ಬಳ್ಳಾರಿ : ಪ್ರಸ್ತಕ ಸಾಲಿಗೆ ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಯನ್ನು ಜಾರಿಗೊಳಿಸಲು ಸಹಕಾರಿಗಳಿಗಾಗಿ ಹೊಸ ಸದಸ್ಯರನ್ನು ನೊಂದಾಯಿಸಲು ನೊಂದಣಿಗೆ ಆಹ್ವಾನಿಸಲಾಗಿದೆ ಎಂದು ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯ ಸಹಕಾರ ಸಂಘಗಳ ಉಪ ನಿಬಂಧಕರು ತಿಳಿಸಿದ್ದಾರೆ.
ಸದರಿ ಯೋಜನೆಯ ನೊಂದಣಿಯು ಆರಂಭವಾಗಿದ್ದು, ಕೊನೆಯ ದಿನಾಂಕ ಡಿಸೆಂಬರ್31ರವರೆಗೆ ಇದ್ದು, ಮಾರ್ಗಸೂಚಿಗಳನ್ವಯ ಜಾರಿಯಲ್ಲಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಸಹಕಾರ ಸಂಘಗಳ ಉಪ ನಿಬಂಧಕರವರ ಕಾರ್ಯಾಲಯ ಅಥವಾ ದೂ.08392-272635ಗೆ ಸಂರ್ಪಕಿಸಬಹುದು ಎಂದು ಅವರು ತಿಳಿಸಿದ್ದಾರೆ.