ಬೆಂಗಳೂರು : ಪಿಎಸ್ ಐ ನೇಮಕಾತಿ ಹಗರಣದಲ್ಲಿ ಬಿಜೆಪಿ ಶಾಸಕರೇ ಬ್ರೋಕರ್ ನಂತೆ ಪಿಎಸ್ ಐ ಡೀಲ್ ಕುದುರಿಸಲು ಹೋಗಿ ಸಿಕ್ಕಿಬಿದ್ದರೂ, ಚಕಾರವೇ ಎತ್ತುತ್ತಿಲ್ಲ ಎಂದು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಪ್ರಿಯಾಂಕ್ ಖರ್ಗೆ, 40% ಸರ್ಕಾರ ತನ್ನ ನಿಜ ಬಣ್ಣ ತೋರಿಸುವ ಮುನ್ನ ನಾಡಿನ ಜನರಿಗೆ ಕೊಟ್ಟಿದ್ದ “ಲಾಲಿ ಪಾಪ್” ಒಂದೇ ಎರಡೇ? ಜ್ಯದಲ್ಲಿ ಭ್ರಷ್ಟಾಚಾರ ಮುಗಿಸಲು ಪಣ ತೊಟ್ಟಿದ್ದೇವೆ ಎಂದಿದ್ದ ಬಿಜೆಪಿ ಈಗ ಸ್ವತಃ ತನ್ನ ಶಾಸಕರೇ ಬ್ರೋಕರ್ ನಂತೆ PSI ಡೀಲ್ ಕುದುರಿಸಲು ಹೋಗಿ ಸಿಕ್ಕಿ ಬಿದ್ದಿದ್ದರೂ, ಚಕಾರವೇ ಎತ್ತುತ್ತಿಲ್ಲಾ ಯಾಕೆ?ಎಂದು ಪ್ರಶ್ನಿಸಿದ್ದಾರೆ.
40% ಸರ್ಕಾರ ತನ್ನ ನಿಜ ಬಣ್ಣ ತೋರಿಸುವ ಮುನ್ನ ನಾಡಿನ ಜನರಿಗೆ ಕೊಟ್ಟಿದ್ದ “ಲಾಲಿ ಪಾಪ್” ಒಂದೇ ಎರಡೇ?
ರಾಜ್ಯದಲ್ಲಿ ಭ್ರಷ್ಟಾಚಾರ ಮುಗಿಸಲು ಪಣ ತೊಟ್ಟಿದ್ದೇವೆ ಎಂದಿದ್ದ ಬಿಜೆಪಿ
ಈಗ ಸ್ವತಃ ತನ್ನ ಶಾಸಕರೇ ಬ್ರೋಕರ್ ನಂತೆ PSI ಡೀಲ್ ಕುದುರಿಸಲು ಹೋಗಿ ಸಿಕ್ಕಿ ಬಿದ್ದಿದ್ದರೂ, ಚಕಾರವೇ ಎತ್ತುತ್ತಿಲ್ಲಾ ಯಾಕೆ?#NimHatraIdyaUttara pic.twitter.com/VtCktPgdwg
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) September 13, 2022
ಪಿಎಸ್ ಐ ನೇಮಕಾತಿ ಹಗರಣದ ಕುರಿತ ಬಿಜೆಪಿ ಶಾಸಕ ಬಸವರಾಜ ದಡೇಗಸುಗೂರು ಅವರ ಆಡಿಯೋ ವೈರಲ್ ಆದ ಬೆನ್ನಲ್ಲೇ ನಿನ್ನೆ ಕಾಂಗ್ರೆಸ್ ನಾಯಕರು ಫೋಟೋ ಸಾಕ್ಷ್ಯ ಬಿಡುಗಡೆ ಮಾಡಿದ್ದಾರೆ.