ನವದೆಹಲಿ : ಇವ್ರು ಎಂದಿಗೂ ಕಾಲೇಜಿಗೆ ಹೋಗಿ ಕಲಿತವರಲ್ಲ, 2005ರಲ್ಲಿ ಪತಿ ನಿಧನರಾದ ನಂತ್ರವೇ ಹೊರ ಪ್ರಪಂಚಕ್ಕೆ ಕಾಲಿಟ್ಟವರು. ನಂತ್ರ ತನ್ನ ಪತಿಯ ಎಲ್ಲ ವ್ಯವಹಾರ ವಹಿಸಿಕೊಂಡು, ಯಶಸ್ವಿ ಉದ್ಯಮಿಯಾದ್ರು. ಇಷ್ಟಕ್ಕೂ ಯಾರಿವ್ರು? ಇವ್ರೇ ದಿ ಗ್ರೇಟ್ ಒಪಿ ಜಿಂದಾಲ್ ಗ್ರೂಪ್ನ ಅಧ್ಯಕ್ಷೆ ಸಾವಿತ್ರಿ ಜಿಂದಾಲ್.
ಸಾವಿತ್ರಿ ಜಿಂದಾಲ್ ಕೇವಲ ಎರಡು ವರ್ಷಗಳಲ್ಲಿ ತಮ್ಮ ಆಸ್ತಿಗೆ 12 ಬಿಲಿಯನ್ ಡಾಲರ್ ಸೇರಿಸಿದ ನಂತ್ರ ಭಾರತದ ಅತ್ಯಂತ ಶ್ರೀಮಂತ ಮಹಿಳೆಯ ಸ್ಥಾನವನ್ನ ಉಳಿಸಿಕೊಳ್ಳಲು ಯಶಸ್ವಿಯಾಗಿದ್ದಾರೆ. 18 ಬಿಲಿಯನ್ ಡಾಲರ್ ನಿವ್ವಳ ಆಸ್ತಿ ಹೊಂದಿರುವ ಸಾವಿತ್ರಿ ಜಿಂದಾಲ್, ಫೋರ್ಬ್ಸ್ ಇಂಡಿಯಾದ ಶ್ರೀಮಂತರ ಪಟ್ಟಿಯಲ್ಲಿ 2021ರಲ್ಲಿ ಏಳನೇ ಸ್ಥಾನದಲ್ಲಿದ್ದಾರೆ. ಫೋರ್ಬ್ಸ್ ಬಿಲಿಯನೇರ್ಸ್ ಪಟ್ಟಿಯಲ್ಲಿ 91ನೇ ಸ್ಥಾನದಲ್ಲಿದ್ದಾರೆ.
ಸಾವಿತ್ರಿ ಜಿಂದಾಲ್ ಅವ್ರು 2020ರಲ್ಲಿ ಸುಮಾರು 4.8 ಬಿಲಿಯನ್ ಡಾಲರ್ನಿಂದ 2022 ರಲ್ಲಿ 17.7 ಬಿಲಿಯನ್ ಡಾಲರ್ಗೆ ಕಳೆದ ಎರಡು ವರ್ಷಗಳಲ್ಲಿ ಮೂರು ಪಟ್ಟು ಹೆಚ್ಚು ಸಂಪತ್ತನ್ನ ಹೊಂದಿದ್ದಾರೆ. 2019 ರಿಂದ 2020ರವರೆಗೆ, ಜಿಂದಾಲ್ ಅವ್ರ ಸಂಪತ್ತು ಎರಡು ವರ್ಷಗಳಲ್ಲಿ ಶೇಕಡಾ 50ರಷ್ಟು ಕುಸಿದಿದೆ. ಅವರ ನಿವ್ವಳ ಮೌಲ್ಯವು 2018ರಲ್ಲಿ 8.8 ಬಿಲಿಯನ್ ಡಾಲರ್ನಿಂದ 2019ರಲ್ಲಿ 5.9 ಬಿಲಿಯನ್ ಡಾಲರ್ಗೆ ಮತ್ತು 2020ರಲ್ಲಿ 4.8 ಬಿಲಿಯನ್ ಡಾಲರ್ಗೆ ಇಳಿದಿದೆ. ಆದರೆ ಕಳೆದ ಎರಡು ವರ್ಷಗಳಲ್ಲಿ, ಸಾವಿತ್ರಿ ಜಿಂದಾಲ್ ಉಕ್ಕಿನ ದೈತ್ಯನಲ್ಲಿ ತನ್ನ ನಾಯಕತ್ವದೊಂದಿಗೆ ಬೆರಗುಗೊಳಿಸುವ ಪುನರಾಗಮನವನ್ನ ಮಾಡಿದರು.
