ಕೊಲಂಬಿಯಾ : ಕೊಲಂಬಿಯಾ ದೇಶದ ವಸತಿ ಪ್ರದೇಶದಲ್ಲಿ ವಿಮಾನವೊಂದು ಪತನಗೊಂಡಿದೆ. ಕೊಲಂಬಿಯಾದ ಎರಡನೇ ದೊಡ್ಡ ನಗರವಾದ ಮೆಡೆಲಿನ್’ನಲ್ಲಿ ಈ ಘಟನೆ ನಡೆದಿದ್ದು, ಅಪಘಾತದಲ್ಲಿ ಎಂಟು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಆರು ಪ್ರಯಾಣಿಕರು ಮತ್ತು ಇಬ್ಬರು ಸಿಬ್ಬಂದಿಯೊಂದಿಗೆ ಒಲಯಾ ಹೆರೆರಾ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದಾ ನಂತ್ರ ಎಂಜಿನ್ ವೈಫಲ್ಯದಿಂದ ಕಟ್ಟಡಕ್ಕೆ ಅಪ್ಪಳಿಸಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿಮಾನದಲ್ಲಿದ್ದ ಎಂಟು ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಮೆಡೆಲಿನ್ ಮೇಯರ್ ಡೇನಿಯಲ್ ಕ್ವಿಂಟೆರೊ ಹೇಳಿದ್ದಾರೆ.
ಮಾಹಿತಿ ಪಡೆದ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ. ಘಟನೆಗೆ ಸಂಬಂಧಿಸಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
#ÚltimaHora | Según informó el alcalde de la ciudad de Medellín, en Colombia, una avioneta se estrelló en una zona residencial. Video cortesía: @AlertaNews24 pic.twitter.com/Kn2H5V0sDB
— elsalvador.com (@elsalvadorcom) November 21, 2022
ಈ ರಾಜ್ಯದ 95% ಯುವಜನತೆ ʻಮಾನಸಿಕ ಆರೋಗ್ಯ ಸಮಸ್ಯೆʼಯಿಂದ ಬಳಲುತ್ತಿದೆ: ಅಧ್ಯಯನದಿಂದ ಶಾಕಿಂಗ್ ವರದಿ
BIGG NEWS: ರಾಜ್ಯದ 5.86 ಲಕ್ಷ ವಿಶೇಷಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ: ಡಾ.ಕೆ.ಸುಧಾಕರ್
BREAKING NEWS : ಸಚಿವ ಬಿ.ಸಿ ಪಾಟೀಲ್ ಗೆ ತೀವ್ರ ‘ಮಂಡಿನೋವು’ : ಆಸ್ಪತ್ರೆಗೆ ದಾಖಲು |B.C Patil