ಮುಂಬೈ : ಮಹಿಳೆಯೊಬ್ಬರ ಮನವಿಯ ಮೇರೆಗೆ ಮಹಾರಾಷ್ಟ್ರದ ಬಾಂಬೆ ಹೈಕೋರ್ಟ್, ವೈವಾಹಿಕ ವಿವಾದ ಪ್ರಕರಣವನ್ನ ಪುಣೆಯಿಂದ ಮುಂಬೈಗೆ ವರ್ಗಾಯಿಸುವಾಗ, ಕಾನೂನು ಮಹಿಳೆಯರನ್ನ ಸಮಾಜದ ದುರ್ಬಲ ವರ್ಗ ಎಂದು ಪರಿಗಣಿಸುತ್ತದೆ ಎಂದು ಹೇಳಿದೆ. ಅದಕ್ಕಾಗಿಯೇ ಅವ್ರಿಗೆ ಹೆಚ್ಚಿನ ರಕ್ಷಣೆ ನೀಡಬೇಕಾಗಿದೆ. ಅದ್ರಂತೆ, ಅವರ ಅನಾನುಕೂಲತೆಗಳಿಗೂ ಆದ್ಯತೆ ನೀಡಬೇಕು ಎಂದಿದೆ.
ವೈವಾಹಿಕ ವಿವಾದದಲ್ಲಿ ಕೋರ್ಟ್ ಆದೇಶ
ಆಗಸ್ಟ್ 17ರಂದು, ನ್ಯಾಯಮೂರ್ತಿ ಎಸ್ಎಂ ಮೋದಕ್ ಅವ್ರ ಏಕ ಪೀಠವು ಮಹಿಳೆ ಮತ್ತು ಆಕೆಯ ಪತಿಯ ಎರಡು ಅರ್ಜಿಗಳ ಕುರಿತು ಆದೇಶವನ್ನ ನೀಡಿತು. ಸೋಮವಾರ ಈ ಆದೇಶದ ಪ್ರತಿ ಲಭ್ಯವಾಗಿದೆ. ವೈವಾಹಿಕ ವಿವಾದದಲ್ಲಿ ಸಿಲುಕಿರುವ ದಂಪತಿ ಪುಣೆ ಮತ್ತು ಥಾಣೆಯ ಸ್ಥಳೀಯ ನ್ಯಾಯಾಲಯಗಳಲ್ಲಿ ಎರಡು ಅರ್ಜಿಗಳನ್ನು ಸಲ್ಲಿಸಿದ್ದರು.
ವಿಷಯ ಏನೆಂದು ತಿಳಿಯಿರಿ.!
ಪುಣೆ ನಿವಾಸಿ ಪತಿ ಥಾಣೆಯಲ್ಲಿ ಸಲ್ಲಿಸಿದ ಅರ್ಜಿಯನ್ನ ವರ್ಗಾಯಿಸಲು ಬಯಸಿದ್ದರು ಮತ್ತು ಮುಂಬೈ ಮಹಿಳೆ ಪ್ರಕರಣವನ್ನ ಪುಣೆಯಿಂದ ಠಾಣೆಗೆ ವರ್ಗಾಯಿಸಲು ಬಯಸಿದ್ದರು. ತಾಯಿ ಮತ್ತು ಸಹೋದರಿಯ ಸಹಾಯದಿಂದ ಇಬ್ಬರು ಅಪ್ರಾಪ್ತ ಮಕ್ಕಳನ್ನ ನೋಡಿಕೊಳ್ಳುತ್ತಿರುವುದಾಗಿ ಪತಿ ತಿಳಿಸಿದ್ದಾರೆ. ಹಾಗಾಗಿ ಮತ್ತೆ ಮತ್ತೆ ಠಾಣೆಗೆ ಹೋಗುವಂತಿಲ್ಲ. ಆದ್ರೆ, ಪತ್ನಿ ತಾನು ನಿರುದ್ಯೋಗಿಯಾಗಿದ್ದು, ಪುಣೆಗೆ ತೆರಳಲು ಸಾಧ್ಯವಿಲ್ಲ ಎಂದು ಅರ್ಜಿಯಲ್ಲಿ ತಿಳಿಸಿದ್ದಾರೆ.
ನ್ಯಾಯಾಧೀಶರು ಮಹಿಳೆಯ ಪರವಾಗಿ ತೀರ್ಪು
ಈ ಕುರಿತು ಮಹಿಳೆಯ ಪರವಾಗಿ ತೀರ್ಪು ನೀಡಿದ ನ್ಯಾಯಾಧೀಶ ಮೋದಕ್, ಪತಿ ಮತ್ತು ಅವ್ರ ಕುಟುಂಬವು ಮಕ್ಕಳ ಆರೈಕೆಯನ್ನ ಹೊರತುಪಡಿಸಿ ಯಾವುದೇ ಕಾರಣವನ್ನ ನೀಡದ ಕಾರಣ ಅರ್ಜಿದಾರರ ಮಹಿಳೆಯ ಅನಾನುಕೂಲತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಹೇಳಿದರು. ಮಹಿಳೆಯರನ್ನ ದುರ್ಬಲ ವರ್ಗದಿಂದ ಪರಿಗಣಿಸಲಾಗುತ್ತದೆ ಮತ್ತು ಅವರಿಗೆ ಹೆಚ್ಚಿನ ರಕ್ಷಣೆಯ ಅಗತ್ಯವಿದೆ.
ಮತ್ತೊಂದು ಪ್ರಕರಣದಲ್ಲಿ, ಬಾಂಬೆ ಹೈಕೋರ್ಟ್ ಹುಡುಗನೊಂದಿಗಿನ ಹುಡುಗಿಯ ಸ್ನೇಹವನ್ನ ಲೈಂಗಿಕ ಸಂಬಂಧಗಳಿಗೆ ಒಪ್ಪಿಗೆ ಎಂದು ಅರ್ಥೈಸಲಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿದೆ. ವಿವಾಹದ ನೆಪದಲ್ಲಿ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದ ಆರೋಪಿಯ ಬಂಧನ ಪೂರ್ವ ಜಾಮೀನು ಅರ್ಜಿಯನ್ನ ನ್ಯಾಯಾಲಯ ತಿರಸ್ಕರಿಸಿದೆ. ನ್ಯಾಯಮೂರ್ತಿ ಭಾರತಿ ಡಾಂಗ್ರೆ ನೇತೃತ್ವದ ಏಕ ಪೀಠ ಈ ವಿಷಯ ತಿಳಿಸಿದೆ. ಮದುವೆಯ ನೆಪದಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಆರೋಪಿ ನಗರದ ನಿವಾಸಿ ಆಶಿಶ್ ಚಕೋರ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನ ಅವ್ರು ತಿರಸ್ಕರಿಸಿದ್ದರು.