ಬಿಸಿನೆಸ್ ಮ್ಯಾಗ್ನೆಟ್ ಜಗತ್ತಿಗೆ ಹೇಳಲು ಅಸಾಧಾರಣ ಕಥೆಯನ್ನ ಹೊಂದಿದ್ದಾರೆ. ಯಾಕಂದ್ರೆ, ಇವ್ರು ಎಂದಿಗೂ ಕಾಲೇಜಿಗೆ ಹೋಗಲು ಆಭ್ಯಸಿಸಿಲ್ಲ. ಆದ್ರೆ, ಅವ್ರ ಶಿಕ್ಷಣವು ತನ್ನ ಕಂಪನಿಯ ಯಶಸ್ಸನ್ನ ಸುಗಮಗೊಳಿಸಲು ಅಡ್ಡಿಯಾಗಲಿಲ್ಲ. ಜಿಂದಾಲ್ ಕುಟುಂಬದ ಮಾತೃಪ್ರಧಾನರ ನಾಯಕತ್ವದಲ್ಲಿ, ಒಪಿ ಜಿಂದಾಲ್ ಗ್ರೂಪ್ ತನ್ನ ಆದಾಯವನ್ನ ನಾಲ್ಕು ಪಟ್ಟು ಹೆಚ್ಚಿಸಿಕೊಂಡಿತು. 2005ರಲ್ಲಿ ಅವರ ಪತಿ ಓಂ ಪ್ರಕಾಶ್ ಜಿಂದಾಲ್ ಅವರು ಹೆಲಿಕಾಪ್ಟರ್ ಅಪಘಾತದಲ್ಲಿ ನಿಧನರಾದ ಕೆಲವೇ ವರ್ಷಗಳಲ್ಲಿ ಇದನ್ನ ಸಾಧಿಸಲಾಯ್ತು.
ಅಂದ್ಹಾಗೆ, ಓಂ ಪ್ರಕಾಶ್ ಜಿಂದಾಲ್ ತಮ್ಮ 55 ವರ್ಷದವರಾಗಿದ್ದಾಗ ನಿಧನರಾದರು. ಅಂದಿನಿಂದ, ಸಾವಿತ್ರಿ ಜಿಂದಾಲ್ ತನ್ನ ಪತಿಯ ವ್ಯವಹಾರದ ಪ್ರತಿಯೊಂದು ಜವಾಬ್ದಾರಿಯನ್ನ ವಹಿಸಿಕೊಂಡರು. ಇನ್ನಿವ್ರು ಎಂದಿಗೂ ತಮ್ಮ ವಯಸ್ಸಿನ ಬಗ್ಗೆ ಕಾಳಜಿ ವಹಿಸಲಿಲ್ಲ. ಇನ್ನು ಒಂದು ಕಾಲಕ್ಕೆ ಕೇವಲ ತಾಯಿ ಮತ್ತು ಪತ್ನಿಯಾಗಿದ್ದ ಒಪಿ ಜಿಂದಾಲ್ ಗ್ರೂಪ್ ಅಧ್ಯಕ್ಷರಿಗೆ ಇದು 360 ಡಿಗ್ರಿ ಬದಲಾವಣೆಯಾಗಿತ್ತು. ಒಮ್ಮೆ ಫೋರ್ಬ್ಸ್ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವ್ರು, “ನಾವು ಮನೆಯ ಉಸ್ತುವಾರಿಯನ್ನ ನೋಡಿಕೊಳ್ಳುತ್ತೇವೆ. ಆದ್ರೆ, ಪುರುಷರು ಹೊರಗಿನ ಎಲ್ಲವನ್ನೂ ನೋಡಿಕೊಳ್ಳುತ್ತಾರೆ” ಎಂದು ಹೇಳಿದ್ದರು.
