ಬೆಂಗಳೂರು : ಶಿವಮೊಗ್ಗದಲ್ಲಿ ಪ್ರೇಮ್ ಸಿಂಗ್ ಗೆ ಚಾಕು ಇರಿತ ಪ್ರಕರಣ ಸಂಬಂಧ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದು, ಮುಸಲ್ಮಾನ್ ಗೂಂಡಾಗಳು ಇರಿದು ಹತ್ಯೆಗೆ ಯತ್ನಿಸಿದ್ದಾರೆ ಎಂದು ಹೇಳಿದ್ದಾರೆ.
BIGG NEWS : ಹುಲಿ ಹೈದರ್ ಗ್ರಾಮದಲ್ಲಿ ಗಲಾಟೆ ಪ್ರಕರಣ : 38 ಮಂದಿ ಅರೆಸ್ಟ್
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ಕೆಲ ಕಿಡಿಗೇಡಿಗಳು ವೀರ ಸಾವರ್ಕರ್ ಗೆ ಮತ್ತೊಮ್ಮೆ ಅವಮಾನ ಮಾಡುವ ವಾತಾವರಣ ಸೃಷ್ಟಿಸಲಾಗಿದೆ. ಪೊಲೀಸರು ಎಲ್ಲರನ್ನೂ ಸಮಾಧಾನ ಮಾಡಿ ಕಳಿಸಿದ್ದರು. ಇಷ್ಟಾದರೂ ಪ್ರೇಮ್ ಸಿಂಗ್ ಎಂಬುವವನ ಮೇಲೆ ಚಾಕು ಇರಿಯಲಾಗಿದೆ ಎಂದರು.
ಮುಸಲ್ಮಾನ್ ಗೂಂಡಾಗಳು ಪ್ರೇಮ್ ಸಿಂಗ್ ಚಾಕು ಇರಿದು ಹತ್ಯೆಗೆ ಯತ್ನಿಸಿದ್ದಾರೆ. ಆರೋಪಿಗಳ ಬಂಧನ ವೇಳೆ ಪೊಲೀಸರಿಂದ ಫೈರಿಂಗ್, ಪ್ರಕರಣದ ಕುರಿತು ನಾನು ಸಿಎಂ ಗಮನಕ್ಕೆ ತಂದಿದ್ದೇನೆ.ಹಿಂದೂಗಳ ಮೇಲೆ ನಡೆಯುತ್ತಿರುವ ಹಲ್ಲೆಗಳು ನಿಲ್ಲುತ್ತಿಲ್ಲ. ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಸಿಎಂಗೆ ಮನವಿ ಮಾಡಿದ್ದೇನೆ ಎಂದು ಹೇಳಿದ್ದಾರೆ.