಪಡೆಯಬಹುದು ಎಂಬ ಮಾಹಿತಿ ನೀಡಲಾಗಿತ್ತು
ಗೋಲ್ಡ್ ಕಾರ್ಡ್ ಉಪಯೋಗ
ಗೋಲ್ಡ್ ಕಾರ್ಡ್ ಪಡೆದುಕೊಳ್ಳುವಾಗ ಹಣ ಪಾವತಿ ನಂತರ ಸ್ವೀಕೃತವಾಗುವ ಇ – ಮೇಲ್ ಪ್ರತಿ ಹಾಗೂ ಯಾವುದಾದರೊಂದು ಐಡಿ ಪ್ರೂಫ್ ಅನ್ನು ಕಡ್ಡಾಯ ಹಾಜರುಪಡಿಸಬೇಕು. ಗೋಲ್ಡ್ ಕಾರ್ಡ್ ಪಡೆದವರಿಗೆ ದಸರಾ ಜಂಬೂಸವಾರಿ ವೀಕ್ಷಣೆ, ಪಂಜಿನ ಕವಾಯತು, ಬನ್ನಿಮಂಟಪ ವೀಕ್ಷಣೆ, ಮೈಸೂರು ಅರಮನೆ, ಶ್ರೀ ಚಾಮರಾಜೇಂದ್ರ ಮೃಗಾಲಯ, ಚಾಮುಂಡೇಶ್ವರಿ ಅಮ್ಮನವರ ದೇವಸ್ಥಾನ, ಫಲಪುಷ್ಪ ಪ್ರದರ್ಶನ, ದಸರಾ ವಸ್ತು ಪ್ರದರ್ಶನ, ಸೆಂಟ್ ಫಿಲೋಮಿನ ಚರ್ಚ್, ರೈಲ್ವೆ ಮ್ಯೂಸಿಯಂ ಹಾಗೂ ಕೃಷ್ಣರಾಜಸಾಗರ ಅಣೆಕಟ್ಟಿಗೆ ಒಮ್ಮೆ ಮಾತ್ರ ಉಚಿತ ವೀಕ್ಷಣೆಗೆ ಅವಕಾಶವಿದೆ.
BIGG NEWS: ನಮ್ಮ ರಾಜೀನಾಮೆಯಿಂದ ಬೊಮ್ಮಾಯಿ ಸಿಎಂ ಆದ್ರೂ; ಹಾವೇರಿ ಜಿಲ್ಲೆಗೆ ಮೆಗಾ ಡೈರಿ ಬಂತು; ಬಿಸಿ ಪಾಟೀಲ್