ಒ.ಪಿ.ಜಿಂದಾಲ್ ಅವರ ಸಾವು ಸಾವಿತ್ರಿಯವ್ರ ಜೀವಕ್ಕೆ ದೊಡ್ಡ ತಿರುವು ನೀಡಿತ್ತು. ನಂತ್ರ ಮನೆಯಿಂದ ಹೊರಬಂದದ್ದು ಮಾತ್ರವಲ್ಲದೇ, ದೇಶದ ಅತ್ಯಂತ ಶ್ರೀಮಂತ ಮಹಿಳೆಯೂ ಆದ್ರು. ಫೋರ್ಬ್ಸ್ʼನ ಭಾರತದ ಅತ್ಯಂತ ಶ್ರೀಮಂತ ಮಹಿಳೆಯರ ಪಟ್ಟಿಯಲ್ಲಿ ಕಿರಣ್ ಮಜುಂದಾರ್ ಮತ್ತು ಕೃಷ್ಣ ಗೋದ್ರೆಜ್ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದಾರೆ.
ಒಂಬತ್ತು ಮಕ್ಕಳ ತಾಯಿ ಸಾವಿತ್ರಿ ಜಿಂದಾಲ್ ಅವರಿಗೆ ಒಪಿ ಜಿಂದಾಲ್ ಅವರೊಂದಿಗೆ ಪೃಥ್ವಿರಾಜ್, ಸಜ್ಜನ್, ರತನ್ ಮತ್ತು ನವೀನ್ ಜಿಂದಾಲ್ ಎಂಬ ನಾಲ್ವರು ಗಂಡು ಮಕ್ಕಳಿದ್ದಾರೆ. ಅವರ ಪತಿಯ ಮರಣದ ನಂತರ, ಗುಂಪಿನ ಕಂಪನಿಗಳನ್ನ ನಾಲ್ಕು ಗಂಡುಮಕ್ಕಳಿಗೆ ಹಂಚಲಾಯಿತು, ಸಜ್ಜನ್ ಜಿಂದಾಲ್ ಜೆಎಸ್ಡಬ್ಲ್ಯೂ ಸ್ಟೀಲ್ ಸೇರಿದಂತೆ ಅತಿದೊಡ್ಡ ಆಸ್ತಿಯನ್ನ ಸ್ವಾಧೀನಪಡಿಸಿಕೊಂಡರು.
1950 ರಲ್ಲಿ ಅಸ್ಸಾಂನ ತಿನ್ಸುಕಿಯಾದಲ್ಲಿ ಜನಿಸಿದ ಸಾವಿತ್ರಿ ಜಿಂದಾಲ್ ವ್ಯವಹಾರದ ಹೊರತಾಗಿ ರಾಜಕೀಯದಲ್ಲಿಯೂ ವೃತ್ತಿಜೀವನವನ್ನು ಹೊಂದಿದ್ದಾರೆ. ಒಪಿ ಜಿಂದಾಲ್, ಹರಿಯಾಣ ಸರ್ಕಾರದಲ್ಲಿ ಸಚಿವರಾಗಿದ್ದರು ಮತ್ತು ಹಿಸಾರ್ ಕ್ಷೇತ್ರದಿಂದ ಹರಿಯಾಣ ವಿಧಾನಸಭೆಯ ಸದಸ್ಯರಾಗಿದ್ದರು ಮತ್ತು ಅವ್ರ ನಿಧನದ ನಂತರ ಸಾವಿತ್ರಿ ಜಿಂದಾಲ್ 2005ರಲ್ಲಿ ಹಿಸಾರ್ ಕ್ಷೇತ್ರದಿಂದ ಹರಿಯಾಣ ವಿಧಾನಸಭೆಗೆ ಆಯ್ಕೆಯಾದರು. ಅವ್ರು ಈಗ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ʼನ ಸದಸ್ಯರಾಗಿದ್ದಾರೆ.