ಬೆಂಗಳೂರು : ಮಾಜಿ ಸಿಎಂ ಸಿದ್ದರಾಮಯ್ಯ ಅವರು ನನ್ನ ಎದುರು ಗೋಮಾಂಸ ತಿಂದರೆ ಜೈಲಿಗೆ ಹಾಕಿಸುತ್ತೇನೆ ಎಂದು ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ಸವಾಲು ಹಾಕಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರೇ ನಿಮಗೆ ತಾಕತ್ ಇದ್ದರೆ ಹಸುವನ್ನು ಕೊಲ್ಲಿ ನೋಡೋಣ. ನಾನು ಹಂದಿ ತಿಂತೇನೆ. ಹಸು ತಿಂತೇನೆ ಎಂದೆಲ್ಲಾ ಮಾತನಾಡುವ ನಿಮಗೆ ತಾಕತ್ ಇದ್ದರೆ ನನ್ನ ಎದುರುಗಡೆ ಹಸು ಮಾಂಸ ತಿನ್ನಿ ನಿಮ್ಮನ್ನು ಒಳಗೆ ಹಾಕಿಸುತ್ತೇನೆ ಎಂದು ಹೇಳಿದ್ದಾರೆ.
WATCH VIDEO: ಅಳುತ್ತಿರುವ ಅಕ್ಕನನ್ನು ಸಮಾಧಾನಪಡಿಸುತ್ತಿರುವ ಪುಟ್ಟ ಬಾಲಕ… ಹೃದಯಸ್ಪರ್ಶಿ ವಿಡಿಯೋ ವೈರಲ್
ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾಯಿದೆ ಜಾರಿಗೆ ಬಂದ ಮೇಲೆ ಗೋವುಗಳ ಹತ್ಯೆ ಸಂಖ್ಯೆ ಇಳಿಕೆಯಾಗುತ್ತಿದೆ, ಕಾನೂನು ಉಲ್ಲಂಘಿಸಿ ಗೋಹತ್ಯೆ ಎಸಗುವ ಆರೋಪಿಗಳಿಗೆ 50 ಸಾವಿರ ರೂ.ಯಿಂದ 10 ಲಕ್ಷದವರೆಗೆ ದಂಡ ವಿಧಿಸಲಾಗುತ್ತದೆ ಎಂದು ಸಚಿವ ಪ್ರಭು ಚೌಹಾಣ್ ಹೇಳಿದ್ದಾರೆ.
ರಾಜ್ಯದಲ್ಲಿ 1964ರಿಂದಲೇ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ಬಂದಿತ್ತು, ಆಗ ಗೋಹತ್ಯೆಗೆ 1 ಸಾವಿರ ದಂಡ, 6 ತಿಂಗಳು ಜೈಲು ಶಿಕ್ಷೆ ಇತ್ತು. ಈಗ ಕಾಯ್ದೆ ತಿದ್ದುಪಡಿ ಮಾಡಿದ್ದೇವೆ, ಆರೋಪಿಗಳಿಗೆ 2 ರಿಂದ 7 ವರ್ಷದವರೆಗೆ ಜೈಲು ಶಿಕ್ಷೆ ಹಾಗೂ 50 ಸಾವಿರ ರೂ.ಯಿಂದ 10 ಲಕ್ಷದವರೆಗೆ ದಂಡ ವಿಧಿಸಲಾಗುತ್ತದೆ ಎಂದು ಸಚಿವ ಪ್ರಭು ಚೌಹಾಣ್ ಹೇಳಿದ್ದಾರೆ.