ಕೊಡಗು: ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆತ ಪ್ರಕರಣ ಸಂಬಂಧ ಕೊಡಗು ಎಸ್ಪಿ ಕ್ಯಾಪ್ಟನ್ ಅಯ್ಯಪ್ಪ ರವರ ತಲೆ ದಂಡ ಫಿಕ್ಸ್ ಎನ್ನಲಾಗುತ್ತಿದೆ. ಖುದ್ದು ಸಿದ್ದರಾಮಯ್ಯವರು ಎಸ್ಪಿ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ಎಸ್ಪಿ ವಿರುದ್ದ ಕಿಡಿಕಾರಿ, ರಾಜ್ಯ ಸರ್ಕಾರ ಹೇಳಿದಂತೆ ನಡೆದುಕೊಳ್ಳುತ್ತಿದ್ದಾರೆ ಅಂಥ ಆರೋಪಿಸಿದ್ದರು. ಇದಲ್ಲದೇ ರಾಜ್ಯ ಪೊಲೀಸ್ ಇಲಾಖೆ ಸಂಘಪರಿವಾರದ ಕೈಗೊಂಬೆಯಾಗಿದೆ. ಪಕ್ಷದ ಪುಂಡರ ಗೂಂಡಾಗಿರಿಗೆ ಅವಕಾಶ ನೀಡಿ, ಕೈಕಟ್ಟಿಕೊಂಡು ತಮಾಷೆ ನೋಡುವ ಪೊಲೀಸರ ಕರ್ತವ್ಯ ಲೋಪ ಖಂಡಿಸಿ ಈ ತಿಂಗಳ 26 ರಂದು ಕೊಡಗಿನ ಎಸ್.ಪಿ ಕಚೇರಿಗೆ ಮುತ್ತಿಗೆ ಹಾಕುತ್ತೇವೆ.
ಬಿಜೆಪಿಯ ಗೂಂಡಾಗಿರಿಗೆ ಹೋರಾಟದ ಮೂಲಕವೇ ತಕ್ಕ ಉತ್ತರ ಕೊಡುತ್ತೇವೆ ಅಂತ ಅವರು ಟ್ವಿಟ್ ಮಾಡಿದ್ದಾರೆ. ಈಗ ಮೊಟ್ಟೆ ಎಸೆದ ವಿವಾದದ ಕೇಸ್ ನೇರವಾಗಿ ಕೊಡಗು ಎಸ್ಪಿ ಕ್ಯಾಪ್ಟನ್ ಅಯ್ಯಪ್ಪ ರವರ ತಲೆ ಬಿಸಿಗೆ ಕಾರಣವಾಗಿದ್ದು, ಖುದ್ದು ಕೊಡಗು ಜಿಲ್ಲೆಯವರಾದ ಅಯ್ಯಪ್ಪರಿಗೆ ಜಿಲ್ಲೆಯ ಬಗ್ಗೆ ಪರಿಚಯವಿದ್ದೇ ಇರುತ್ತದೆ, ಇದೆಲ್ಲ ಗೊತ್ತು ಇದ್ದರು ಕೂಡ ಸುಮ್ಮನೆ ಇರೋದು ಯಾಕೆ ಕಾಂಗ್ರೆಸ್ ನಾಯಕರು ಪ್ರಶ್ನೆ ಮಾಡುತ್ತಿದ್ದಾರೆ.
ರಾಜ್ಯ ಪೊಲೀಸ್ ಇಲಾಖೆ ಸಂಘಪರಿವಾರದ ಕೈಗೊಂಬೆಯಾಗಿದೆ.@BJP4Karnataka ಪಕ್ಷದ ಪುಂಡರ ಗೂಂಡಾಗಿರಿಗೆ ಅವಕಾಶ ನೀಡಿ, ಕೈಕಟ್ಟಿಕೊಂಡು ತಮಾಷೆ ನೋಡುವ ಪೊಲೀಸರ ಕರ್ತವ್ಯ ಲೋಪ ಖಂಡಿಸಿ ಈ ತಿಂಗಳ 26 ರಂದು ಕೊಡಗಿನ ಎಸ್.ಪಿ ಕಚೇರಿಗೆ ಮುತ್ತಿಗೆ ಹಾಕುತ್ತೇವೆ.
ಬಿಜೆಪಿಯ ಗೂಂಡಾಗಿರಿಗೆ ಹೋರಾಟದ ಮೂಲಕವೇ ತಕ್ಕ ಉತ್ತರ ಕೊಡುತ್ತೇವೆ.
— Siddaramaiah (@siddaramaiah) August 19, 2022