ಬೆಂಗಳೂರು : ಅಪಘಾತದ ಪ್ರಕರಣದಲ್ಲಿ ಜಪ್ತಿಯಾದ ವಾಹನಗಳ ಮಾಲೀಕರಿಗೆ ಸಿಹಿಸುದ್ದಿಯೊಂದು ಸಿಕ್ಕಿದ್ದು, ಇನ್ಮುಂದೆ ಅಪಘಾತ ಪ್ರಕರಣ ಇರುವ ವಾಹನಗಳ ಮಾಲೀಕರು ತಮ್ಮ ವಾಹನಗಳನ್ನು 24 ಗಂಟೆಗಳಲ್ಲಿ ಪಡೆಹುಬುದು.
ಅಪಘಾತವಾದ ವಾಹನಗಳನ್ನು 24 ಗಂಟೆಗಳಲ್ಲಿ ರಿಪೋರ್ಟ್ ಮಾಡಿ ಮಾಲೀಕರಿಗೆ ವಾಹನಗಳನ್ನು ವಾಪಸ್ ನೀಡುವಂತೆ ಟ್ರಾಫಿಕ್ ಸ್ಪೆಷಲ್ ಕಮಿಷನರ್ ಡಾ.ಸಲೀಂ ಆದೇಶ ನೀಡಿದ್ದಾರೆ.
ಅಪಘಾತವಾದ ವಾಹನಗಳನ್ನು ಆರ್ ಟಿಒದಿಂದ ಪರಿಶೀಲನೆ ನಡೆಸಿದ ಬಳಿಕ ಮೆಕಾನಿಕಲ್ ತೊಂದರೆ ಆಗಿದ್ದರೆ ಅದನ್ನು ರಿಪೋರ್ಟ್ ಮಾಡಿ ನಂತರ ಸಿಬ್ಬಂದಿ ಮಾಲೀಕರಿಗೆ ಸೂಚನೆ ನೀಡಿ, ಮುಚ್ಚಳಿಕೆ ಬರೆಸಿಕೊಂಡು 24 ಗಂಟೆಯಲ್ಲೇ ವಾಹನಗಳನ್ನು ಮಾಲೀಕರಿಗೆ ನೀಡಲಾಗುತ್ತದೆ. ಅಪಘಾತವಾದ ವಾಹನಗಳನ್ನು ಠಾಣೆ ಮುಂದೆ ಇಟ್ಟುಕೊಳ್ಳದೇ 24 ಗಂಟೆಯಲ್ಲಿ ಪರಿಶೀಲಿಸಿ ವಾಪಸ್ ನೀಡಲಾಗುತ್ತದೆ ಎಂದು ಟ್ರಾಫಿಕ್ ಸ್ಪೆಷಲ್ ಕಮಿಷನರ್ ಡಾ.ಸಲೀಂ ಮಾಹಿತಿ ನೀಡಿದ್ದಾರೆ.