ನವದೆಹಲಿ: ಮುಂಬರುವ ಬೋರ್ಡ್ ಪರೀಕ್ಷೆಗಳ ನಕಲಿ ದಿನಾಂಕ ಹಾಳೆಗಳ ವಿರುದ್ಧ ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ ಎಚ್ಚರಿಕೆ ನೀಡಿದೆ. 10, 12 ನೇ ತರಗತಿಯ ಪರೀಕ್ಷೆಯನ್ನು ಫೆಬ್ರವರಿ 15, 2023 ರಿಂದ ನಡೆಸಲಾಗುವುದು ಮತ್ತು ವೇಳಾಪಟ್ಟಿಯನ್ನು ಇನ್ನೂ ಪ್ರಕಟಿಸಬೇಕಾಗಿದೆ ಅಂತ ತಿಳಿಸಿದೆ. ಬಿಡುಗಡೆಯಾದಾಗ 10, 12 ನೇ ತರಗತಿಯ ಡೇಟ್ಶೀಟ್ ಅಭ್ಯರ್ಥಿಗಳಿಗೆ CBSE ಯ ಅಧಿಕೃತ ಸೈಟ್ cbse.gov.in ನಲ್ಲಿ ಮತ್ತು cbse.nic.in ನಲ್ಲಿ ಲಭ್ಯವಿರುತ್ತದೆ. ಅಡ್ಮಿಟ್ ಕಾರ್ಡ್ ಅನ್ನು ಸರಿಯಾದ ಸಮಯದಲ್ಲಿ ಬಿಡುಗಡೆ ಮಾಡಲಾಗುತ್ತದೆ. ಬೋರ್ಡ್ ಪ್ರಾಯೋಗಿಕ ಪರೀಕ್ಷೆಗಳನ್ನು ಜನವರಿ 1, 2023 ರಿಂದ ದೇಶ ಮತ್ತು ವಿದೇಶದ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ನಡೆಸುತ್ತದೆ ಅಂತ ಹೇಳಲಾಗಿದೆ, ಆದರೆ ಇದು ಸುಳ್ಳು.
ವೈರಲ್ ಆಗಿರುವ ದಿನಾಂಕಗಳು ಬಹು ಆವೃತ್ತಿಗಳು ನಕಲಿಯಾಗಿದೆ. ಪರೀಕ್ಷೆಯ ವೇಳಾಪಟ್ಟಿಯನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಮತ್ತು ವಿದ್ಯಾರ್ಥಿಗಳು ಮತ್ತು ಪೋಷಕರು ಅಧಿಕೃತ ಮಾಹಿತಿಗಾಗಿ ಕಾಯಬೇಕು” ಎಂದು ಸಿಬಿಎಸ್ಇ ಹಿರಿಯ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
ಫೆಬ್ರವರಿ 15 ರಂದು ಪ್ರಾರಂಭವಾಗಲಿರುವ 10 ನೇ ತರಗತಿ ಮತ್ತು 12 ನೇ ತರಗತಿ ಅಂತಿಮ ಪರೀಕ್ಷೆಗಳಿಗೆ ಮಂಡಳಿಯು ವಿವರವಾದ ದಿನಾಂಕವನ್ನು ಶೀಘ್ರದಲ್ಲೇ ನೀಡಲಿದೆ ಎಂದು CBSE ಅಧಿಕಾರಿ ತಿಳಿಸಿದ್ದಾರೆ.