ಚಿಕ್ಕಮಗಳೂರು : ಕಾಡಾನೆ ದಾಳಿಯಿಂದ ಮಹಿಳೆ ಸಾವಿಗೀಡಾದ ಪ್ರದೇಶಕ್ಕೆ ತೆರಳಿದ್ದ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಮೇಲೆ ಗುಂಪೊಂದು ದಾಳಿ ನಡೆಸಿದ್ದು, ಅವರ ಬಟ್ಟೆಯನ್ನೂ ಹರಿದು ಹಾಕಿರುವ ಆರೋಪ ಕೇಳಿಬಂದಿದೆ.
Budget 2023-24: ಇಂದಿನಿಂದ ತಜ್ಞರೊಂದಿಗೆ ʻಬಜೆಟ್ ಪೂರ್ವ ಸಮಾಲೋಚನೆʼ ನಡೆಸಲಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
ಮೂಡಿಗೆರೆ ತಾಲೂಕು ಕುಂದೂರು ಸಮೀಪದ ಹುಲ್ಲೆಮನೆ ಗ್ರಾಮದ ಶೋಭಾ (45) ಕಾಡಾನೆ ದಾಳಿಯಿಂದ ಭಾನುವಾರ ಬೆಳಗ್ಗೆ ಮೃತಪಟ್ಟಿದ್ದು, ಸ್ಥಳಕ್ಕೆ ತಡವಾಗಿ ಬಂದ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರ ಮೇಲೆ ಹಲ್ಲೆ ಮಾಡಿ ಬಟ್ಟೆಯನ್ನು ಹರಿದಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
ಪುಣೆ: ಬ್ರೇಕ್ ಫೇಲ್ ಆಗಿ 40ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿಯೊಡೆದ ಟ್ಯಾಂಕರ್, 30 ಮಂದಿಗೆ ಗಾಯ
ಕಾಡಾನೆ ದಾಳಿಯಿಂದಾಗಿ ಶೋಭಾ ಮೃತಪಟ್ಟಿದ್ದರು. ಘಟನೆ ಬೆಳಗ್ಗೆ ನಡೆದಿದ್ದರೂ ಕ್ಷೇತ್ರದ ಶಾಸಕ ಎಂ.ಪಿ.ಕುಮಾರಸ್ವಾಮಿ ಸಂಜೆ ಗ್ರಾಮಕ್ಕೆ ಬಂದಿದ್ದಾರೆ. ಈ ವೇಳೆ ಗ್ರಾಮಸ್ಥರು ಆಕ್ರೋಶಗೊಂಡು ಶಾಸಕ ಕುಮಾರಸ್ವಾಮಿ ಅವರಿಗೆ ಘೇರಾವ್ ಹಾಕಿದಲ್ಲದೆ. ಗ್ರಾಮದ ಮುಖ್ಯರಸ್ತೆಯಲ್ಲಿ ಅಟ್ಟಾಡಿಸಿಕೊಂಡು ಬಂದಿದ್ದಾರೆ. ತೀವ್ರ ಅಕ್ರೋಶಗೊಂಡಿದ್ದ ಕೆಲ ಗ್ರಾಮಸ್ಥರು ಅವಾಚ್ಯ ಶಬ್ಧಗಳಿಂದ ನಿಂದಿಸಿದಲ್ಲದೆ. ಶಾಸಕರನ್ನು ಹಿಡಿದು ಎಳೆದಾಡಿದ್ದಾರೆ.
ಆನೆ ದಾಳಿಯಿಂದ ಮೃತಪಟ್ಟ ಮಹಿಳೆಯ ಮೃತದೇಹವನ್ನು ವೀಕ್ಷಿಸಲು ತೆರಳಿದ ವೇಳೆ ನನ್ನ ಮೇಲೆ ಗ್ರಾಮಸ್ಥರು ಆಕ್ರೋಶಗೊಂಡಿದ್ದು, ಪ್ರತಿಭಟನಾ ನಿರತರು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ಇದು ವ್ಯವಸ್ಥಿತ ಪಿತೂರಿತಯಾಗಿದೆ. ನಮ್ಮದೇ ಸರ್ಕಾರದ ಪೊಲೀಸ್ ಇಲಾಖೆ ನನಗೆ ರಕ್ಷಣೆ ನೀಡುವಲ್ಲಿ ವಿಫಲವಾಗಿದೆ ಎಂದು ವಿಡಿಯೋನಲ್ಲಿ ಕುಮಾರಸ್ವಾಮಿ ದೂರಿದ್ದಾರೆ.